ಪಡುಮಲೆ: ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1

 

padumale

ಪುತ್ತೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ರೈ ಪಿ.ರವರಿಗೆ ಆಡಳಿತಾಧಿಕಾರಿ ರಾಧಾಕೃಷ್ಣ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ಪೂರ್ವಕಾಲದಿಂದ ಬೆಳ್ಳಿಪ್ಪಾಡಿ ಮನೆತನದಿಂದ ಆಡಳಿತ ನಡೆಯುತ್ತಿತ್ತು. ಅವರ ಸಹಕಾರ, ಕ್ಷೇತ್ರದ ತಂತ್ರಿಯವರ ಮಾರ್ಗದರ್ಶನ, ಊರಿನವರ ಪೂರ್ಣ ಸಹಕಾರದೊಂದಿಗೆ ಕ್ಷೇತ್ರದ ಕೆಲಸ ಮಾಡುತ್ತೇನೆ ಎಂದು ಹೇಳಿ ಶುಭಹಾರೈಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ, ಗುರುಪ್ರಸಾದ್ ರೈ ಕುದ್ಕಾಡಿ, ಗೋಪಾಲಕೃಷ್ಣ ಸುಳ್ಯಪದವು, ಅರ್ಚಕ ಮಹಾಲಿಂಗ ಭಟ್, ಸುಬ್ರಹ್ಮಣ್ಯ ಭಟ್ ಪಾದೆಕರ್ಯ, ವಿಜಯಕುಮಾರ್ ಸೋಣಂಗೇರಿ, ಪದ್ಮಾವತಿ ನಾರಾಯಣ ಪೂಜಾರಿ ಮುಡಿಪಿನಡ್ಕ, ಶೋಭಾ ತ್ಯಾಂಪಣ್ಣ ಸಿ.ಎಚ್. ಅಲ್ಲದೆ ಸ್ಥಳೀಯ ಜಯರಾಜ್ ಶೆಟ್ಟಿ ಅಣಿಲೆ, ಗ್ರಾಮ ಸೇವಕ ರಘುನಾಥ ಪಾಟಾಳಿ, ಗುರುರಾಜ್ ಭಟ್, ಭಾಸ್ಕರ ರಾವ್ ಪಡುಮಲೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.