’ಗುಡ್ಡೆದ ಭೂತ’ ಜನವರಿಯಲ್ಲಿ ತೆರೆಗೆ

Puttur_Advt_NewsUnder_1
Puttur_Advt_NewsUnder_1

guddeda-bhoothaಪುತ್ತೂರು: ಶ್ರೀ ಕಟಿಲೇಶ್ವರಿ ಮೀಡಿಯಾ ಬ್ಯಾನರ್‌ನಲ್ಲಿ ತಯಾರಾದ ’ಗುಡ್ಡೆದ ಭೂತ’ ತುಳು ಚಲನಚಿತ್ರ ಜನವರಿಯಲ್ಲಿ ಬಿಡುಗಡೆಗೊಳ್ಳಲಿದೆ.

ಈ ವರ್ಷದ ಅತೀ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರಗಳ ಸಾಲಿನಲ್ಲಿ ಗುಡ್ಡೆದಭೂತ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮುಖ್ಯವಾಗಿ ಈ ಚಿತ್ರ ಸಾಕಷ್ಟು ವಿವಾದಗಳಿಂದ ಸುದ್ದಿ ಯಾಗಿತ್ತು. ಟೈಟಲ್ ಸಮಸ್ಯೆಯಿಂದ ಇಡೀ ಚಿತ್ರವನ್ನು ಬೆಂಗಳೂರು ಫಿಲ್ಮ್ ಚೇಂಬರ್‌ನಿಂದ ತೆಗೆದು ಹುಬ್ಬಳ್ಳಿ ಫಿಲ್ಮ್ ಚೇಂಬರ್ ಮೂಲಕ ಬಿಡುಗಡೆ ಮಾಡುವ ಕೆಲಸದಲ್ಲಿ ಗೆಲುವು ದಾಖಲಿಸಿತು.

ಉಡುಪಿ ಅಷ್ಟ ಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಸ್ವಾಮೀಜಿ ಲಕ್ಷ್ಮೀವರ ತೀರ್ಥ ಶ್ರೀಪಾದರು ’ಗುಡ್ಡೆದ ಭೂತ’ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿ ಕೊಂಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಸಂದೀಪ್ ಭಕ್ತ, ನಾಯಕಿಯಾಗಿ ಅಶ್ವಿತಾ ನಾಯಕ್ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ದಿನೇಶ್ ಅತ್ತಾವರ, ಪುತ್ತೂರಿನ ಚಿದಾನಂದ ಕಾಮತ್ ಕಾಸರಗೋಡು ಅಭಿನಯಿಸಿದ್ದಾರೆ.  ಚಿತ್ರಕ್ಕೆ ಸುಭಾಷ್ ಬೋಳಾರ್ ಸಂಗೀತ ನೀಡಿದ್ದಾರೆ. ಆರ್.ಕೆ. ಅಂತೋನಿ ಹಾಗೂ ಸುರೇಂದ್ರ ಪಣಿಯೂರುರವರ ಛಾಯಾಗ್ರಾಹಣವಿದೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಪಣಿಯೂರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.