ಕಿಲ್ಲೆ ಮೈದಾನದಲ್ಲಿ ಸೋಮವಾರವೇ ಸಂತೆ ನಡೆಯಬೇಕು-ರಾಜೇಶ್ ಬನ್ನೂರು

Puttur_Advt_NewsUnder_1
Puttur_Advt_NewsUnder_1

 ರಬ್ಬರ್ ಸ್ಟಾಂಪ್ ಅಧ್ಯಕ್ಷರು

 ಅಧ್ಯಕ್ಷರು ಹೈಕೋರ್ಟ್ ನ್ಯಾಯಾಧೀಶರಲ್ಲ

 ಕಾರಣಿಕ ಸ್ಥಳಕ್ಕೆ ಬರಲು ನಾವು ಸಿದ್ಧ

 ಆದಿತ್ಯವಾರ ಸಂತೆ, ಎಪಿಎಂಸಿ ಸಂತೆಗೆ ಆಕ್ಷೇಪವಿಲ್ಲ

 ತಾ.ಪಂ., ವರ್ತಕರ ಸಂಘದ ವಿರುದ್ಧದ ಹೇಳಿಕೆಗೆ ಧಿಕ್ಕಾರ

ಪುತ್ತೂರು: ಪುತ್ತೂರಿನ ವಾರದ ಸಂತೆಯನ್ನು ಸೋಮವಾರ ಕಿಲ್ಲೆ ಮೈದಾನದಲ್ಲೇ ನಡೆಸಬೇಕೆಂದು ಎಲ್ಲಾ ಪಕ್ಷಗಳ ಒಮ್ಮತದ ಅಭಿಪ್ರಾಯವಿದ್ದು, ರಸ್ತೆಗೆ ಅಡ್ಡಿಯಾಗದ ರೀತಿಯಲ್ಲಿ  ಕಿಲ್ಲೆ ಮೈದಾನದಲ್ಲಿ ಸೋಮವಾರ ಸಂತೆ ನಡೆಸುವಂತೆ ನಗರಸಭೆ ಸದಸ್ಯ ರಾಜೇಶ್ ಬನ್ನೂರುರವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಕಿಲ್ಲೆ ಮೈದಾನದಲ್ಲಿ ಸೋಮವಾರ ಸಂತೆ ನಡೆಸಬೇಕನ್ನುವುದು ಎಲ್ಲಾ ಪಕ್ಷಗಳ ಒಮ್ಮತದ ಅಭಿಪ್ರಾಯ, ತಾ.ಪಂ ಸಭೆಯಲ್ಲೂ, ವರ್ತಕರೂ ಬೆಂಬಲ ನೀಡಿದರೂ ನಗರಸಭೆ ತೆಗೆದುಕೊಳ್ಳುವ ತೀರ್ಮಾನ ಮಾತ್ರ ಕೋತಿ ತಾನು ಹಾಳಾಗುವುದು ಮಾತ್ರವಲ್ಲ, ವನವನ್ನೆಲ್ಲಾ ಕೆಡಿಸಿದೆ ಎಂಬ ಮಾತಿನಂತೆ ಆಗುತ್ತಿದೆ ಎಂದರು. ಗ್ರಾಮಾಂತರ ಪ್ರದೇಶದಿಂದ ತರಕಾರಿ ಖರೀದಿ, ಮಾರಾಟಕ್ಕೆ ಬಂದು ಬಳಿಕ ಸರಕಾರಿ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವ ನಿತ್ಯ ಚಟುವಟಿಕೆಗೆ ಪೂರಕವಾಗಿ ತಾ.ಪಂ ಸದಸ್ಯರೂ ಸೋಮವಾರ ಸಂತೆಗೆ ಬೆಂಬಲ ನೀಡಿದ್ದರು. ಆದರೆ ಸರಿ ಇಲ್ಲ ಎಂದು ನಗರಸಭೆ ಅಧ್ಯಕ್ಷರು ಹೇಳಿಕೆ ನೀಡಿದ್ದರು. ಸೋಮವಾರವೇ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯಲಿ, ವರ್ತಕ ಸಂಘದವರು ವಿನಂತಿ ಮಾಡಿದಾಗ ವರ್ತಕರಿಗೆ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅಧ್ಯಕ್ಷರು ಹೇಳಿಕೆ ನೀಡಿದ್ದಕ್ಕೆ ನಗರಭೆಯ ೧೨ ಜನ ಸದಸ್ಯರು ಧಿಕ್ಕಾರ ಹಾಕುತ್ತೇವೆ ಎಂದ ಬನ್ನೂರು ಬಡವರ ಹೊಟ್ಟೆಗೆ ತೊಂದರೆ ಕೊಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು. ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಲು ವ್ಯವಸ್ಥಿತ ಮಾರ್ಜಿನ್ ಹಾಕಿ ಕೊಡಬೇಕು. ಯಾವುದೇ ಕಾರಣಕ್ಕೂ ಕಿಲ್ಲೆ ಮೈದಾನದಲ್ಲಿ ಆದಿತ್ಯವಾರ ಸಂತೆ ಮಾಡಲು ಅಥವಾ ಎಪಿಎಂಸಿಯಲ್ಲಿ ಸಂತೆ ಮಾಡಲು ಆಕ್ಷೇಪ ಇಲ್ಲ. ಆದರೆ ಸೋಮವಾರ ಕಿಲ್ಲೆ ಮೈದಾನದಲ್ಲಿ ಸಂತೆ ಆಗಲೇಬೇಕು ಎಂಬುದು ನಮ್ಮ ಒಕ್ಕೊರಳ ಅಭಿಪ್ರಾಯ ಎಂದರು.

ರಬ್ಬರ್ ಸ್ಟಾಂಪ್ ಅಧ್ಯಕ್ಷರು:  ಕೇವಲ ಮೂವರು ಸದಸ್ಯರು ಮಾತ್ರ ಕಿಲ್ಲೆ ಮೈದಾನದಲ್ಲಿ ಆದಿತ್ಯವಾರ ಸಂತೆ ಬೇಕೆಂದು ಹೇಳುತ್ತಾರೆ. ಅದಕ್ಕೆ ಸರಿಯಾಗಿ ಅಧ್ಯಕ್ಷರನ್ನು ಈ ಮೊದಲು ನಾನು ರಬ್ಬರ್ ಸ್ಟಾಂಪ್ ಎಂದು ಹೇಳಿದ್ದೆ. ಈಗ ಮತ್ತೊಮ್ಮೆ ಅದನ್ನೇ ಹೇಳ ಬಯಸುತ್ತೇನೆ ಎಂದು ರಾಜೇಶ್ ಬನ್ನೂರು ಹೇಳಿದರು.

ಅಧ್ಯಕ್ಷರು ಹೈಕೋರ್ಟ್ ನ್ಯಾಯಾಧೀಶರಲ್ಲ: ನಮ್ಮನ್ನು ಆಡಳಿತ ವಿರೋಧಗಳಂತೆ ನೋಡುತ್ತಿದ್ದಾರೆ ಎಂದು ನಗರಸಭಾಧ್ಯಕ್ಷರು ಹೇಳಿಕೆ ನೀಡಿದ್ದರು. ಆದರೆ ಬಹುಮತದಿಂದಿರುವುದು ನಮ್ಮ 12 ಮಂದಿ ಸದಸ್ಯರು. ಇಂತಹ ಸಂದರ್ಭದಲ್ಲಿ ಸಭೆಯಲ್ಲಿ ಅಧ್ಯಕ್ಷರು ರೂಲಿಂಗ್ ಕೊಟ್ಟ ಸಂದರ್ಭದಲ್ಲಿ ಅದನ್ನು ಮತಕ್ಕೆ ಹಾಕುವ ಕಾನೂನು ಇದ್ದರೂ ಅದಕ್ಕೆ ವಿರೋಧವಾಗಿ ಅವರು ಮತಕ್ಕೆ ಹಾಕದೆ ಸಭೆಯನ್ನು ಅರ್ಧದಲ್ಲೇ ಬರ್ಖಾಸ್ತು ಮಾಡಿ ಓಡಿ ಹೋಗಿದ್ದಾರೆ. ಅವರು ರೂಲಿಂಗ್ ಕೊಡಲು ಹೈಕೋರ್ಟ್ ನ್ಯಾಯಾಧೀಶರಲ್ಲ ಎಂದು ರಾಜೇಶ್ ಬನ್ನೂರು ಹೇಳಿದರು.

ಕಾರಣಿಕ ಸ್ಥಳಕ್ಕೆ ನಾವು ಬರಲು ಸಿದ್ಧ: ದೇವರು ನೋಡಿದ ಹಾಗೆ ಇರಲಿ ಎಂದು ಹೇಳಿರುವ ಅಧ್ಯಕ್ಷರ ಹೇಳಿಕೆಗೆ ತಕ್ಕಂತೆ, ಅಧಿಕಾರಕ್ಕೆ ಅಥವಾ ಅವರ ಆಡಳಿತಕ್ಕೆ ಜನ ಪರ ತೊಂದರೆ ಆಗುವ ರೀತಿಯಲ್ಲಿ ನಾವೆಲ್ಲಾದರೂ ಸಮಸ್ಯೆ ಮಾಡಿ ಆದರೆ ಪುತ್ತೂರು ಮತ್ತು ಸುತ್ತಮುತ್ತಲಿನಲ್ಲಿರುವ ಹಲವಾರು ಕಾರ್ಣಿಕ ಸ್ಥಳಗಳಾದ ಧರ್ಮಸ್ಥಳ, ಮಹಾಲಿಂಗೇಶ್ವರ, ಕಾನತ್ತೂರಿಗೆ ಬೇಕಾದರೂ ಕರೆಯಲಿ ನಾವು ಅಲ್ಲಿಗೆ ಬಂದು ಸೂಕ್ತ ಉತ್ತರ ಕೊಡಲು ಸಿದ್ದ ಎಂದು ರಾಜೇಶ್ ಬನ್ನೂರು ಹೇಳಿದರು. ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ವನಿತಾ, ವಿನಯ ಭಂಡಾರಿ, ಚಂದ್ರಸಿಂಗ್, ಹರೀಶ್ ನಾಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜಯಂತಿ ನಾಯ್ಕರವರು ಅಧ್ಯಕ್ಷರಾದ ಬಳಿಕ ಯಾವುದೇ ಕಾಮಗಾರಿ ನಡೆದಿಲ್ಲ

ನಗರಸಭೆ ಈಗಿನ ಅಧ್ಯಕ್ಷೆ ಜಯಂತಿ ನಾಯ್ಕರವರ ಆಡಳಿತ ಅವಧಿಯಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಇದನ್ನು ಪ್ರಮಾಣ ಸಾಕ್ಷಿಯಾಗಿ ಹೇಳುತ್ತಿzನೆ ಎಂದು ರಾಜೇಶ್ ಬನ್ನೂರು ಹೇಳಿದರಲ್ಲದೆ ಇಲ್ಲಿನ ತನಕ ನಡೆದ ಎಲ್ಲಾ ಕಾಮಗಾರಿಗಳು ಜಗದೀಶ್ ಶೆಟ್ಟಿ ಮತ್ತು ವಾಣಿ ಶ್ರೀಧರ್ ಇರುವ ಸಮಯದಲ್ಲಿ ಅನುಮೋದನೆಗೊಂಡ ಕಾಮಗಾರಿಗಳು. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ನಮ್ಮಲ್ಲಿವೆ. ನಗರೋತ್ಥಾನಕ್ಕೆ ಸಂಬಂಧಿಸಿ ರೂ. ೫ ಕೋಟಿ ಅನುದಾನ ಮಂಜೂರು ಮಾಡಿದ್ದು, ಡಿ.ವಿ.ಸದಾನಂದ ಗೌಡರು. ಅದರಲ್ಲಿ ಕೆಲವೊಂದು ಕಾಮಗಾರಿಗಳನ್ನು ಬದಲಾವಣೆ ಮಾಡುವ ಉzಶದಿಂದ ಜಗದೀಶ್ ಶೆಟ್ಟಿ ಇರುವ ಸಮಯದಲ್ಲಿ ಕಾಮಗಾರಿಗಳ ಬದಲಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದರ ನಿರ್ಣಯ ಪತ್ರವೂ ನಮ್ಮಲ್ಲಿದೆ. ಈಗ ಅದು ಮಂಜೂರಾಗಿ ಬಂದಿದೆ. ಇತ್ತೀಚೆಗೆ ನಡೆದ ಡಾಮರೀಕರಣವೂ ೧೩ನೇ ಹಣಕಾಸು ಮತ್ತು ಎಸ್.ಎಫ್.ಸಿ ರೂ. ೫೦ ಲಕ್ಷ ಅನುದಾನದಲ್ಲಿ ನಡೆದಿದ್ದು ಎಂದು ಅವರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.