HomePage_Banner
HomePage_Banner
HomePage_Banner
HomePage_Banner

ಕುರಿಕ್ಕಾರ ಮೋರಿ, ತಡೆಗೋಡೆ ರಚನೆಗೆ ಗುದ್ದಲಿಪೂಜೆ

Puttur_Advt_NewsUnder_1
Puttur_Advt_NewsUnder_1

kurikkaraಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕುರಿಕ್ಕಾರ ಎಂಬಲ್ಲಿ ಮೋರಿ ತಡೆಗೋಡೆ ರಚನೆಗೆ ದ.22ರಂದು ಗುದ್ದಲಿಪೂಜೆ ನೆರವೇರಿಸಲಾಯಿತು. ತಾಲೂಕು ಪಂಚಾಯತು ಅನುದಾನ 90ಸಾವಿರ ರುಪಾಯಿಗಳಲ್ಲಿ ಈ ಕಾಮಗಾರಿ ನಡೆಯಲಿದ್ದು, ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್‌ರವರು ತೆಂಗಿನ ಕಾಯಿ ಒಡೆದು ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಯಲ್ಲಿ ನನ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯತು ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ,ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರುಗಳಾದ ವಿಜಯ ಕುಮಾರ್ ರೈ ಕೋರಂಗ, ಕೃಷ್ಣ ಕುಮಾರ್ ರೈ, ಪುಷ್ಪಾ ಬೋಳೋಡಿ, ಚಂದ್ರಹಾಸ ರೈ ಬೋಳೋಡಿ, ಕೆದಂಬಾಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರತನ್ ರೈ ಕುಂಬ್ರ, ಕೆಎಂಎಫ್ ನಿರ್ದೇಶಕಿ ವೀಣಾ ರೈ, ಕಾಂಗ್ರೆಸ್ ಬ್ಲಾಕ್ ಸಮಿತಿ ಸದಸ್ಯ ಪುರಂದರ ರೈ ಕೋರಿಕ್ಕಾರು, ಇಂಜಿನಿಯರ್ ಶುತಿ, ಸ್ಥಳೀಯರಾದ ಸುಮತಿ, ಕಮಲ, ಸಂತೋಷ್, ಲೋಕೇಶ್, ಶಕ್ತಿ ಸ್ಟೋರ್‌ನ ಸುಬ್ರಾಯ ಭಟ್, ಸುಮನಾ ಭಟ್, ನೀತಿತಾ ರೈ, ಅಂತಪ್ಪ ಪೂಜಾರಿ, ಬಾಲಕೃಷ್ಣ ರೈ ಕುರಿಕ್ಕಾರ, ಭವಿತ್ ರೈ, ಬಾಲಕೃಷ್ಣ ರೈ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ 2 ನೇ ಬೂತ್ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಸಿಬ್ಬಂದಿ ಜಯಂತ ಮೇರ್ಲ ಸಹಕರಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.