ಕ್ರಿಸ್ಮಸ್ ವಿವಿಧ ಸಂಕೇತಗಳ ಹಬ್ಬ

Puttur_Advt_NewsUnder_1
Puttur_Advt_NewsUnder_1

maide

godali

ಕ್ರಿಸ್‌ಮಸ್ ಹಬ್ಬ ಎಲ್ಲಾ ಕ್ರೈಸ್ತ ಬಾಂಧವರಿಗೆ ಅಚ್ಚುಮೆಚ್ಚಿನ ಹಬ್ಬ. ಪ್ರಭು ಕ್ರಿಸ್ತರ ಜನನವನ್ನು ಸಾರುವ ಕ್ರಿಸ್‌ಮಸ್ ಹಬ್ಬವನ್ನು ಪ್ರತಿವರ್ಷವು ವಿಜೃಂಭಣೆಯಿಂದ ಎಲ್ಲರೂ ಆಚರಿಸುತ್ತಾರೆ.

ಕ್ರಿಸ್‌ಮಸ್ ಎಂಬುದು ಎಲ್ಲರಿಗೂ ಸಂತೋಷದ ಹಬ್ಬ. ಈ ಸಂತೋಷವನ್ನು ಎಲ್ಲರೊಂದಿಗೆ ಹಂಚಿ, ದೇವ ಪುತ್ರರು ಧರೆಗಿಳಿದು ಬಂದು, ದೇವರ ಪ್ರೀತಿಯನ್ನು ಎಲ್ಲರಿಗೂ ಹಂಚಿದ ದಿವ್ಯ ಘಳಿಗೆ.

ಕ್ರಿಸ್‌ಮಸ್ ಹಬ್ಬದಲ್ಲಿ ವಿವಿಧ ಸಂಕೇತಗಳನ್ನು ನಾವು ನೋಡುತ್ತೇವೆ. ಕ್ರಿಸ್‌ಮಸ್ ಗೋದಲಿ, ಕ್ರಿಸ್‌ಮಸ್ ಸಾಂತಾಕ್ಲೋಸ್, ಕ್ಯಾರಲ್ಸ್, ನಕ್ಷತ್ರಾಂ, ಕ್ರಿಸ್‌ಮಸ್ ಕಾರ್ಡ್, ಕ್ರಿಸ್‌ಮಸ್ ಬೆಲ್, ಕ್ರಿಸ್‌ಮಸ್ ಉಡುಗೊರೆ ಇತ್ಯಾದಿ. ಈ ಎಲ್ಲಾ ಸಂಕೇತಗಳಿಗೆ ಅದರz ಆದ ಅರ್ಥವನ್ನು ನೀಡಿರುತ್ತಾರೆ.

ಕ್ರಿಸ್‌ಮಸ್ ಗೋದಲಿ: ಯೇಸು ಕ್ರಿಸ್ತರು ಬಡವನಾಗಿ ಈ ಧರೆಗೆ ಹುಟ್ಟಿ ದೇವರ ಪುತ್ರನು ಒಂದು ಚಿಕ್ಕ ಗೋದಲಿಯಲಿ ನರನಾದನು ಎಂಬ ಸಂದೇಶವನ್ನು ಎಲ್ಲಾ ಜನರಿಗೆ ಸಾರಲು ಕ್ರಿಸ್ಮಸ್ ಗೋದಲಿಯನ್ನು ನಿರ್ಮಿಸುತ್ತಾರೆ. ವಿವಿಧ ಆಕಾರದ, ಬಣ್ಣ ಬಣ್ಣಗಳಲ್ಲಿ ಶೃಂಗರಿಸಿದ ಈ ಗೋದಲಿಯನ್ನು ಫ್ರಾನ್ಸಿನ ಸಂತ ಫ್ರಾನ್ಸಿಸ್ ಆಸ್ಸಿಸಿಯವರು ಮೊತ್ತ ಮೊದಲಿಗೆ ಪ್ರಭು ಯೇಸು ಕ್ರಿಸ್ತರ ಜನನದ ಸಂದೇಶವನ್ನು ಸಾರಲು ಸಾಂಪ್ರದಾಯಿಕವಾಗಿ ಆರಂಭಿಸಿದರು. ದೇವರ ಪುತ್ರನಾದರೂ ವಿಧೇಯತೆ ಹಾಗೂ ದೀನತೆಯಿಂದ ಪ್ರಭು ಯೇಸು ಕ್ರಿಸ್ತರು ಧರೆಗೆ ಬಂದರು ಎಂಬುದನ್ನು ಪ್ರಭು ಕ್ರಿಸ್ತರು ಈ ಗೋದಲಿಯ ಮೂಲಕ ಬೋಧಿಸುತ್ತಾರೆ.

ಕ್ರಿಸ್ಮಸ್ ಟ್ರೀ (ಮರ): ಪ್ರಭು ಕ್ರಿಸ್ತರ ಜನನದ ಹಬ್ಬವನ್ನು ಆಚರಿಸುವ ಸಲುವಾಗಿ ಕ್ರಿಸ್ಮಸ್ ಟ್ರೀಯನ್ನು ಶೃಂಗರಿಸುತ್ತಾರೆ. ಈ ಕ್ರಿಸ್ಮಸ್ ಟ್ರೀಯು ಪ್ರಕೃತಿಯ ಸೊಬಗಿನ ಮೂಲಕ ದೇವರ ಮಹಿಮೆಯನ್ನು ಸಾರುತ್ತದೆ. ಪ್ರಭು ಕ್ರಿಸ್ತರ ಹುಟ್ಟು ಪ್ರಕೃತಿಯನ್ನು ಮೋಡಿಗೊಳಿಸುತ್ತದೆ ಎಂಬ ಸಂದೇಶವನ್ನು ಈ ಕ್ರಿಸ್ಮಸ್ ಟ್ರೀ ಸಾರುತ್ತದೆ.

ಸಾಂತಾಕ್ಲೋಸ್: ಸಾಂತಾ ನಿಕೊಲಸಾರೇ ಸಾಂತಾಕ್ಲೋಸ್. ಸಂತ ನಿಕೊಲಸ್‌ರವರು ಈಗಿನ ಟರ್ಕಿಯಲ್ಲಿರುವ ಮೈರಾ ಪವಿತ್ರ ಸಭೆಯ ಬಿಷಪರಾಗಿದ್ದರು. ಇವರ ಹಬ್ಬವನ್ನು ಡಿಸೆಂಬರ್ ತಿಂಗಳಿನ ೬ನೇ ತಾರೀಕಿನಂದು ಆಚರಿಸುತ್ತೇವೆ. ಇವರು ದಾನಧರ್ಮ ಮಾಡುವುದರಲ್ಲಿ ಎತ್ತಿದ ಕೈ. ಬಡವರಿಗೆ, ಕಷ್ಟ ಸಂಕಷ್ಟದಲ್ಲಿದ್ದವರಿಗೆ ಯಾರಿಗೂ ತಿಳಿಯದಂತೆ ದಾನಧರ್ಮ ಮಾಡುವುದರಲ್ಲಿ ಸಂತ ನಿಕೊಲಸರು ಹೆಸರುವಾಸಿ. ಈಗಲೂ ಇವರ ನೆನಪಿಗಾಗಿ ಕ್ರಿಸ್ಮಸ್ ಹಬ್ಬದಂದು ಸಾಂತಾಕ್ಲೋಸ್ ಎಂಬ ಹೆಸರಿನ ಮೂಲಕ ಅವರ ವೇಷವನ್ನು ತೊಟ್ಟು ಮನೆ ಮನೆಗೆ ಹೋಗಿ ಉಡುಗೊರೆಗಳನ್ನು ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರುತ್ತಾರೆ.

ಕ್ರಿಸ್ಮಸ್ ಕ್ಯಾರಲ್ಸ್: ಸಾಂತಾ ಫ್ರಾನ್ಸಿಸ್ ಆಸಿಸಿಯವರು ಕ್ರಿಸ್ಮಸ್ ರಹಸ್ಯದ ಬಗ್ಗೆ ನಾಟಕಗಳನ್ನು ಪ್ರದರ್ಶಿಸಿ ಆ ಮೂಲಕ ಕ್ರಿಸ್ಮಸ್ ಗೀತೆಗಳನ್ನು ಪ್ರತಿ ದೃಶ್ಯದ ನಂತರ ಹಾಡಿ ಮನೋರಂಜನೆಗೋಸ್ಕರ ಹಾಡುತ್ತಿದ್ದರು. ಇದೇ ಸಂಪ್ರದಾಯ ಮುಂದೆ ಕ್ರಿಸ್ಮಸ್ ಕ್ಯಾರಲ್ಸ್ ಆಗಿ ರೂಪುಗೊಂಡು ಮನೆ ಮನೆಗೆ ಹೋಗಿ ಸಂಗೀತವನ್ನು ಹಾಡಿ ಯೇಸು ಕ್ರಿಸ್ತರ ಜನನದ ಶುಭ ಸಂದೇಶವನ್ನು ಹಾಡುತ್ತಿದ್ದರು.

ನಕ್ಷತ್ರ: ಒಂದು ಸಂಕೇತ ಪ್ರಭು ಕ್ರಿಸ್ತರೇ ಬೆಳಕಾಗಿದ್ದಾರೆ, ಆ ಬೆಳಕೆ ನಮಗೆ ಸ್ವರ್ಗ ಸಾಮ್ರಾಜ್ಯದತ್ತ ಕೈ ತೋರಿಸುತ್ತಿದೆ ಹಾಗೂ ದಾರಿ ತೋರಿಸುತ್ತಿದೆ. ಎರಡನೆಯದಾಗಿ ದಾರಿ ತಪ್ಪಿ ಹೋದ ಮೂರು ಅರಸರಿಗೆ ಮಾರ್ಗದರ್ಶಿಯಾಗಿ ಒಂದು ನಕ್ಷತ್ರವೇ ನೆರವಾಯಿತು. ಇದಕ್ಕಾಗಿ ನಕ್ಷತ್ರದ ಸಂಕೇತವನ್ನು ಕ್ರಿಸ್ಮಸ್ ಹಬ್ಬದಲ್ಲಿ ಚಿತ್ರಿಸುತ್ತಾರೆ.

ಕ್ರಿಸ್ಮಸ್ ಕಾರ್ಡ್: ಇಂಗ್ಲೆಂಡಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯನಾ ನಿರ್ದೇಶಕರು ಮೊದಲು ಕ್ರಿಸ್ಮಸ್ ಶುಭಾಶಯ ಪತ್ರ ತಯಾರಿಗಾಗಿ ಕಲಾಕಾರರಿಗೆ ತಿಳಿಸಿದರು. ಅಂದಿನಿಂದ ಪ್ರೀತಿಯವರಿಗೆ ಕ್ರಿಸ್ಮಸ್ ಕಾರ್ಡ್‌ನ ಮೂಲಕ ಶುಭಾಶಯವನ್ನು ಕೋರುವ ಸಂಪ್ರದಾಯ ಆರಂಭವಾಯಿತು.

ಕ್ರಿಸ್ಮಸ್ ಬೆಲ್ : ಯಹೂದಿ ಧರ್ಮದಲ್ಲಿ ಶ್ರೇಷ್ಠ  ಯಜಾಕರ ಉಡುವಾಗ ಚಿಕ್ಕ ಗಂಟೆಯನ್ನು ಕಟ್ಟಿ ಶ್ರೇಷ್ಟರೆಂದು ಅವರನ್ನು ಗುರುತಿಸುತ್ತಿದ್ದರು. ಅಂತೆಯೇ ಕ್ರಿಸ್ಮಸ್ ಗಂಟೆಯ ನಾದದ ಮೂಲಕ ಕ್ರಿಸ್ಮಸ್ ಸಂತೋಷವನ್ನು ಸಾರುವಾಗ ಪ್ರುಭು ಯೇಸು ಕ್ರಿಸ್ತರು ಶ್ರೇಷ್ಠ ಯಜಾಕರೆಂಬ ಸತ್ಯವನ್ನು ಸಾರುತ್ತೇವೆ.

ಕ್ರಿಸ್ಮಸ್ ಉಡುಗೊರೆ: ದೇವರೆ ಈ ಧರೆಗೆ ಇಳಿದು ಬಂದ ಶ್ರೇಷ್ಠ ಉಡುಗೊರೆ ಅಂತೆಯೇ ಜ್ಯೋತಿಷಿಗಳು ಉಡುಗೊರೆಯನ್ನಿತ್ತು ಯೇಸುವನ್ನು ಆರಾಧಿಸಿದರು. ಅಂತೆಯೇ ಕ್ರಿಸ್ಮಸ್ ಉಡುಗೊರೆಯನ್ನು ಹಂಚಿ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುವುದೇ ಉಡುಗೊರೆ ನೀಡುವ ಉzಶ.

ಕುಸ್ವಾರ: ಸವಿಯಾದ ಈ ಶುಭ ದಿನವನ್ನು ಕುಸ್ವಾರ, ಸಿಹಿ ತಿಂಡಿಗಳನ್ನು ಹಂಚುವ ಮೂಲಕ ಈ ಕ್ರಿಸ್ಮಸ್ ಹಬ್ಬಕ್ಕೆ ಹೊಸ ಜೀವ ತುಂಬುತ್ತದೆ. ಈ ಸಮಯದಲ್ಲಿ ವಿವಿಧ ರೀತಿಯ ‘ಕುಸ್ವಾರ’ವನ್ನು ತಯಾರಿಸಿ ಹಂಚುವ ಸಂಪ್ರದಾಯ ಕ್ರೈಸ್ತ ಬಾಂಧವರಲ್ಲಿ ತುಂಬಾ ವರುಷಗಳಿಂದ ಇಳಿದು ಬಂದಿದೆ.ಈ ವರುಷ ಕ್ರಿಸ್ಮಸ್ ಹಬ್ಬವು ಎಲ್ಲರ ಮನಸ್ಸಲ್ಲಿ ಶಾಂತಿ, ನೆಮ್ಮದಿ, ಅನ್ಯೋನ್ಯತೆಯ ಜೀವನಕ್ಕೆ ಹೊಸ ಮಾರ್ಗವಾಗಲಿ, ಪರಸ್ಪರ ಪ್ರೀತಿಸಿ. ದೇವರ ಪ್ರೀತಿಯನ್ನು ಜಗಕ್ಕೆ ಸಾರಿ. ಕ್ರಿಸ್ತರ ಸಂದೇಶವನ್ನು ಎಲ್ಲೆಡೆ ಪಸರಿಸಿ, ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಎಲ್ಲರಿಗೂ ಕೋರೋಣ.

mandira

samethadka

maril

devus

bannoru

bannoru-2

maril-2

darbe

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.