ಅರಿಯಡ್ಕ: ಶ್ರೀಕೃಷ್ಣ ಭಜನಾ ಮಂದಿರದ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1

ariyadka

ಅರಿಯಡ್ಕ: ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಮುಖ್ಯ ಸೇವಾಧಿಕಾರಿಗಳ ಮತ್ತು ಭಜನಾ ಮಂದಿರ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯು ಭಜನಾ ಮಂದಿರದ ಉಪಾಧ್ಯಕ್ಷ ನಾರಾಯಣ ರೈ ಮಡ್ಯಂಗಳರವರ ಅಧ್ಯಕ್ಷತೆಯಲ್ಲಿ ಭಜನಾ ಮಂದಿರದ ಸಭಾಭವನದಲ್ಲಿ ದ.24ರಂದು ನಡೆಯಿತು.

ಸಭೆಯಲ್ಲಿ ಭಜನಾ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯ ಎ.ಕೆ. ರೈ ಅರಿಯಡ್ಕ, ಖಜಾಂಜಿ ಅಮ್ಮಣ್ಣ ರೈ ಡಿ. ಪಾಪೆಮಜಲು, ಜತೆ ಕಾರ್ಯದರ್ಶಿ ಸದಾಶಿವ ಮಣಿಯಾಣಿ ಕುತ್ಯಾಡಿ ಭಜನಾ ಮಂದಿರ ಸ್ಥಿತಿಗತಿಗಳ ಬಗ್ಗೆ ಭಕಾದಿಗಳಲ್ಲಿ ವಿಚಾರ ವಿನಿಮಯ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಾಮದಾಸ ರೈ ಮದ್ಲ, ವಿಶ್ವನಾಥ ರೈ ಕುತ್ಯಾಡಿ, ಮೋನಪ್ಪ ಕುಲಾಲ್, ದೀಪಕ್ ಕುಮಾರ್, ಗುರುವಪ್ಪ ಹೊಸಗದ್ದೆ, ಕೃಷ್ಣಪ್ಪ ನಾಯ್ಕ ಮಾಲಕೊಚ್ಚಿ, ಕರುಣಾಕರ ಗೌಡ ಆಚಾರಿಮೂಲೆ, ವೆಂಕಪ್ಪ ಗೌಡ ಮಡ್ಯಂಗಳ ಮತ್ತು ವಿಜಯಭಾರತಿ ಮಡ್ಯಂಗಳರವರು ಉಪಸ್ಥಿತರಿದ್ದರು.

ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ವಂದಿಸಿದರು. ನೂರಾರು ಭಕ್ತಾದಿಗಳು ಭಾಗವಹಿಸಿ ಸಲಹೆ-ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.