Breaking News

ಪ್ರಶಾಂತ್ ಮಹಲ್ 3ನೇ ವರ್ಷಕ್ಕೆ ಪಾದಾರ್ಪಣೆ- ಲಕ್ಷ್ಮೀ ಪೂಜೆ, ಗಣ್ಯರಿಂದ ಶುಭಾಶಯ

Puttur_Advt_NewsUnder_1
Puttur_Advt_NewsUnder_1

prashanth-mahal prashanth-mahal1ಪುತ್ತೂರು: ಸಹಕಾರಿ ಧುರೀಣ, ಉದ್ಯಮಿ ಸವಣೂರು ಕೆ. ಸೀತಾರಾಮ ರೈಯವರ ಮಾಲಕತ್ವದಲ್ಲಿ ದರ್ಬೆಯಲ್ಲಿ ಕಾರ್ಯನಿರ್ವಹಿಸುತ್ತಾ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಗಣ್ಯರಿಂದ ಮೆಚ್ಚುಗೆ ಗಳಿಸಿ ಯಶಸ್ವಿಯಾಗಿ 2 ವರ್ಷಗಳನ್ನು ಪೂರೈಸಿದ ಪ್ರಶಾಂತ್ ಮಹಲ್ ದ.27ರಂದು 3ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು.

ಈ ಶುಭ ಸಂದರ್ಭದಲ್ಲಿ ಬೆಳಿಗ್ಗೆ ಪ್ರಶಾಂತ್ ಮಹಲ್‌ನಲ್ಲಿ ಲಕ್ಷ್ಮೀ ಪೂಜೆ ನಡೆಯಿತು. ವೇ.ಮೂ.ನಾಗರಾಜ್ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು. ಪೂಜೆಯ ಬಳಿಕ ವೇ.ಮೂ. ನಾಗರಾಜ್ ಭಟ್, ಉದ್ಯಮಿಗಳಾದ ವಾಮನ್ ಪೈ, ಎನ್. ಸುಂದರ ರೈ, ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ರೈ,ಕೆ. ಎಸ್, ಚಂದ್ರಶೇಖರ್‌ರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಪಾಲುದಾರ ಅಶ್ವಿನ್ ಎಲ್. ಶೆಟ್ಟಿಯವರು ಮಾತನಾಡಿ, ಪ್ರಶಾಂತ್ ಮಹಲ್‌ನ ಬೆಳವಣಿಗೆಗೆ ಸಹಕರಿಸಿದ ಎಲ್ಲಾ ಗ್ರಾಹಕರಿಗೆ, ಬಂಧು ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು. ಸೀತಾರಾಮ ರೈಯವರ ಪುತ್ರಿ ರಶ್ಮಿ ರೈ, ಮೊಮ್ಮಗ ಅಥರ್ವ ಎ. ಶೆಟ್ಟಿ,  ಆದರ್ಶ ವಿವಿಧೋzಶ ಸಹಕಾರಿ ಸಂಘದ ನಿರ್ದೇಶಕರಾದ ರಾಮಯ್ಯ ರೈ, ವಿ.ವಿ. ನಾರಾಯಣ ಭಟ್, ಕುಶಲ, ದಯಾಕರ ಆಳ್ವ, ಶಂಕರ ನಾಕ್, ಬಾಪು ಸಾಹೇಬ್, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಆದರ್ಶ ವಿವಿಧೋದ್ಧೇಶ ಸಹಕಾರಿ ಸಂಘದ  ಜನರಲ್ ಮ್ಯಾನೇಜರ್ ವಸಂತ ಜಾಲಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.