ಒಳಮೊಗ್ರುವಿನಿಂದ ನಾಪತ್ತೆಯಾಗಿದ್ದ  ಮಹಿಳೆ ನಾಪೋಕ್ಲುವಿನಲ್ಲಿ ಪತ್ತೆ

Puttur_Advt_NewsUnder_1
Puttur_Advt_NewsUnder_1

olamogruಪುತ್ತೂರು: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೋರ್ವರು ಮಡಿಕೇರಿಯ ನಾಪೋಕ್ಲುವಿನಲ್ಲಿ ಪ್ರಿಯಕರನ ಜೊತೆಯಲ್ಲಿ ಪತ್ತೆಯಾಗಿದ್ದರೆ.

2015ರ ಜೂ.15ರಂದು ಮನೆಯಿಂದ ಗಾರ್ಬಲ್ ಕೆಲಸಕ್ಕೆಂದು ತೆರಳಿದ್ದ, ಒಳಮೊಗ್ರು ಗ್ರಾಮದ ಕಡ್ತಿಮಾರ್ ನಿವಾಸಿ ಕೃಷ್ಣಪ್ಪ ಪೂಜಾರಿಯವರ ಪತ್ನಿ ಉಮಾವತಿ (45ವ) ಎಂಬವರು ನಾಪತ್ತೆಯಾಗಿದ್ದರು. ಇದೀಗ ಮಹಿಳೆಯನ್ನು ಪತ್ತೆಹಚ್ಚುವಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿಗಳು ಯಶಸ್ವಿಯಗಿದ್ದಾರೆ. ಮಹಿಳೆ ನಾಪೋಕ್ಲು ಚೆರಿಯಪರಂಬು ಎಂಬಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಪ್ರಿಯಕರ ಬಾಲಕೃಷ್ಣ ಪೂಜಾರಿ ಎಂಬವರ ಜೊತೆ ವಾಸವಾಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆ ಪತ್ತೆಗೆ ಪ್ರಯತ್ನವಾಗಿತ್ತು: ಉಮಾವತಿಯವರು ನಾಪತ್ತೆಯಾದ ಬಳಿಕ ಅವರ ಪತ್ತೆಗಾಗಿ ಸುಳ್ಯ, ಮಡಿಕೇರಿ, ಮೈಸೂರು, ಕೇರಳ ರಾಜ್ಯದಲ್ಲಿ ಪತ್ತೆಗೆ ಪ್ರಯತ್ನಿಸಲಾಗಿತ್ತಾದರೂ ವಿಫಲವಾಗಿತ್ತು. ಬಳಿಕ ದ.24ರಂದು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿಯವರ ಮಾರ್ಗದರ್ಶನದಂತೆ ಸಂಪ್ಯ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.