ಬೆಳಂದೂರು: ಎ.ಟಿ.ಎಂ ಕಾರ್ಡ್, ಬ್ಯಾಂಕ್ ಖಾತೆಗಳಿಂದ ಸಿಗುವ ಲಾಭಗಳ ಮಾಹಿತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1

belandooru

  * ಕುಟುಂಬದ ಭದ್ರತೆಯ ಇನ್ಯೂರೆನ್ಸ್ ಸಹ ಮೋದಿಯವರ ಯೋಜನೆಗಳಲ್ಲಿ ಒಂದು – ಪ್ರಮೀಳಾ ಜನಾರ್ದನ

  * ಯೋಜನೆ ಅನುಷ್ಠಾನಗೊಳ್ಳಲು ಎಲ್ಲರ ಸಹಕಾರ ಅಗತ್ಯ- ಉಮೇಶ್ವರಿ ಅಗಳಿ

ಕಾಣಿಯೂರು: ಪ್ರಧಾನಿ ನರೇಂದ್ರ ಮೋದಿಯವರ ಹಲವು ಯೋಜನೆಗಳು ಇವತ್ತು ಜನಮಾನಸದಲ್ಲಿ ಅಚ್ಚಳಿಯದೇ ನಿಂತಿದೆ. ಅವುಗಳಲ್ಲಿ ಒಂದಾದ ಜನಧನ ಯೋಜನೆಯನ್ನು ಕನಿಷ್ಠ ದುಡಿದವರು ಸಹ ಬ್ಯಾಂಕ್ ಖಾತೆ ಹೊಂದಿ ಈ ಪ್ರಯೋಜನ ಪಡೆಯಬಹುದು. ಅದಲ್ಲದೇ ಕೇವಲ ವರುಷಕ್ಕೆ ರೂ ೧೨ ಪಾವತಿಸಿ ಕುಟುಂಬದ ಭದ್ರತೆಯ ಇನ್ಯೂರೆನ್ಸ್ ಯೋಜನೆ ಸಹ ನರೇಂದ್ರ ಮೋದಿಯವರ ಯೋಜನೆಗಳಲ್ಲಿ ಒಂದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕಲ್ಪನೆಯ ದೂರದೃಷ್ಠಿಯ ಜನಪರ ಯೋಜನೆಗಳು ಬಹುಕಾಲದ ನಂತರ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಅನುಷ್ಠಾನಗೊಳ್ಳುತ್ತಾ ಇದೆ ಎಂದು ಬೆಳಂದೂರು ಕ್ಷೇತ್ರದ ಜಿ.ಪಂ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು. ಅವರು ದ ೨೩ರಂದು ಬೆಳಂದೂರು ಗ್ರಾ.ಪಂ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಾಣಿಯೂರು ಇವರ ವತಿಯಿಂದ ಬೆಳಂದೂರು ಗ್ರಾ.ಪಂ ಸಭಾಂಗಣದಲ್ಲಿ ನಡೆದ ಗ್ರಾಮಗಳಲ್ಲಿ ಎ.ಟಿ.ಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಿಂದ ಸಿಗುವ ಲಾಭಗಳ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಮಾತಾಡಿದರು. ಎ.ಟಿ.ಎಂ ಕಾರ್ಡ್ ಮೂಲಕವೇ ಪ್ರತಿಯೊಂದು ಕಾರ್ಯ ನಿರ್ವಾಹಿಸಬೇಕಾದ ಕಾರಣ ಕಾರ್ಡನ್ನು ಬಳಸುವ ಬಗ್ಗೆ ತಿಳಿದವರಿಂದ ಮಾಹಿತಿಯನ್ನು ಪಡೆದುಕೊಂಡು ವ್ಯವಹರಿಸಬೇಕಾಗಿದೆ. ಯೋಜನೆಗಳು ಹಲವಾರು ಇದೆ, ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸಗಳನ್ನು ನಾವೆಲ್ಲ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಳಂದೂರು ಗ್ರಾ.ಪಂ ಅಧ್ಯಕ್ಷೆ ಉಮೇಶ್ವರಿ ಅಗಳಿರವರು, ಜನರು ಹೆಚ್ಚಿನ ರೀತಿಯಲ್ಲಿ ಬ್ಯಾಂಕ್‌ಗಳಲ್ಲಿ ಖಾತೆಯನ್ನು ತೆರೆದು ಎ.ಟಿ.ಎಂ ಪಡೆಯುವುದರ ಮೂಲಕ ವ್ಯವಹಾರ ನಡೆಸಬೇಕು. ಇದು ಹೆಚ್ಚಿನ ರೀತಿಯಲ್ಲಿ ಕಾರ್ಯರೂಪಗೊಳ್ಳಲು ಗ್ರಾ.ಪಂ ಸದಸ್ಯರು ಸೇರಿದಂತೆ ಎಲ್ಲರೂ ಜನಸಾಮಾನ್ಯರಿಗೆ ಸಹಕಾರ ನೀಡಬೇಕೆಂದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಾಣಿಯೂರು ಶಾಖೆಯ ಪ್ರಬಂಧಕ ರಾಮಚಂದ್ರ ರಾವ್‌ರವರು ಮಾಹಿತಿ ನೀಡಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನವೀನ್‌ರವರು ಉಪಸ್ಥಿತರಿದ್ದರು. ಗ್ರಾ.ಪಂ ಕಾರ್ಯದರ್ಶಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಚೆಕ್ ವಿತರಣೆ: ಇತ್ತೀಚೆಗೆ ನಿಧನ ಹೊಂದಿದ ಬೆಳಂದೂರು ಗ್ರಾಮದ ಶಿವಪ್ಪ ಆಚಾರ್ಯ ಬೆಳಂದೂರು ಇವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಾಣಿಯೂರು ಶಾಖೆಯಲ್ಲಿ ಜನಧನ್ ಖಾತೆ ಹೊಂದಿದ್ದು, ಯೋಜನೆಯ ಮೂಲಕ ಬಂದ ಇನ್ಸೂರೆನ್ಸ್ ಹಣ ರೂ ೩೦ಸಾವಿರದ ಚೆಕ್‌ನ್ನು ಮೃತರ ಪತ್ನಿ ಚಂದ್ರಾವತಿ ಇವರಿಗೆ ಹಸ್ತಾಂತರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.