ಪುಳಿತ್ತಡಿ: ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

pulithadyಊರವರು, ಮಕ್ಕಳ ಪೋಷಕರು ಮನಸ್ಸು ಮಾಡಿದರೆ ಸರಕಾರಿ ಶಾಲೆಗಳ ಉಳಿವು: ಶಕುಂತಳಾ ಶೆಟ್ಟಿ

ಉಪ್ಪಿನಂಗಡಿ: ಊರವರು, ಮಕ್ಕಳ ಪೋಷಕರು ಮನಸ್ಸು ಮಾಡಿದಾಗ ಮಾತ್ರ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ. ಇದಕ್ಕಾಗಿ ಪ್ರತಿಯೋರ್ವರಿಂದ ಪ್ರಯತ್ನ ಸಾಗಬೇಕು ಎಂದು ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದರು.

ಇಲ್ಲಿನ ಪುಳಿತ್ತಡಿಯ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಠ ಇದರ ವಾರ್ಷಿಕೋತ್ಸವ ಹಾಗೂ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅನುದಾನದಿಂದ ಕಾಂಕ್ರಿಟರಣಗೊಂಡಿರುವ ಶಾಲಾ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸರಕಾರಿ ಶಾಲೆಗಳೆಂದರೆ ಕೀಳರಿಮೆ ಸಲ್ಲದು. ಸರಕಾರಿ ಶಾಲೆಯಲ್ಲಿ ಕಲಿತ ಹಲವರಿಂದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಆದ್ದರಿಂದ ಮಕ್ಕಳು ವಿದ್ಯಾರ್ಥಿ ಹಂತದಲ್ಲಿಯೇ ಸಾಧಕರಾಗುವ ಕನಸು ಕಾಣುವುದರೊಂದಿಗೆ, ಗುರಿ ಮುಟ್ಟುವ ಪ್ರಯತ್ನ ನಡೆಸಬೇಕು. ಪರಿಶ್ರಮ, ಪ್ರಯತ್ನವಿದ್ದಾಗ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.

ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಯು.ಕೆ. ಇಬ್ರಾಹಿಂ, ಯೋಗಿನಿ, ಸುನೀಲ್ ಕುಮಾರ್ ದಡ್ಡು, ಜಮೀಳಾ, ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳ, ಉಪ್ಪಿನಂಗಡಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಅನಂತ ಕೆ., ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಶಾಂತಿಕಿರಣ, ಆಲಂತಾಯ ಶಾಲೆಯ ಮುಖ್ಯಗುರು ಸಾಂತಪ್ಪ ಗೌಡ, ಕೋಡಿಂಬಾಡಿ ಶಾಲಾ ಸಹ ಶಿಕ್ಷಕಿ ಪದ್ಮಾವತಿ ಕೆ., ವಿದ್ಯಾರ್ಥಿ ನಾಯಕ ಕೌಶಿಕ್ ಸಿ.ಬಿ. ಉಪಸ್ಥಿತರಿದ್ದರು.

ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ವೈ. ಸಾಂತಪ್ಪ ಗೌಡ ಹಾಗೂ ಪದ್ಮಾವತಿ ಕೆ. ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೇಶವ ಗೌಡ ರಂಗಾಜೆ ಧ್ವಜಾರೋಹಣಗೈದರು.

ಪ್ರಭಾರ ಮುಖ್ಯಗುರು ವಿಶ್ವೇಶ್ವರ ವರದಿ ವಾಚಿಸಿದರು. ಶಿಕ್ಷಕಿಯರಾದ ಪುನಂತೇಶ್ವರಿ ಕೆ.ಎನ್. ವಂದಿಸಿದರು. ಪುಷ್ಪಾವತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರುಕ್ಮಿಣಿ, ರತ್ನಾವತಿ, ಹೇಮಲತಾ, ಪೂರ್ಣಿಮಾ ಸಹಕರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.