ನರಿಮೊಗರು ಶಾಂತಿಗೋಡು ಸರ್ವೆ ಗ್ರಾಮಗಳ ಭೇಟಿ – ಶಾಂತಿಗೋಡು ಪಾದೆ ಮನೆಗೆ ಆಗಮನ

Puttur_Advt_NewsUnder_1
Puttur_Advt_NewsUnder_1

ನರಿಮೊಗರು: ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಗೌಡ ಮಹಿಳಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಧರ್ಮಜಾಗೃತಿ ಮೂಡಿಸಲು ಡಿ.27ರಂದು ನರಿಮೊಗರು, ಶಾಂತಿಗೋಡು ಹಾಗೂ ಸರ್ವೆಗ್ರಾಮಗಳಿಗೆ ಭೇಟಿ ನೀಡಲಿದ್ದು ಸ್ವಾಮೀಜಿಯವರು ಅದೇ ದಿನ ಬೆಳಿಗ್ಗೆ ಶಾಂತಿಗೋಡು ಗ್ರಾಮದ ಪಾದೆ ಎಸ್.ಪಿ ಮೋಹನಗೌಡರ ಮನೆಗೆ ಆಗಮಿಸಲಿದ್ದಾರೆ. ಡಿ.27ರಂದು ಪಾದೆ ಎಸ್.ಪಿ.ಮೋಹನ ಗೌಡರವರ ಮನೆಯಲ್ಲಿ ಬೆಳಿಗ್ಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಶಾಖಾಮಠದ ಶ್ರೀಧರ್ಮಪಾಲನಾಥ ಸ್ವಾಮೀಜಿಯವರು ಉಪಸ್ಥಿತರಿರುವರು. ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಪಿ.ನಾರಾಯಣ ಗೌಡ ಪಾದೆರವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಉಪನ್ಯಾಸಕಿ ಪುಷ್ಪಲತಾ ಡಿ.ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.