ಬನ್ನೂರು ಕಟ್ಟೆ: ಮನೆಯ ಮುಂಬಾಗಿಲು ಮುರಿದು ಕಳವು

Puttur_Advt_NewsUnder_1
Puttur_Advt_NewsUnder_1

bannurukatteಪುತ್ತೂರು: ಬೀಗ ಹಾಕಿದ ಮನೆಯೊಂದರ ಮುಂಬಾಗಿಲು ಒಡೆದು ಕಳವು ನಡೆಸಿದ ಘಟನೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬನ್ನೂರು ಕಟ್ಟೆ ಎಂಬಲ್ಲಿ ನಡೆದಿದ್ದು, ಡಿ.26ರಂದು ಬೆಳಕಿಗೆ ಬಂದಿದೆ.

ಬನ್ನೂರು ಕಟ್ಟೆ ನಿವಾಸಿ ಮಹಾಲಿಂಗ ಪಾಟಾಳಿರವರ ಮನೆಯಲ್ಲಿ ಈ ಕಳವು ಪ್ರಕರಣ ನಡೆದಿದೆ. ಡಿ.24ರಂದು ಬೆಳಗ್ಗೆ ಮನೆಗೆ ಬೀಗ ಹಾಕಿ ಮನೆ ಮಂದಿ ಮಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಡಿ.26ರಂದು ಬೆಳಗ್ಗೆ ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಮುಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿ ಕಪಾಟಿನಲ್ಲಿರಿಸಲಾಗಿದ್ದ 20 ಸಾವಿರ ರೂಪಾಯಿ ನಗದು, ಎರಡು ಬೆಳ್ಳಿಯ ದೀಪ, 12 ಬೆಳ್ಳಿಯ ಕಾಯಿನ್, 1 ಬೆಳ್ಳಿಯ ತಟ್ಟೆ, 1 ಬೆಳ್ಳಿಯ ಹರಿವಾಣವನ್ನು ಕಳವು ಗೈದಿದ್ದಾರೆ.  ಕಳವುಗೈದ ಸೊತ್ತಿನ ಒಟ್ಟು ಮೌಲ್ಯ 24500ರೂ ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಅರಿತ ನಗರಠಾಣಾ ಅಪರಾಧ ಪತ್ತೆ ವಿಭಾಗದ ಎಸ್.ಐ ವೆಂಕಟೇಶ್ ಭಟ್, ಪ್ರೊಬೇಷನರಿ ಎಸ್‌ಐ ಮಂಜುನಾಥರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ. ಘಟನೆಯ ಬಗ್ಗೆ ಮನೆಯ ಮಾಲಕರು ನೀಡಿದ ದೂರಿನಂತೆ ಪುತ್ತೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.