ನಾಳೆ ಮುಂಡೂರು ಕರೆಮನೆಯಲ್ಲಿ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮ-ಭರದ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1

 

mundooru

narimogaru

ನರಿಮೊಗರು: ಶ್ರೀ ಆದಿಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ| ನಿರ್ಮಲಾ ನಂದನಾಥ ಮಹಾಸ್ವಾಮಿಯವರು ಧರ್ಮ ಜಾಗೃತಿ ಮೂಡಿ ಸಲು ದ.26ರಂದು ಮುಂಡೂರು, ಕೆಮ್ಮಿಂಜೆ, ಆರ್ಯಾಪು ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ ಮುಂಡೂರು ಕರೆಮನೆ ನಳಿನಿ ಲೋಕಪ್ಪ ಗೌಡರ ಮನೆಯಲ್ಲಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ: ದ.26ರಂದು ಸ್ವಾಮೀಜಿಯವರು ಮಧ್ಯಾಹ್ನ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಮುಂಡೂರು ಕರೆಮನೆ ನಳಿನಿ ಲೋಕಪ್ಪ ಗೌಡರ ಮನೆಗೆ ತೆರಳಿ ಅಲ್ಲಿ ಮುಂಡೂರು, ಕೆಮ್ಮಿಂಜೆ, ಆರ್ಯಾಪು ಗ್ರಾಮಗಳ ಭಕ್ತ ರಿಂದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಲಿದ್ದಾರೆ. ನಂತರ ಪ್ರಸಾದ ಭೋಜನ ನಡೆಯಲಿದೆ.

ಭರದ ಸಿದ್ಧತೆ: ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಸ್ವಾಗತಿಸಲು ಕರೆಮನೆ, ಪಾಪೆತ್ತಡ್ಕ, ನರಿಮೊಗರು ಪರಿಸರದಲ್ಲಿ ಬೃಹತ್ ಕಟೌಟ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಮುಸ್ಲಿಂ ಬಾಂಧವರೂ ಸ್ವಾಗತ ಬ್ಯಾನರ್ ಅಳವಡಿಸಿದ್ದಾರೆ. ಗುರು ವಂದನಾ ಕಾರ್ಯಕ್ರಮದಲ್ಲಿ ಸುಮಾರು 800 ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ಜಾತಿ, ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಲಾಗಿದೆ. ಕರೆಮನೆಯ ವಿಶಾಲ ಅಂಗಳದಲ್ಲಿ ಸುಂದರ ಪೆಂಡಾಲ್, ವೇದಿಕೆ ನಿರ್ಮಿಸಲಾಗಿದೆ. ಪರಿಸರವನ್ನು ತಳಿರು ತೋರಣ, ಧ್ವಜ ಗಳಿಂದ ಶೃಂಗರಿಸಲಾಗಿದೆ. ಕಾರ್ಯಕ್ರಮ ಯಶಸ್ಸಿಗೆ ನಳಿನಿ ಲೋಕಪ್ಪ ಗೌಡ, ಲೋಕಪ್ಪ ಗೌಡರವರೇ ಖುದ್ದು ಉಸ್ತುವಾರಿ ವಹಿಸಿ ಕೊಂಡಿದ್ದು, ಮುಂಡೂರು, ಕೆಮ್ಮಿಂಜೆ, ಆರ್ಯಾಪು ಗ್ರಾಮಗಳ ಒಕ್ಕಲಿಗ ಗೌಡ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.