ಧರ್ಮ ಜಾಗೃತಿ ಕಾರ್ಯಕ್ರಮಕ್ಕೆ ಬ್ಯಾನರ್ ಅಳವಡಿಸಿ ಸೌಹಾರ್ದತೆ ಮೆರೆದ ಪಾಪೆತ್ತಡ್ಕದ ಮುಸ್ಲಿಂ ಬಾಂಧವರು

Puttur_Advt_NewsUnder_1
Puttur_Advt_NewsUnder_1

 

bannerಪುತ್ತೂರು: ಹಿಂದೂ ಧರ್ಮದ ಕಾರ್ಯಕ್ರಮಕ್ಕೆ ಮುಸ್ಲಿಂ ಬಾಂಧವರು ಶುಭ ಕೋರಿ ಬ್ಯಾನರ್ ಹಾಕುವ ಮೂಲಕ ಕೋಮು ಸೌಹಾರ್ದತೆ ಹಾಗೂ ಧರ್ಮ ಸಾಮರಸ್ಯತೆಯನ್ನು ಸಾರಿರುವ ಘಟನೆ ಮುಂಡೂರು ಗ್ರಾಮದ ಪಾಪೆತ್ತಡ್ಕದಲ್ಲಿ ನಡೆದಿದೆ.

ಧರ್ಮ ಜಾಗೃತಿಗಾಗಿ ತಾಲೂಕಿನಲ್ಲಿ ಒಂದು ವಾರಗಳ ಕಾಲ ಆಯ್ದ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಶ್ರೀ ಆದಿ ಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಗಳು ಡಿ.26ರಂದು ಮುಂಡೂರು ಗ್ರಾಮದ ಪಾಪೆತ್ತಡ್ಕ, ಕೆರೆಮನೆ ನಳಿನಿ ಲೋಕಪ್ಪ ಗೌಡರ ಮನೆಗೆ ’ಧರ್ಮ ಜಾಗೃತಿ ಮತ್ತು ಗುರುವಂದನಾ’ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಪಾಪೆತ್ತಡ್ಕದ ಮುಸ್ಲಿಂ ಬಾಂಧವರು ’ಕಾರ್ಯಕ್ರಮಕ್ಕೆ ಸ್ವಾಗತ ಬಯಸುವ’ ಬೃಹತ್ ಬ್ಯಾನರ್‌ವೊಂದನ್ನು ಅಳವಡಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಮಾದರಿಯಾಗಿದ್ದಾರೆ. ಹಿಂದೂಗಳ ಕಾರ್ಯಕ್ರಮಕ್ಕೆ ಮುಸ್ಲಿಮರು ಅದೇ ರೀತಿ ಮುಸ್ಲಿಮರ ಕಾರ್ಯಕ್ರಮಕ್ಕೆ ಹಿಂದೂಗಳು ಸ್ವಾಗತ ಕೋರುವ ಪ್ರಮೇಯ ಮುಂದುವರಿದರೆ ಸಮಾಜದಲ್ಲಿ ನಿತ್ಯ ಸೌಹಾರ್ದತೆ ನೆಲೆಗೊಳ್ಳಬಹುದು ಎಂಬ ಮಾತು ಸ್ಥಳೀಯವಾಗಿ ಕೇಳಿ ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.