ಲಾವತ್ತಡ್ಕ: ಬೈಕ್‌ಗಳ ಮುಖಾಮುಖಿ ಡಿಕ್ಕಿ-ಸಾವು

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕ ಸಮೀಪ ದ.25ರಂದು ಸಂಜೆ ನಡೆದಿದೆ. ಇಚ್ಲಂಪಾಡಿ ಗ್ರಾಮದ ಉರೆಜಾಲು ನಿವಾಸಿ ಮನೋಜ್‌ರವರು (23ವ.) ಮೃತಪಟ್ಟವರು. ಮನೋಜ್‌ರವರು ರಿಕ್ಷಾ ಚಾಲಕರಾಗಿದ್ದರು. ದ.25ರಂದು ಅವರು ಮನೆಯಿಂದ ಬೈಕ್‌ನಲ್ಲಿ ಉದನೆಗೆ ಹೋಗಿ ಅಲ್ಲಿಂದ ಮನೆಗೆ ವಾಪಾಸಾಗುತ್ತಿದ್ದ ವೇಳೆ ನೆಲ್ಯಾಡಿಯಿಂದ ಉದನೆ ಕಡೆಗೆ ತೋಮಸ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ನಡುವೆ ಲಾವತ್ತಡ್ಕ ಕಳೆಂಜಾಳ್ ಎಂಬಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದೆ. ತೋಮಸ್‌ರವರು ತಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಲೆಂದು ಕಳೆಂಜಾಲ್‌ನಲ್ಲಿ ಬೈಕ್‌ನ್ನು ರಾಷ್ಟ್ರೀಯ ಹೆದ್ದಾರಿಯಿಂದ ಬಲಬದಿಗೆ ತಿರುಗಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಮನೋಜ್‌ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಬೈಕ್‌ನಲ್ಲಿದ್ದ ತೋಮಸ್, ಅವರ ಪತ್ನಿ ಶೈಲಾ ಹಾಗೂ ಮಗಳು ಶ್ರೇಯಾ ಎಂಬವರು ಗಾಯಗೊಂಡು ನೆಲ್ಯಾಡಿ ಆಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.