ಎಪಿಎಂಸಿ ಸಂತೆಯಲ್ಲಿ ಸಾಧಾರಣ ವ್ಯಾಪಾರ

Puttur_Advt_NewsUnder_1
Puttur_Advt_NewsUnder_1

apmcಪುತ್ತೂರು: ಎಪಿಎಂಸಿಯಲ್ಲಿ ಸೋಮವಾರ ನಡೆದ ಸಂತೆಯಲ್ಲಿ ವ್ಯಾಪಾರಸ್ಥರು, ಸಾರ್ವಜನಿಕರ ಸಂಖ್ಯೆ ವಿರಳವಾಗಿದ್ದು, ದ.25ರಂದು ಕಿಲ್ಲೆ ಮೈದಾನದಲ್ಲಿ ಸಾಧಾರಣ ವ್ಯಾಪಾರ ನಡೆದಿದೆ. ಪ್ರಾರಂಭಗೊಂಡ ಆದಿತ್ಯವಾರ ಸಂತೆ ಎಪಿಎಂಸಿ ಸಂತೆಗೆ ತೊಡಕಾಗದಂತೆ ಕಾಣುತ್ತಿದೆ.

ಎಪಿಎಂಸಿಯಲ್ಲಿನ ಸಂತೆಗೆ ಬೆಳಗ್ಗಿನಿಂದ ಜನರ ಓಡಾಡ ವಿರಳವಾಗಿತ್ತು. ಸಂತೆಗೆ ಬರುವವರಿಗಾಗಿ ಉಚಿತ ಪ್ರಯಾಣದ ಮಿನಿ ಬಸ್ ಖಾಲಿಯಾಗಿ ನಿಂತಿತ್ತು. ಒಂದು ಕಡೆ ವ್ಯಾಪಾರಸ್ಥರು ಕಡಿಮೆ, ಸಾರ್ವಜನಿಕರೂ ಕಡಿಮೆ ಕಾಣುತ್ತಿದ್ದು, ಸಂಜೆ ವೇಳೆ ಸ್ವಲ್ಪ ಜನರ ಓಡಾಟ ಹೆಚ್ಚಾಗಿತ್ತು. ಒಟ್ಟಿನಲ್ಲಿ ಕಿಲ್ಲೆ ಮೈದಾನಕ್ಕೆ ಸಂತೆ ಮತ್ತೆ ಕಾಲಿಟ್ಟಿದ್ದರಿಂದ ಎಪಿಎಂಸಿಯಲ್ಲಿನ ಸಂತೆಗೆ ಸ್ವಲ್ಪ ಮಟ್ಟಿನ ತೊಡಕಾದಿದೆ. ಈ ಕುರಿತು ಎಪಿಎಂಸಿ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದ್ದು, ಉಚಿತ ವಾಹನ ಓಡಾಟವನ್ನು ಸ್ಥಗಿತ ಗೊಳಿಸುವ ಕುರಿತು ದ.26ರ ಸಂತೆಯ ಸ್ಥಿತಿಯನ್ನು ನೋಡಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.