Breaking News

ಕಡಬ:ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ‍್ಯಕ್ರಮ, ಸಾಧಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

kadaba

ಯುವ ಜನತೆ ದುಶ್ಚಟಕ್ಕೆ ಬಲಿಯಾಗಬಾರದು: ಒಡಿಯೂರು ಶ್ರೀ  

ಕಡಬ: ಇಂದಿನ ದಿನಗಳಲ್ಲಿ ಯುವ ಜನತೆ ಯಾವುದೇ ದುಶ್ಚಟಕ್ಕೆ ಬಲಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಡಿ.21ರಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಯುವಕರು ಕೆಲವೊಂದು ದುಶ್ಚಟಕ್ಕೆ ಬಲಿಯಾಗುತ್ತಿರುವುದರಿಂದ ಸಮಾಜದ ಶಕ್ತಿ ಕುಂದುತ್ತದೆ, ಆದುದರಿಂದ ಧಾರ್ಮಿಕವಾಗಿ ತೊಡಗಿಸಿಕೊಂಡು ಸಂಘಟಿತ ಸಮಾಜ ನಿರ್ಮಾಣ ಮಾಡಬೇಕು ಎಂದ ಶ್ರೀಗಳು ಇಂದು ಯುವ ಶಕ್ತಿ ಅಂತರ್‌ಜಾಲದಲ್ಲಿ ನಿರತರಾಗಿದ್ದಾರೆ, ಅಂತರ್ ಜಾಲವನ್ನು ಒಳ್ಳೆಯ ಕಾರ‍್ಯಕ್ಕೆ ಉಪಯೋಗಿಸಬೇಕು, ಅದರಲ್ಲಿ ಖಾತೆ ತೆರೆದರೆ ವಿಶ್ವವನ್ನು ಕಾಣಬಹುದು ಆದರೆ ಅಂತರಾತ್ಮದಲ್ಲಿ ಖಾತೆ ತೆರೆದರೆ ವಿಶ್ವನಾಥನನ್ನು ಕಾಣಬಹುದು ಎಂದರಲ್ಲದೆ, ಭಜನೆಯ ಮೂಲಕ ಸಮಾಜ ಸಂಘಟನೆ ಮಾಡಿ ಧರ್ಮ ಜಾಗೃತಿ ಮಾಡುತ್ತಿರುವ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಲಿಯ ಕಾರ‍್ಯ ಶ್ಲಾಘನೀಯ ಎಂದು ಹೇಳಿದರು.

ನಾಯಿಗೆ ಇರುವ ಉಪಕಾರ ಸ್ಮರಣೆ ಮನುಷ್ಯರಿಗೆ ಇಲ್ಲ-ಕತ್ತಲ್‌ಸರ್: ಧಾರ್ಮಿಕ ಉಪನ್ಯಾಸ ನೀಡಿದ ಸಂಸ್ಕಾರ ಭಾರತಿಯ ಪ್ರಮುಖರಾದ ದಯಾನಂದ ಜಿ. ಕತ್ತಲ್‌ಸರ್ ಸಾಕ್ಷಾತ್ ದೇವರು ಗೋವಿನಲ್ಲಿ ನೆಲೆಸಿದ್ದಾರೆ ನಮ್ಮ ಸಂಪತ್ತಾಗಿರುವ ಗೋವನ್ನು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಸಾಕಬೇಕು ಇದರಿಂದ ನಮ್ಮ ಮನೆಯಲ್ಲಿ ಮಂಗಲ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ಇಂದು ಮನುಷ್ಯನಲ್ಲಿ ಗುರು ಹಿರಿಯರನ್ನು ಗೌರವಿಸುವ, ಪ್ರೀತಿಸುವ ಭಾವನೆಗಳು ಕಡಿಮೆಯಾಗುತ್ತಿದೆ ಕನಿಷ್ಠ ನಮ್ಮ ಮನೆಯ ಸಾಕು ನಾಯಿಗೆ ಇರುವ ಉಪಕಾರ ಸ್ಮರಣೆಯೂ ಮನುಷ್ಯನಿಗೆ ಇರುವುದಿಲ್ಲ, ಪ್ರಾಣಿ ಪಕ್ಷಿಗಳು ಕೂಡ ಪ್ರಕೃತಿಗೆ ವಿರುದ್ಧವಾಗಿ ನಡೆಯುವುದಿಲ್ಲ, ಆದರೆ ಮನುಷ್ಯ ಮಾತ್ರ ಪ್ರಕೃತಿಗೆ ವಿರುದ್ಧವಾಗಿ ನಡೆದು ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ, ನಾವು ಸಂಸ್ಕಾರಯುತ ಮಾನವೀಯ ಮೌಲ್ಯಗಳನ್ನು ಅರಿತು ಜೀವಿಸಬೇಕು ಎಂದು ಅವರು ಕರೆ ನೀಡಿದರು.

ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಹಾಗೂ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮಾತನಾಡಿದರು. ಬಜಗೋಳಿಯ ಶ್ರೀ ಆದಿಶಕ್ತಿ ಧರ್ಮದೇವಿ ದೇವಸ್ಥಾನದ ಧರ್ಮದರ್ಶಿ ಸುಧಾಕರ ಸಾಲ್ಯಾನ್, ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ‍್ಯದರ್ಶಿ ರಾಧಾಕೃಷ್ಣ ಕೆ.ಎಸ್, ಹಿಂ.ಜಾ.ವೇ ಮಾಜಿ ಸಂಚಾಲಕ ಪ್ರಕಾಶ್ ಎನ್.ಕೆ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಡಬದ ಶ್ರೀ ಗುರುದೇವಾ ಸೇವಾಬಳಗ ಹಾಗೂ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕಡಬ ಜೇಸಿ ಸಂಸ್ಥೆಯ ನಿಧಿ ಸಂಗ್ರಹದ ಕೂಪನ್ ಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಮಂಡಳಿ ವತಿಯಿಂದ ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ಹಸ್ತಾಂತರಿಸಲಾಯಿತು. ಭಜನಾ ಮಂಡಳಿಯ ಕಾರ‍್ಯದರ್ಶಿ ಮನೋಹರ್ ರೈ ಬೆದ್ರಾಜೆ ಸ್ವಾಗತಿಸಿ, ಅಧ್ಯಕ್ಷ ಸೋಮಪ್ಪ ಕಡಬ ವಂದಿಸಿದರು. ದಯಾನಂದ ಆಚಾರ್ಯ ಕಾರ‍್ಯಕ್ರಮ ನಿರೂಪಿಸಿದರು.

ಸನ್ಮಾನ ಕಾರ‍್ಯಕ್ರಮ

ಸಭಾ ಕಾರ‍್ಯಕ್ರಮದಲ್ಲಿ ಭಜನಾ ಸೇವೆಗಾಗಿ ಬಲ್ಯ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯ ಮೋನಪ್ಪ ಗೌಡ ಕತ್ತರಿಗುಡ್ಡೆ, ಹೊಸ್ಮಠ ಹಾಗೂ ಅಡೆಂಜ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯ ರಾಧಾಕೃಷ್ಣ ಗೌಡ ಅಡೆಂಜ, ದೈವ ನರ್ತಕ ಕಾಂತು ಪರವ ಕೊಣಾಜೆ, ಯಕ್ಷಗಾನ ಭಾಗವತ ಕಡಬ ರಾಮಚಂದ್ರ ರೈ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಿಜಕಳ ಕೊರಗಪ್ಪ ಗೌಡ ಕಲ್ಲರ್ಪೆ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.