Breaking News

ಕಲ್ಲೇಗ: ಹಿಂದೂ ಧರ್ಮಜಾಗೃತಿ ಸಭೆಯ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

kallegaಪುತ್ತೂರು: ಹಿಂದೂ ಜನಜಾಗೃತಿ ಸಮಿತಿ ಹಾಗೂ ಸ್ಥಳೀಯ ಹಿಂದುತ್ವವಾದಿ ಸಂಘಟನೆಗಳ ವತಿಯಿಂದ ಜ6ರಂದು ಕಲ್ಲೇಗದ ’ಭಾರತ್ ಮಾತಾ ಸಭಾಭವನ’ದಲ್ಲಿ ನಡೆಯಲಿರುವ “ಹಿಂದೂ ಧರ್ಮಜಾಗೃತಿ ಸಭೆ”ಯ ಪೂರ್ವಸಿಧ್ದತೆ ಹಾಗೂ ಆಯೋಜನೆಯ ಬಗ್ಗೆ 2 ನೇ ಹಂತದ ಪೂರ್ವಭಾವಿ ಸಭೆ ದ.23ರಂದು ಭಾರತ್ ಮಾತಾ ಸಭಾಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ನಡೆಯಿತು. ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ್ ಇವರು ಮಾತನಾಡುತ್ತಾ, ಸಮಾಜ ಜಾಗೃತಿ, ರಾಷ್ಟ್ರಜಾಗೃತಿ ಹಾಗೂ ಧರ್ಮರಕ್ಷಣೆಗಾಗಿ ಈ ಹಿಂದೂ ಧರ್ಮಜಾಗೃತಿ ಸಭೆಯನ್ನು ದೇಶದಾದ್ಯಂತ ಒಟ್ಟು 1,150ಕ್ಕೂ ಹೆಚ್ಚು ಕಡೆಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ, ಇಂತಹ ಸಭೆಗಳಿಂದ ಹಿಂದೂ ಸಮಾಜದ ಜಾಗೃತಿಯಾಗುತ್ತಿರುವುದು ಇಡೀ ದೇಶದಲ್ಲಿ ಕಂಡುಬರುತ್ತಿದೆ, ಎಂದರು.

ಸಭೆಯಲ್ಲಿ ಕೋಡಿಂಬಾಡಿ ಯುವಶಕ್ತಿ ಗೆಳೆಯರ ಬಳಗದ ಮಾಧವ, ಧರ್ಮಶ್ರೀ ಭಜನಾ ಮಂಡಳಿಯ  ದೀಪಕ್, ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ  ಮನೋಹರ್.ಡಿ ವಿ, ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಸೀತರಾಮ ಆಳ್ವ ಕೊರಿಂಜಾ, ಶ್ಯಾಮ್ ಪ್ರಸಾದ್, ದಿನೇಶ್ ಬೊಳುವಾರು ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.