ಈಶ್ವರಮಂಗಲ: ಅಮೃತ ಪಥ  ಸ್ವಚ್ಛತಾ ಆಂದೋಲನ

Puttur_Advt_NewsUnder_1
Puttur_Advt_NewsUnder_1

eshwaramangalaಪುತ್ತೂರು: ಶ್ರೀರಾಮಚಂದ್ರಾಪುರ ಮಠ ಶ್ರೀ ಸಂಸ್ಥಾನ ಗೋಕರ್ಣ,ಮುಳ್ಳೇರಿಯ ಹವ್ಯಕ ಮಂಡಲಾಂತರ್ಗತ, ಈಶ್ವರಮಂಗಲ ಹವ್ಯಕ ವಲಯ ಮತ್ತು ಗ್ರಾಮ ಪಂಚಾಯತ್, ನೆಟ್ಟಣಿಗೆ ಮೂಡ್ನೂರು ಇವರ ಸಹಯೋಗದಲ್ಲಿ ಅಮೃತ ಪಥ ಬೃಹತ್ ಸ್ವಚ್ಛತಾ ಅಂದೋಲನ ದ.24 ರಂದು ಈಶ್ವರಮಂಗಲ ದಲ್ಲಿ ನಡೆಯಿತು.

ಗಬ್ಬಲಡ್ಕ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತನಾಡಿ ಅಮೃತ ಪಥಯೋಜನೆ ಕುರಿತು ಮಾಹಿತಿ ನೀಡಿದರು. ಕೃಷ್ಣಮೂರ್ತಿ ಮಾಡಾವು ಗೋ ಧ್ವಜವನ್ನು ಪಂಚಾಯತ್ ಉಪಾಧ್ಯಕ್ಷ ಶ್ರೀರಾಂ ಪಕ್ಕಳ ಇವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. 1ಮಂಡಲ ಗುರಿಕ್ಕಾರರಾದ  ಸತ್ಯನಾರಾಯಣ, ಮಂಡಲ ಸೇವಾ ಪ್ರಮುಖ ಬಾಲಸುಬ್ರಹ್ಮಣ್ಯ ಪರಪ್ಪೆ, ವಲಯ ಕಾರ್ಯದರ್ಶಿ ಗೋವಿಂದ ರಾಜ ದೇಲಂಪಾಡಿ ಮತ್ತು 25  ಸೇವಾಕರ್ತರು, ಪಂಚಾಯತ್ ಪಿ.ಡಿ.ಓ. ಸುನೀಲ್ ಹೆಚ್. ಟಿ.,ಹಾಗೂ ಸಿಬ್ಬಂದಿಗಳು,  ಸದಸ್ಯರಾದ ಇಬ್ರಾಹಿಂ ಪಳ್ಳತ್ತೂರು, ಇಬ್ರಾಹಿಂ ಎಂ.ಬಿ, ಅಬ್ದುಲ್ ಖಾದರ್, ಕೆ.ಎಂ.ಮಹಮ್ಮದ್, ಅಬ್ದುಲ್ಲಾ, ಅಮರನಾಥ ಆಳ್ವ ಕರ್ನೂರು, ಲಲಿತಾ, ಗಜಾನನ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶಾಮಣ್ಣ, ಮುಖ್ಯ ಗುರು ಶಿವರಾಮ ಶರ್ಮ, ಶಿಕ್ಷಕ ಕುಮಾರ ಸುಬ್ರಹ್ಮಣ್ಯ ಹಾಗೂ ಶಿಕ್ಷಕ, ಶಿಕ್ಷಕಿಯರು, ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಲಯ ಸೇವಾ ಪ್ರಮುಖ ಗೋಪಾಲಕೃಷ್ಣ ಅರ್ತ್ಯಡ್ಕ ಧನ್ಯವಾದ ಸಮರ್ಪಿಸಿದರು. ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆ, ಗಜಾನನ ಪ್ರೌಢಶಾಲೆ, ಪದವಿ ಪೂರ್ವಕಾಲೇಜ್, ವರ್ತಕರ ಸಂಘ ಈಶ್ವರಮಂಗಲ, ರಿಕ್ಷಾ ಚಾಲಕ/ಮಾಲಕರ ಸಂಘ ಈಶ್ವರಮಂಗಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ-ಸಹಾಯ ಸಂಘ ಈಶ್ವರಮಂಗಲ, ಆಯುಧ ಪೂಜಾಸಮಿತಿ ಈಶ್ವರಮಂಗಲ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಈಶ್ವರಮಂಗಲ ಘಟ ಸಮಿತಿ ಸಂಘ ಸಂಸ್ಥೆಯವರು ಭಾಗವಹಿಸಿದರು.

 ಸುಬ್ರಾಯ ಭಟ್, ರಘುರಾಮ್ ಭಟ್, ಮಹಾಲಿಂಗೇಶ್ವರ ಭಟ್, ನಟೇಶ್, ರಾಮಕೃಷ್ಣ ಭಟ್, ನರಸಿಂಹ ಪ್ರಸಾದ್, ಸತ್ಯನಾರಾಯಣ, ಅವನೀಶ್, ಸುರೇಶ್ ಅಂಕತಡ್ಕ, ವೇಣು ಕರ್ನೂರ್, ಹೇಮಲತಾ ಪರಪ್ಪೆ, ರಾಜೇಶ್ವರಿ ಮತ್ತು ವಿದ್ಯಾ ಪಟ್ಟಾಜೆ, ಕೃಷ್ಣ ಭಟ್, ಶಿವಪ್ರಸಾದ್ ಕೊಚ್ಚಿ,ನರಸಿಂಹ ತೇಜ ಮತ್ತು ಇತರರು ವಿವಿಧ ಜವಾಬ್ದಾರಿ ನಿರ್ವಹಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.