ಕಾಣಿಯೂರು ಗ್ರಾ.ಪಂನಲ್ಲಿ ಕಂದಾಯ, ಪಿಂಚಣಿ ಅದಾಲತ್

Puttur_Advt_NewsUnder_1
Puttur_Advt_NewsUnder_1

kaniyooruಕಾಣಿಯೂರು: ಕಂದಾಯ ಅದಾಲತ್‌ನಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಗ್ರಾಮ ಮಟ್ಟದಲ್ಲಿಯೇ ಪರಿಹರಿಸುವ ಕಾರ್ಯಕ್ರಮ ಇದಾಗಿದೆ. ಈ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕು ಎಂದು ಕಡಬ ವಿಶೇಷ ತಹಶೀಲ್ದಾರ್ ಲಿಂಗಯ್ಯರವರು ಹೇಳಿದರು. ಅವರು ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ವಿಶೇಷ ತಹಶೀಲ್ದಾರರ ಕಚೇರಿ ಕಡಬ ಇದರ ವತಿಯಿಂದ ದ 21ರಂದು ಕಾಣಿಯೂರು ಗ್ರಾ.ಪಂ ಸಭಾಂಗಣದಲ್ಲಿ  ನಡೆದ ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಗ್ರಾಮಗಳ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಹೆಚ್ಚಿನ ಜನರಿಗೆ ತಮ್ಮ ಜಾಗದ ಪಹಣಿ ಪತ್ರದಲ್ಲಿ ತಪ್ಪುಗಳಿದ್ದಲ್ಲಿ ಗೊತ್ತಿರುವುದಿಲ್ಲ. ಅದಾಲತ್‌ನಲ್ಲಿ ಅರ್ಜಿ ಕೊಟ್ಟು ಸರಿಪಡಿಸಿಕೊಳ್ಳಲು ಸುಲಭ ಅವಕಾಶವಿದೆ ಎಂದರು. ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳಂದೂರು ಕ್ಷೇತ್ರದ ಜಿ.ಪಂ ಸದಸ್ಯೆ ಪ್ರಮೀಳಾ ಜನಾರ್ದನ, ಕಾಣಿಯೂರು ಗ್ರಾ.ಪಂ ಉಪಾಧ್ಯಕ್ಷೆ ಕಮಲಾಕ್ಷೀ ಬೆದ್ರಂಗಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗಿನಿ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಕಾಣಿಯೂರು ಗ್ರಾ.ಪಂ ಸದಸ್ಯರುಗಳಾದ, ಗಣೇಶ್ ಉದನಡ್ಕ, ಸುರೇಶ್ ಓಡಬಾಯಿ, ಬೇಬಿ ಕುಕ್ಕುಡೇಲು, ವೀರಪ್ಪ ಗೌಡ ಉದ್ಲಡ್ಡ, ದಿನೇಶ್ ಗೌಡ ಇಡ್ಯಡ್ಕ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ನಿವೇಶನಕ್ಕಾಗಿ ಗಡಿಗುರುತು ಮಾಡಲು ಒತ್ತಾಯ: ಕಾಣಿಯೂರು ಗ್ರಾಮದ ಅಬ್ಬಡದಲ್ಲಿರುವ ಗೋಮಾಳ ಜಾಗದಲ್ಲಿ ಈಗಾಗಲೆ ಹಲವಾರು ಫಲಾನುಭವಿಗಳಿಗೆ ನಿವೇಶನವನ್ನು ಹಂಚಲಾಗಿದ್ದು, ಅವರಿಗೆ ಸರಿಯಾದ ರೀತಿಯಲ್ಲಿ ಜಾಗದ ಗಡಿಗುರುತು ಮಾಡಿ ಕೊಡದಿರುವುದರಿಂದ ತುಂಬಾ ತೊಂದರೆಯಾಗಿರುತ್ತದೆ. ಕೂಡಲೇ ಗಡಿಗುರುತು ಮಾಡಿಕೊಡುವಂತೆ ಗ್ರಾ.ಪಂ ಸದಸ್ಯ ಗಣೇಶ್ ಉದನಡ್ಕ ಒತ್ತಾಯಿಸಿದರು.  ಉಪತಹಶೀಲ್ದಾರರಾದ ನವ್ಯಾ, ಸರ್ವೇಯಾರ್ ಶಂಕರನಾರಾಯಣ ಪ್ರಭು, ಮಂಜುನಾಥ, ಗ್ರಾಮಕರಣಿಕರುಗಳಾದ ಪುಷ್ಪರಾಜ್, ರವಿಚಂದ್ರ, ಅಮೃತಾ, ಗ್ರಾಮ ಸಹಾಯಕರಾದ ಚಿದಾನಂದ ಮುಂಡಾಳ, ಭಾಸ್ಕರ ಚಾರ್ವಾಕ, ವಾಸುದೇವ ನಾಯ್ಕ ಕಾಣಿಯೂರು, ಕುಂಞಣ್ಣ, ಪದ್ಮಯ್ಯ ಗೌಡರವರು ಸಹಕರಿಸಿದರು.

ಸರ್ವೆ ನಂಬ್ರ 99ರಲ್ಲಿ ಶಿಕ್ಷಣದ ಉದ್ದೇಶಕ್ಕಾಗಿ  ಮೀಸಲಿಟ್ಟ ಜಾಗದ ನಕ್ಷೆ ತಯಾರಿಸಲು ಒತ್ತಾಯ

ಬೆಳಂದೂರು ಗ್ರಾಮದ ಸರ್ವೆ ನಂಬ್ರ ೯೯ರಲ್ಲಿರುವ ಸರಕಾರಿ ಜಾಗವನ್ನು ಶಿಕ್ಷಣದ ಉದ್ಧೇಶಕ್ಕಾಗಿ ಕಾದಿರಿಸುವ ನಿಟ್ಟಿನಲ್ಲಿ ಈಗಾಗಲೇ ಪಂಚಾಯತ್ ಸಭೆಗಳಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಗಡಿಗುರುತು ಮಾಡಿ ನಕ್ಷೆ ಮಾಡಿ ಆರ್‌ಟಿಸಿ ತಯಾರಿಸಲು ಕೇಳಿಕೊಂಡು ೧ವರ್ಷವಾದರೂ ಸಾಧ್ಯವಾಗದಿರುವುದಕ್ಕೆ

ಕಾರಣವಾದರೂ ಏನು ಎಂದು ಜನಾರ್ದನ ಆಚಾರ್ಯ ಕಾಣಿಯೂರು ಪ್ರಶ್ನಿಸಿದರು. ಉತ್ತರಿಸಿದ ತಹಶೀಲ್ದಾರರು ಗಡಿಗುರುತು ಮಾಡಿ ಆರ್‌ಟಿಸಿ ತಯಾರಿಸಲು ಈಗಾಗಲೇ ಸರ್ವೇಯರ್‌ರವರಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿ ಒಂದು ವಾರದೊಳಗೆ ಕ್ರಮಕೈಗೊಳ್ಳಲು ಸಭೆಯಲ್ಲಿದ್ದ ಸರ್ವೆಯರ್‌ಗೆ ಸೂಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.