ಸುದಾನ ಶಾಲಾ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

sudana1 sudana2ಪುತ್ತೂರು: ನೆಹರುನಗರ ಸುದಾನ ವಸತಿಯುತ ಶಾಲಾ ಹಿರಿಯರ ವಿಭಾಗದ ವಾರ್ಷಿಕೋತ್ಸವು ದ.22ರಂದು ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನಡೆದ ಕನ್ನಡ, ಹಿಂದಿ ತಮಿಳು ಹಾಗೂ ಗುಜರಾತಿ ಭಾಷೆಯ ಹಾಡಿನ ನೃತ್ಯ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನರಂಜಿಸಿದವು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿ ಆಯನ ವಿ. ಪೆರ್ಲ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣಬೇಕು. ಸಾಧನೆಯ ಹಾದಿಯಲಿ ಎಡರು-ತೊಡರುಗಳು ಸಾಮಾನ್ಯ. ಅವುಗಳನ್ನು ಸಮ ಚಿತ್ತದಿಂದ ಮೆಟ್ಟಿ ನಿಂತಾಗ ನಮ್ಮ ಕನಸು ಈಡೇರಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಝಡ್‌ಎಸ್ ಬ್ಯುಸಿನೆಸ್ ಕನ್ಸಲ್ಟೆಂಟ್ ಹರ್ಷಿತ್ ಎಂ.ಬಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ಅಗತ್ಯ. ಜೀವನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸನ್ನಿವೇಶಗಳು ಎದುರಾಗಬಹುದು. ನಾವು ಸೋತಾಗ ಅದಕ್ಕೆ ಅಂಜದೆ, ನಿರಂತರ ಪರಿಶ್ರಮದ ಮೂಲಕ ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು ಎಂದರು. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ, ವಿಶಾಖಪಟ್ಟಣದ ನೌಕಾದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಂಜಿತ್ ಆರ್ ಹಾಗೂ ಸಿಯಾಚಿನ್ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಧೇಶ್ ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾರ್ಥಿ ನಾಯಕ ಹಿಮಾಂಶು ಕುಮಾರ್ ಶರ್ಮ, ಕಾರ್ಯದರ್ಶಿ ವಿಶ್ವಾಸ್ ಆರ್.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನೆ, ಬಹುಮಾನ ವಿತರಣೆ: ವಿವಿಧ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದದಲ್ಲಿ ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳನ್ನು ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮಾಧವ ಭಟ್, ಶಂಕರ್ ಗ್ರೂಪ್ ಆಫ್ ಕಂಪೆನಿಯ ರಂಜಿತಾ ಶಂಕರ್, ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮಾಮಚ್ಚನ್ ಹಾಗೂ ರೋಟರಿ ಕ್ಲಬ್‌ನ ರಾಮಕೃಷ್ಣರವರು ಅಭಿನಂದಿಸಿದರು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿ ಉಪನಾಯಕಿ ಫಾತಿಮಾ ಅಫ್ರೀನಾ ಸ್ವಾಗತಿಸಿದರು. ಮುಖ್ಯ ಗುರು ಶೋಭಾ ನಾಗರಾಜ್ ವರದಿ ವಾಚಿಸಿದರು. ಶಿಕ್ಷಕರಾದ ನಿರ್ಮಲಾ ಹಾಗೂ ಯೋಗಿತಾ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ, ನಿಕೇತ್‌ಮೋಹನ್, ಪುಪ್ಪರಾಜ್, ಪ್ರತಿಮಾ ಮತ್ತಿತರರು ವಿವಿಧ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಚಂದನ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.೨೧ರಂದು ಕಿರಿಯ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ, ಹುಲಿಕುಣಿತ, ಡೊಳ್ಳು ಕುಣಿತ, ಆದಿವಾಸಿನೃತ್ಯ, ದಾಂಡಿಯಾ, ದೀಪಾವಳಿ ನೃತ್ಯ, ರಾಷ್ಟ್ರೀಯ ಭಾವೈಕ್ಯತಾ ನೃತ್ಯ ರೂಪಕ ಹಾಗೂ ಸೆಮಿ ಕ್ಲಾಸಿಕಲ್ ನೃತ್ಯ ನಡೆಯಿತು. ದ.೨೨ರಂದು ನಡೆದ ಹಿರಿಯರ ವಿಭಾಗದಲ್ಲಿ ಸಾಂಸ್ಕೃತಿಕ ಪ್ರಾರ್ಥನೆ, ಸ್ವಾಗತನೃತ್ಯ, ಶಾಸ್ತ್ರೀಯ, ಪೌರಾಣಿಕ ನೃತ್ಯ, ಫಿಲ್ಮ್ ಡ್ಯಾನ್ಸ್, ಸೆಮಿ ಕ್ಲಾಸಿಕಲ್, ಹಾಸ್ಟೇಲ್ ನೃತ್ಯ, ಗುಜರಾತಿ, ಅಮೇರಿಕನ್, ಮಲಯಾಳಿ ನೃತ್ಯಗಳು ಹಾಗೂ ಭಾವಗೀತೆಗಳ, ಶಾಸ್ತ್ರೀಯ ನೃತ್ಯ, ಹುಲಿಕುಣಿತ, ಡೊಳ್ಳು ಕುಣಿತ, ಆದಿವಾಸಿನೃತ್ಯ, ದಾಂಡಿಯಾ, ದೀಪಾವಳಿ ನೃತ್ಯ, ರಾಷ್ಟ್ರೀಯ ಭಾವೈಕ್ಯತಾ ನೃತ್ಯ ರೂಪಕಗಳು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ, ಹಿಂದಿ, ತಮಿಳು, ಇಂಗ್ಲೀಷ್, ಮಲಯಾಳಿ ಹಾಗು ತೆಲುಗು ಹಾಡುಗಳಿಗೆ ನೃತ್ಯಗಳು ವೇದಿಕೆಯಲ್ಲಿ ಮೂಡಿಬಂದವು. ರಾಷ್ಟ್ರೀಯ ಏಕೀಕರಣದ ಹಾಡಿನೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ವಿದ್ಯಾರ್ಥಿಗಳಾದ ಪೃಷಾ ರೈ, ಸ್ಪರ್ಷಾ ಎಂ.ಪಿ,  ವಿಶಾಲ್ ಆರ್ ಹಾಗೂ ಅರವಿಂದ್ ವಿಭಾಸ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.