ಸಂಪರ್ಕ ರಸ್ತೆ ಅಭಿವೃದ್ಧಿ ಅಗತ್ಯ-ಶಕುಂತಳಾ ಶೆಟ್ಟಿ ಮಿಲಿಟ್ರಿ ಹೊಟೇಲ್-ಪಾಂಗ್ಳಾಯಿ-ಪರ್ಲಡ್ಕ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1

 

samprka

ಪುತ್ತೂರು: ನಗರಸಭೆಯ ನಗರೋತ್ಥಾನ 2ನೇ ಹಂತದ ಅನುದಾನದಲ್ಲಿ ಪುತ್ತೂರು ಮುಖ್ಯರಸ್ತೆಯಿಂದ ಹಳೆ ಮಿಲಿಟ್ರಿ ಹೊಟೇಲ್ ಬಳಿಯಿಂದ ಪಾಂಗ್ಳಾಯಿ-ಪರ್ಲಡ್ಕ ಸಂಪರ್ಕ ರಸ್ತೆ ಅಭಿವೃದ್ಧಿಗೆ ದ.24ರಂದು ಶಿಲಾನ್ಯಾಸ ನೆರವೇರಿಸಲಾಯಿತು.

ಸಂಪರ್ಕ ರಸ್ತೆ ಅಭಿವೃದ್ಧಿ ಅಗತ್ಯ- ಶಕುಂತಳಾ ಶೆಟ್ಟಿ: ರಾಜ್ಯ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಶಾಸಕಿ ಶಕುಂತಳಾ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರು ಪೇಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಸಂಪರ್ಕ ರಸ್ತೆಯ ಅಭಿವೃದ್ಧಿ ಅಗತ್ಯವಾಗಿದೆ, ನಗರೋತ್ಥಾನದ ಅನುದಾನದಲ್ಲಿ ಬದಲಿ ಪ್ರಸ್ತಾವನೆಯ ಮೂಲಕ ಪಾಂಗ್ಳಾಯಿ-ಪರ್ಲಡ್ಕ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿ ಬಂದಿದ್ದು, ಬಹಳಷ್ಟು ವರ್ಷಗಳ, ಬಹುನಿರೀಕ್ಷೆಯ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.

ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡುರವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿ. ಪ್ರಸನ್ನ ಮುಖ್ಯಅತಿಥಿಯಾಗಿದ್ದರು. ನಗರಸಭಾ ಸದಸ್ಯ ಮಹಮ್ಮದ್ ಆಲಿ ಸ್ವಾಗತಿಸಿ, ಪೌರಾಯುಕ್ತೆ ರೂಪಾ ಶೆಟ್ಟಿ ವಂದಿಸಿದರು. ನಗರಸಭಾ ಸದಸ್ಯ ಮುಖೇಶ್ ಕೆಮ್ಮಿಂಜೆ, ನಾಮನಿರ್ದೇಶನ ಸದಸ್ಯರಾದ ಜೋಕಿಂ ಡಿ’ಸೋಜಾ, ರೂಪರೇಖಾ ಆಳ್ವ, ಕೇಶವ ಬೆದ್ರಾಳ, ಮಹೇಶ್ ಕಲ್ಲೇಗ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಪಿ ಜಯರಾಮ ಗೌಡ, ಪಾಂಗ್ಳಾಯಿ ಮುಂಡ್ಯತ್ತಾಯ ದೇವಸ್ಥಾನದ ಅಧ್ಯಕ್ಷ ರಾಜಗೋಪಾಲ ಶಗ್ರಿತ್ತಾಯ, ಕೋಶಾಧಿಕಾರಿ ಸಂಪತ್ ಕುಮಾರ್, ಉತ್ಸವ ಸಮಿತಿ ಅಧ್ಯಕ್ಷ ತಾರಾನಾಥ ರೈ, ಮುಳಿಯ ಶ್ಯಾಂಭಟ್, ಕರುಣಾಕರ ಆಲೆಟ್ಟಿ, ಶಂಕರಾಚಾರ್ಯ ಪಾಂಗ್ಳಾಯಿ, ಗಂಗಾಧರ ನಾಕ್, ಪುರುಷೋತ್ತಮ ನಾಕ್, ಚಂದ್ರಶೇಖರ ಮುಂಗ್ಲಿಮನೆ, ಆನಂದ ಟೈಲರ್, ಸೀತಾರಾಮ ಆಚಾರ್ಯ, ಆನಂದ ಗೌಡ, ಪುಂಡಲೀಕ ಆಚಾರ್ಯ, ನಗರಸಭಾ ಇಂಜಿನಿಯರ್‌ಗಳಾದ ತುಳಸಿದಾಸ್, ಶ್ರೀಧರ್, ಪುಷ್ಪ, ಗುತ್ತಿಗೆದಾರ ಹರೀಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.