Breaking News

’94ಸಿಯಡಿ ಕನಿಷ್ಠ 10 ಸೆಂಟ್ಸ್ ಸ್ಥಳ ನೀಡಿ’- ಬಿಜೆಪಿಯಿಂದ ಸಿಎಂಗೆ ಮನವಿ

Puttur_Advt_NewsUnder_1
Puttur_Advt_NewsUnder_1

94-c

* 94 ಸಿ ಅರ್ಜಿಗಳ ಶೀಘ್ರ ವಿಲೇವಾರಿ

*ಬಡವರಿಗೆ ಶುಲ್ಕ ವಿನಾಯಿತಿ ನೀಡಿ

* ಧಾರ್ಮಿಕ ಕ್ಷೇತ್ರಗಳ ಅಡಿ ಸ್ಥಳ ಮಂಜೂರಾತಿ ಮಾಡಿ

* ಕೊಳವೆ ಬಾವಿ ನಿಷೇಧ ಆದೇಶವನ್ನು ಹಿಂದಕ್ಕೆ ಪಡೆಯಿರಿ

ಪುತ್ತೂರು: 94 ಸಿ ಗೆ ಕನಿಷ್ಠ 10 ಸೆಂಟ್ಸ್ ಜಾಗ ಮಂಜೂರು, ಸಲ್ಲಿಸಿರುವ ಅರ್ಜಿಗಳ ಶೀಘ್ರ ವಿಲೇವಾರಿ, ಬಡವರಿಗೆ ಶುಲ್ಕ ವಿನಾಯಿತಿ, ಧಾರ್ಮಿಕ ಕ್ಷೇತ್ರಗಳ ಅಡಿ ಸ್ಥಳ ಮಂಜೂರಾತಿ ಮಾಡಬೇಕು ಮತ್ತು ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಬಿಜೆಪಿ ಪುತ್ತೂರು ಮಂಡಲ ಮತ್ತು ನಗರ ಮಂಡಲ ಹಾಗು ವಿವಿಧ ಮೋರ್ಛಾಗಳ ಸಹಯೋಗದೊಂದಿಗೆ ದ.೨೩ರಂದು ಸಹಾಯಕ ಕಮೀಷನರ್ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಸಲ್ಲಿಸಲಾಯಿತು.

94ಸಿ ಗೆ ಕನಿಷ್ಠ 10 ಸೆಂಟ್ಸ್ ಮಂಜೂರು ಮಾಡಿ: ರಾಜ್ಯದಲ್ಲಿರುವ ಕೃಷಿ ಕೂಲಿ ಕಾರ್ಮಿಕರು ಮತ್ತು ಕಾರ್ಮಿಕರು ತಮ್ಮ ವಾಸಕ್ಕಾಗಿ ಸರಕಾರಿ ಜಮೀನಿನಲ್ಲಿ ಮತ್ತು ಕುಮ್ಕಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವವರಿಗೆ ಹಕ್ಕು ಪತ್ರ ನೀಡುವ ಬಗ್ಗೆ ಕಂದಾಯ ಕಾಯ್ದೆಗೆ ತಿದ್ದುಪಡಿಯನ್ನು ತಂದು ಗ್ರಾಮಾಂತರ ಪ್ರದೇಶಕ್ಕೆ ೯೪ಸಿ ಮತ್ತು ನಗರ ಪ್ರದೇಶಕ್ಕೆ ೯೪ಸಿಸಿ ಅರ್ಜಿಯನ್ನು ಪಡಕೊಂಡು ಅವರಿಗೆ ಹಕ್ಕುಪತ್ರವನ್ನು ನೀಡಲು ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಾನೂನು ರೂಪಿಸಲಾಗಿತ್ತು. ಅದೇ ರೀತಿ ಅದಕ್ಕೆ ೧ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಯೋಜನೆಗೆ ಪ್ರಕ್ರಿಯೆ ಆರಂಭಿಸಿದ್ದು, ೨೦೧೫ರಲ್ಲಿ ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟಗೊಂಡಿದ್ದರೂ ಈ ತನಕ ಯಾವುದೇ ಅರ್ಜಿಗಳು ವಿಲೇವಾರಿ ಆಗದಿರುವುದು ರಾಜ್ಯ ಸರಕಾರದ ನಿಷ್ಕ್ರಿಯತೆಯನ್ನು ತೋರಿಸುತ್ತಿದೆ. ಈ ನಿಟ್ಟಿನಲ್ಲಿ ಯೋಜನೆಯಡಿಯಲ್ಲಿ ಕನಿಷ್ಠ ೧೦ ಸೆಂಟ್ಸ್ ತನಕ ೯೪ ಸಿ ಅಡಿಯಲ್ಲಿ ಸ್ಥಳ ಮಂಜೂರು ಮಾಡಬೇಕು ಮತ್ತು ಬಡವರಿಗೆ, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮಂಜೂರಾತಿ ಸಂದರ್ಭದಲ್ಲಿ ವಿಧಿಸುವ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಧಾರ್ಮಿಕ ಕ್ಷೇತ್ರಗಳ ಅಡಿ ಸ್ಥಳ ಮಂಜೂರಾತಿ ಮಾಡಿ : ಪುತ್ತೂರು ನಗರ ಸಭಾ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ ಭಜನಾ ಮಂದಿರ, ದೈವಸ್ಥಾನಗಳು ಅನಾದಿ ಕಾಲದಿಂದಲೂ ಇದೆ ಮತ್ತು ಈ ಧಾರ್ಮಿಕ ಕ್ಷೇತ್ರಗಳಲ್ಲಿ ಈಗಲೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಧಾರ್ಮಿಕ ಕ್ಷೇತ್ರಗಳಿಗೆ ಅಡಿ ಸ್ಥಳ ಮಂಜೂರಾತಿ ಆಗಿಲ್ಲ. ತಕ್ಷಣ ಸರ್ವೆ ಮಾಡಿ ಧಾರ್ಮಿಕ ಕ್ಷೇತ್ರಗಳಿಗೆ ಮಂಜೂರಾತಿ ನೀಡಬೇಕೆಂದು ವಿನಂತಿಸಲಾಗಿದೆ.

ಕೊಳವೆ ಬಾವಿ ನಿಷೇಧ ಆದೇಶವನ್ನು ಹಿಂದಕ್ಕೆ ಪಡೆಯಿರಿ: ದ.ಕ.ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆದ್ದರಿಂದ ಕೃಷಿಕರು, ಕೂಲಿ ಕಾರ್ಮಿಕರು ತೀರಾ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ಸಮಸ್ಯೆಯಾಗಿದೆ. ಈ ನಿಟಿನಲ್ಲಿ ಆದೇಶವನ್ನು ಹಿಂದಕ್ಕೆ ಪಡೆದು ಕೊಳವೆ ಬಾವಿ ಕೊರೆಯಲು ಅವಕಾಶ ಕೊಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿ ಗೌರಿ ಹೆಚ್, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಕಾರ್ಯಕಾರಿಣಿ ಸಮಿತಿ ಸದಸ್ಯ ಗೋಪಾಲಕೃಷ್ಣ ಹೇರಳೆ, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ವಿನಯ ಭಂಡಾರಿ, ಸುಜೀಂದ್ರ ಪ್ರಭು, ರಾಜೇಶ್ ಬನ್ನೂರು, ಚಂದ್ರಸಿಂಗ್, ಹರಿಶ್ ನಾಕ್, ವನಿತಾ ಕೆ.ಟಿ, ಜಿಲ್ಲಾ ಉಪಾಧ್ಯಕ್ಷೆ ಶೈಲಜಾ ಭಟ್, ಬಿಜೆಪಿ ನಗರ ಮಹಿಳಾ ಮೋರ್ಛಾ ಅಧ್ಯಕ್ಷೆ ವಿದ್ಯಾ ಆರ್ ಗೌರಿ, ಹಿಂದುಳಿದ ಮೋರ್ಛಾದ ಅಧ್ಯಕ್ಷ ಸುಂದರ ಪೂಜಾರಿ, ಯುವ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಯುವರಾಜ್, ಸುಜಯ ಮೋಹನ್, ಜಯಶ್ರೀ ಎಸ್.ಶೆಟ್ಟಿ, ಅಲ್ಪಸಂಖ್ಯಾತ ಮೋರ್ಛಾದ ಅಬ್ದುಲ್ ಕುಂಞಿ, ಶರೀಫ್ ಕಾರ್ಜಾಲು, ಮಹಮ್ಮದ್ ಅಶ್ರಫ್ ಬನ್ನೂರು, ನಿತಿಶ್ ಕುಮಾರ್ ಶಾಂತಿವನ, ಉಷಾ ನಾರಾಯಣ, ಪ್ರೇಮಾ ರಂಜನ್ ದಾಸ್, ಅಶೋಕ್ ಹಾರಾಡಿ, ಹರೀಶ್ ಬೆದ್ರಾಳ, ಕಚೇರಿ ವ್ಯವಸ್ಥಾಪಕ ರುಕ್ಮಯ ಇದ್ಪಾಡಿ ಸೇರಿದಂತೆ ನೂರಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.