Breaking News

ಫಿಲೋಮಿನಾದಲ್ಲಿ ಕ್ರಿಸ್‌ಮಸ್ ಸಹಮಿಲನ ಕಾರ್ಯಕ್ರಮ ಶಾಂತಿ ಸೌಹಾರ್ದತೆಯ, ಭ್ರಾತೃತ್ವದ, ವಿಶ್ವಾಸದ ಜೀವನ ಎಲ್ಲರದಾಗಲಿ-ಶಕುಂತಳಾ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

 

puttur

moras

ಪುತ್ತೂರು: ಸಮುದಾಯವನ್ನು ಪವಿತ್ರ ಪ್ರೀತಿಯಿಂದ ಕಾಣುವ ಮಾನವೀಯತೆಯ ದಿವ್ಯ ಪ್ರೀತಿ ಬೆಳಗುವ ಹಬ್ಬ ಕ್ರಿಸ್‌ಮಸ್. ಪ್ರಭು ಯೇಸುಕ್ರಿಸ್ತರು ಸಾರಿದ ಶಾಂತಿ ಸೌಹಾರ್ದತೆಯ, ಪರಸ್ಪರ ಭ್ರಾತೃತ್ವದ, ಸ್ನೇಹಮಯ ಮತ್ತು ವಿಶ್ವಾಸದ ಜೀವನದಲ್ಲಿ ಮುನ್ನೆಡೆದಾಗ ದೇಶವು ಸುಭಿಕ್ಷೆಯತ್ತ ಸಾಗುವುದು ಎಂದು ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿರವರು ಹೇಳಿದರು.

ಅವರು ದ.22 ರಂದು ಸಂತ ಫಿಲೋಮಿನಾ  ಕಾಲೇಜ್‌ನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಫಿಲೋಮಿನಾ ಪದವಿ, ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಿಗೆ, ಉಪನ್ಯಾಸಕರಿಗೆ, ಆಡಳಿತ ಸಿಬ್ಬಂದಿ ವರ್ಗದವರಿಗೆ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಡೆದ ಸಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಮಧ್ಯೆ ಕಂದಕ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಿರಬೇಕು – ಪ್ರಸನ್ನಕುಮಾರ್ ರೈ: ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಕಾಲೇಜ್‌ನ ಹಿರಿಯ ವಿದ್ಯಾರ್ಥಿಯಾಗಿರುವ ಪ್ರಸನ್ನಕುಮಾರ್ ರೈರವರು ಕ್ರಿಸ್‌ಮಸ್ ಹಬ್ಬದ ಕೇಕ್ ಕತ್ತರಿಸಿ ಮಾತನಾಡಿ, ಕ್ರಿಶ್ಚಿಯನ್ ಸಂಸ್ಥೆಯವರು ಎಂದಿಗೂ ಧರ್ಮವನ್ನು ವಿಭಜನೆ ಮಾಡುವವರಲ್ಲ. ಅವರು ಪ್ರತಿಯೊಂದು ಧರ್ಮವನ್ನು ಪ್ರೀತಿಸುತ್ತಾ ಸ್ನೇಹ ಸೌಹಾರ್ದತೆಯನ್ನು ಪ್ರತಿಪಾದಿಸುವವರು. ರಾಜಕೀಯ ವ್ಯಕ್ತಿಗಳು ಧರ್ಮದ ವಿಷಯದ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ನಡುವೆ ಜಾತಿ ಎಂಬ ಕಂದಕವನ್ನು ಸೃಷ್ಟಿಸುವುದು ಇತ್ತೀಚೆಗಿನ ದಿನಗಳಲ್ಲಿ ಆತಂಕಕಾರಿ ಸನ್ನಿವೇಶವಾಗಿದೆ ಎಂದ ಅವರು ವಿದ್ಯಾರ್ಥಿಗಳನ್ನು ಇಂತಹ ವಿಷಯದಲ್ಲಿ ಪಾಲ್ಗೊಳ್ಳದಂತೆ ಆಡಳಿತ ಮಂಡಳಿ ಚಿಂತನೆಯನ್ನು ಮಾಡುತ್ತಾ ಅವರನ್ನು ದೇಶದ ಸತ್ಪ್ರಜೆಯನ್ನಾಗಿ ರೂಪಿಸುವಂತಾಗಬೇಕು ಎಂದು ಅವರು ಹೇಳಿದರು.

ದಿವ್ಯ ಬಲಿಪೂಜೆ: ಕ್ರಿಸ್‌ಮಸ್ ಹಬ್ಬದ ಸಹಮಿಲನ ಪ್ರಯುಕ್ತ ಕಾಲೇಜ್‌ನ ದಿವ್ಯಚೇತನಾ ಚಾಪೆಲ್‌ನಲ್ಲಿ ಬೆಳಿಗ್ಗೆ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ವಂ|ವಿಜಯ್ ಲೋಬೋ, ವಂ|ರಿತೇಶ್ ರೊಡ್ರಿಗಸ್‌ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ಪರ್ಫಾರ್ಮಿಂಗ್ ಆರ್ಟ್ಸ್ ಬಳಗ ಪ್ರಾರ್ಥಿಸಿದರು. ಫಿಲೋಮಿನಾ ಪದವಿ ಕಾಲೇಜ್‌ನ ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ ಸ್ವಾಗತಿಸಿ, ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ವಂದಿಸಿದರು. ಉಪನ್ಯಾಸಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜ್‌ನ ಉಪ ಪ್ರಾಂಶುಪಾಲ ಪ್ರೊ.ವಿಷ್ಣು ಭಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗಂಗಾಧರ್ ಪಿ, ಬ್ರದರ್ ರೋನ್ಸನ್, ಫಿಲೋಮಿನಾ ಪದವಿ ಕಾಲೇಜ್‌ನ ಸೂಪರಿಂಟೆಂಡೆಂಟ್ ವಿಕ್ಟೋರಿಯನ್ ಫೆರ್ನಾಂಡೀಸ್, ಪಿಆರ್‌ಒ ಪ್ರೊ| ದಿನಕರ್ ರಾವ್, ಫಿಲೋಮಿನಾ ಕಾಲೇಜ್‌ನ ಪುರುಷರ ಹಾಸ್ಟೆಲ್ ವಾರ್ಡನ್ ವಂ| ರಿತೇಶ್ ರೊಡ್ರಿಗಸ್, ಮಹಿಳಾ ಹಾಸ್ಟೆಲ್ ವಾರ್ಡನ್ ಸಿಸ್ಟರ್ ರೋಸಿ ಸಲ್ದಾನ್ಹಾ, ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೊಡ್ರಿಗಸ್, ದರ್ಬೆ ಕೋರ್ಪೋರೇಶನ್ ಬ್ಯಾಂಕ್ ಪ್ರಬಂಧಕ ನಾಗರಾಜು, ಪತ್ರಕರ್ತರು, ದರ್ಬೆ ಅಂಚೆ ಕಚೇರಿಯ ಸಿಬ್ಬಂದಿಗಳು, ಫಿಲೋಮಿನಾ ಪದವಿ, ಪದವಿಪೂರ್ವ ಹಾಗೂ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ, ಕಾಲೇಜ್‌ಗೆ ವಿವಿಧ ರೀತಿಯಲ್ಲಿ ಸೇವೆಯನ್ನು ಸಲ್ಲಿಸುವವರು ಸಹಮಿಲನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೆರುಗನ್ನು ನೀಡುವ ಗೋದಲಿ, ಕೇಕ್, ಕ್ರಿಸ್‌ಮಸ್ ಟ್ರೀ ಎಂಬುದು ಯಾಂತ್ರೀಕೃತ ಆಚರಣೆಯಾಗಿದ್ದು ಅದು ಕ್ರಿಸ್‌ಮಸ್ ಸಂಕೇತವಲ್ಲ. ಶಾಂತಿ, ಸಂತೋಷದಿಂದ ಹಾಗೂ ಸಾಂಕ ಒಗ್ಗೂಡುವಿಕೆಯಿಂದ ಬಾಳುವುದು ಕ್ರಿಸ್‌ಮಸ್ ಸಂಕೇತವಾಗಿದೆ. ಪ್ರಭು ಯೇಸುಕ್ರಿಸ್ತರು ಮಾನವನ ಕಷ್ಟ-ಕಾರ್ಪಣ್ಯಗಳ ನಿವಾರಣೆಗೋಸ್ಕರ ತಾನೇ ಮನುಷ್ಯನಾಗಿ ಹುಟ್ಟಿ ಮನುಷ್ಯನ ನಡುವೆ ಶಾಂತಿ ಸೌಹಾರ್ದತೆ ಹಾಗೂ ಪ್ರೀತಿಯನ್ನು ಬೋಧಿಸಿದವರು. ಮನುಷ್ಯ ಜೀವನದಲ್ಲಿ ಯಾರು ಮಾನವೀಯತೆಯನ್ನು ಮೆರೆಯುತ್ತಾರೋ ಅವರನ್ನು ಜನರು ಎಂದಿಗೂ ಗುರುತಿಸುತ್ತಾರೆ.

-ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ,

ಕ್ಯಾಂಪಸ್ ನಿರ್ದೇಶಕರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.