Breaking News

ಇಚ್ಲಂಪಾಡಿ ಚರ್ಚ್‌ನಲ್ಲಿ  ಕ್ರಿಸ್‌ಮಸ್ ಸಂಜೆ

Puttur_Advt_NewsUnder_1
Puttur_Advt_NewsUnder_1

ichlampady2 ichlampady1ನೆಲ್ಯಾಡಿ: ಜಾರ್ಜಿಯನ್ ತೀರ್ಥಟನಾ ಕೇಂದ್ರವಾಗಿರುವ ಇಚ್ಲಂಪಾಡಿ ಸೈಂಟ್ ಜೋರ್ಜ್ ಅರ್ಥೋಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ  ಕ್ರಿಸ್‌ಮಸ್ ಸಂಜೆ  ಕಾರ್ಯಕ್ರಮ ದ.23ರಂದು ನಡೆಯಿತು.

ಚರ್ಚ್‌ನ ಧರ್ಮಗುರು ರೆ|ಫಾ| ಸುನಿಲ್ ಥೋಮಸ್ ಪಳ್ಳಿಚ್ಚಿರರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರಿಸ್‌ಮಸ್ ಸಂದೇಶ ನೀಡಿದ, ಇಚಿಲಂಪಾಡಿ ಸೈಂಟ್ ಥೋಮಸ್ ಮಲಂಕರ ಕಾಥೋಲಿಕ್ ಚರ್ಚ್‌ನ ಧರ್ಮಗುರು ರೆ|ಫಾ| ಆಂಟನಿ ಒ.ಐ.ಸಿ.,ಯವರು, ಕ್ರಿಸ್ತನ ಜನನವು ನಮ್ಮೆಲ್ಲರ ಹೃದಯದಲ್ಲಿ ಆದಾಗ ಜೀವನ ಸಾರ್ಥಕತೆಯನ್ನು ಹೊಂದುತ್ತದೆ ಎಂದರು.

ಚರ್ಚ್‌ನ ಸಂಘಟನೆಗಳಾದ ಸಂಡೇ ಸ್ಕೂಲ್, ಯೂತ್ ಅಸೋಸಿಯೇಷನ್, ಮರ್ಥಮರಿಯಾಂ ಸಮಾಜಂ, ಶುಶ್ರೂಷಕರ ಸಂಘ ಹಾಗೂ ದೇವಾಲಯದ ವಿವಿಧ ಸದಸ್ಯರುಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು. ಯೂತ್ ಅಸೋಸಿಯೇಷನ್ ಸದಸ್ಯರಿಂದ ಕ್ರಿಸ್‌ಮಸ್ ಸಂದೇಶವನ್ನು ಸಾರುವ ಗೋದಲಿಯನ್ನು ನಿರ್ಮಿಸಲಾಯಿತು. ದೇವಾಲಯದ ಸದಸ್ಯರು ಉಪಹಾರಗಳನ್ನು ತಂದು ಪರಸ್ಪರ ಹಂಚಿ ಸ್ನೇಹ ಭೋಜನ ಸವಿದರು.  ಮೇಘಾ ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಜಿ.ಥೋಮಸ್ ವಂದಿಸಿದರು. ಕಾರ್ಯಕ್ರಮದಲ್ಲಿ ದೇವಾಲಯದ ಹಾಗೂ ಸಮೀಪದ ದೇವಾಲಯದ ಸದಸ್ಯರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.