Breaking News

ಎಪಿಎಂಸಿ ಸಂತೆಯ ಉಚಿತ ವಾಹನ ಸ್ಥಗಿತಕ್ಕೆ ಚಿಂತನೆ ಎಪಿಎಂಸಿ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1

 

apmc-sabheಪುತ್ತೂರು: ಕಿಲ್ಲೆ ಮೈದಾನದಲ್ಲಿ ರವಿವಾರ ಸಂತೆ ಆರಂಭಗೊಂಡಿರುವ ಹಿನ್ನಲೆಯಲ್ಲಿ ಇದೀಗ ಎಪಿಎಂಸಿಯಲ್ಲಿನ ಸಂತೆಗೆ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗಿದ್ದ ವಾಹನ ಖಾಲಿ ಖಾಲಿಯಾಗಿ ಓಡಾಡುತ್ತಿದೆ. ಈ ನಿಟ್ಟಿನಲ್ಲಿ ಉಚಿತ ವಾಹ್ಞನ ಸಂಚಾರವನ್ನು ಸ್ಥಗಿತಗೊಳಿಸುವ ಚಿಂತನೆ ಎಪಿಎಂಸಿಯಲ್ಲಿದೆ. ಈ ಕುರಿತು ಸೋಮವಾರದ ರಾತ್ರಿಯವರೆಗಿನ ಪರಿಸ್ಥಿತಿ ನೋಡಿ ಮುಂದೆ ಮುಂದಿನ ತೀರ್ಮಾನ ಕೈಗೊಳ್ಳಲು ಎಪಿಎಂಸಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಮಾತನಾಡಿ, ಎಪಿಎಂಸಿಯಿಂದ ಸೋಮವಾರ ಸಂತೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ವಾಹನದಲ್ಲಿ ಜನಸಂಖ್ಯೆ ಕಡಿಮೆ ಆಗಿದೆ. ವಾಹನ ಓಡಾಟವು ನಡೆಯುವುದಿಲ್ಲ. ಈ ನಿಟ್ಟಿನಲ್ಲಿ ದ.26 ರ ಎಪಿಎಂಸಿ ಸಂತೆಯನ್ನು ಗಮನಿಸಿ, ನಗರದಿಂದ ಮಾರುಕಟ್ಟೆ ಪ್ರಾಂಗಣಕ್ಕೆ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸಿರುವ ಉಚಿತ ವಾಹನ ಓಡಾಟದ ಅಗತ್ಯದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನಿರೀಕ್ಷಿತ ಪ್ರಮಾಣದಲ್ಲಿ ಜನ ಬಾರದಿದ್ದರೆ ಉಚಿತ ವಾಹನ ಓಡಾಟವನ್ನು ನಿಲ್ಲಿಸಲಾಗುವುದು. ಆದರೆ ಎಪಿಎಂಸಿಯಲ್ಲಿ ಸಂತೆ ಎಂದಿನಂತೆ ಮುಂದುವರಿಯಲಿದೆ ಎಂದರು.

ಫೆ.4ರಂದು ವಿವಿಧ ಕಾಮಗಾರಿ ಉದ್ಘಾಟನೆ: ಎಪಿಎಂಸಿಯಲ್ಲಿನ ರೈತ ಸಭಾಭವನ, ಅತಿಥಿ ಗೃಹ, ಪ್ರವೇಶದ್ವಾರ, ಕಾಂಕ್ರೀಟ್ ರಸ್ತೆಗಳು, ಕಡಬ ವಾರ್ಡ್‌ನ ವಾಣಿಜ್ಯ ಸಂಕೀರ್ಣ ಮತ್ತಿತರ ಕಾಮಗಾರಿಗಳು ಸೇರಿದಂತೆ ೪ ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಫೆ.4 ರಂದು ನಡೆಸಲಾಗುವುದು ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಹೇಳಿದರು. ಈ ಕುರಿತು ಸಚಿವರ, ಸಂಸದ, ಶಾಸಕರನ್ನು ಆಮಂತ್ರಿಸಲು ಸದಸ್ಯರಲ್ಲಿ ಮಾಹಿತಿ ನೀಡಿದರು. ಕಾಮಗಾರಿ ದಿನಾಂಕವನ್ನು ಒಂದೆರಡು ದಿನ ಆಚೆ ಈಚೆ ಬದಲಾಯಿಸುವ ಕುರಿತು ನಿರ್ದೇಶಕ ಮಹೇಶ್ ರೈ ಅಂಕೊತ್ತಿಮಾರ್ ಸಲಹೆ ನೀಡಿದರು. ದಿನಾಂಕ ಬದಲಾಗಿ ಮುಂದಕ್ಕೆ ಹಾಕಿದರೆ ಚುನಾವಣೆಗೆ ಅಧಿಸೂಚನೆ ಬಂದರೆ ಮತ್ತೆ ಯಾವುದೇ ಕಾಮಗಾರಿ ಉದ್ಘಾಟನೆಗೆ ಅವಕಾಶವಿರುವುದಿಲ್ಲ ಎಂದು ಸಭೆಯಲ್ಲಿ ಅಧ್ಯಕ್ಷತೆ ತಿಳಿಸಿದರು.

ಸೇವೆಯ ಮುನ್ನ ರೇಮ್ಸ್‌ಗೆ ಹಣ ಪಾವತಿಯಿಲ್ಲ: ಎಪಿಎಂಸಿ ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿಯವರು ಮಾತನಾಡಿ ರಾಜ್ಯದ ಎಲ್ಲಾ ಎಪಿಎಂಸಿಗಳು ಅನ್‌ಲೈನ್ ಟ್ರೇಡಿಂಗ್ ಸರ್ವಿಸ್ ಆರಂಭಿಸುವ ರೆಮ್ಸ್‌ಗೆ ಹಣ ಪಾವತಿಸಿದೆ. ಪುತ್ತೂರು ಎಪಿಎಂಸಿ ಪಾವತಿಸಿಲ್ಲ. ಈ ಬಗ್ಗೆ ನಿರ್ದೇಶಕರಿಂದ ಪಾವತಿಗೆ ಸೂಚನೆ ಬಂದಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾದಾಗ ಆಕ್ಷೇಪಿಸಿದ ಮಹೇಶ್ ರೈ ಅಂಕೋತ್ತಿಮಾರ್, ಈ ಹಿಂದೆ ಹಣ ಪಾವತಿಸಬಾರದು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಆ ತೀರ್ಮಾನಕ್ಕೆ ಬದ್ಧರಾಗಿರೋಣ. ಅದನ್ನು ಬದಲಾಯಿಸುವುದು ಸರಿ ಅಲ್ಲ ಎಂದರು. ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕ ಮಂಡಳಿಯಿಂದ, ರೆಮ್ಸ್ ಸಂಸ್ಥೆಗೆ ಸೇವೆ ಆರಂಭಿಸುವ ಮೊದಲು ಹಣ ಪಾವತಿಸಿ ಎಂದು ಲಿಖಿತವಾಗಿ ತಿಳಿಸಿದರೆ, ನಾವು ಹಣ ಪಾವತಿಸೋಣ. ಈ ತನಕ ರೆಮ್ಸ್ ಸಂಸ್ಥೆ ಒಡಂಬಡಿಕೆ ಪತ್ರವನ್ನು ಕೊಟ್ಟಿಲ್ಲ. ಮಾಹಿತಿ ಹಕ್ಕಿನಲ್ಲಿ ಕೇಳಿದರೂ ಸಿಕ್ಕಿಲ್ಲ. ಹಾಗಾಗಿ ಈಗ ಹಣ ಪಾವತಿಸಿ, ಮುಂದೆ ನಾವು ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂದು ಹೇಳಿದರು. ಈ ಬಗ್ಗೆ ಚರ್ಚಿಸಲು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಕೆ.ಎಸ್. ರಂಗನಾಥ ರೈ, ಸಾಜ ರಾಧಾಕೃಷ್ಣ ಆಳ್ವ, ಗುರುನಾಥ ಗೌಡ ಪಿ.ಎನ್, ಶೀನಪ್ಪ ಗೌಡ, ಅಬ್ದುಲ್ ಶಕೂರ್ ವಿ.ಎಚ್, ಪ್ರಮೋದ್.ಕೆ.ಎಸ್, ಸೋಮನಾಥ, ಮಾಣಿಕ್ಯ ರಾಜ್ ಪಡಿವಾಳ್ ಉಪಸ್ಥಿತರಿದ್ದರು. ಲೆಕ್ಕಿಗ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.

ರೂ. 6ಕೋಟಿ ಸಂಗ್ರಹವಾದರೆ ಎಪಿಎಂಸಿ ಮೇಲ್ದರ್ಜೆಗೆ

ಮಾರುಕಟ್ಟೆ ಶುಲ್ಕ ಸಂಗ್ರಹದಲ್ಲಿ ಪುತ್ತೂರು ಎಪಿಎಂಸಿ ಗುರಿ ಮೀರಿ ಸಾಧನೆ ತೋರಿದೆ. ಪ್ರಸ್ತಕ ವರ್ಷದಲ್ಲಿ ರೂ.2.12 ಕೋ. ಗುರಿ ಇದ್ದು,   ನವೆಂಬರ್ ತಿಂಗಳಿನ ತನಕ 4 ಕೋ. ರೂ. ಸಂಗ್ರಹಗೊಂಡಿದೆ. ಮಾರ್ಚ್ ಅಂತ್ಯಕ್ಕೆ 6 ಕೋ.ರೂ ಸಂಗ್ರಹದ ನಿರೀಕ್ಷೆ ಇದೆ. 5 ಕೋ. ರೂ. ಆದಾಯ ದಾಟಿದ ಎಪಿಎಂಸಿ ಮೇಲ್ದರ್ಜೆಗೆ ಏರಲಿದೆ. ಈ ನಿಟ್ಟಿನಲ್ಲಿ ಪುತ್ತೂರು ಎಪಿಎಂಸಿಗೂ ಮೇಲ್ದರ್ಜೆಗೆ ಏರುವ ಅವಕಾಶ ಇದೆ.

-ಕೃಷ್ಣ ಶೆಟ್ಟಿ, ಅಧ್ಯಕ್ಷರು, ಎಪಿಎಂಸಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.