ಜಾಗದ ಗೊಂದಲ: ಉಪ್ಪಿನಂಗಡಿಯಲ್ಲಿ ಜಂಟಿ ಸರ್ವೆ ಕಾರ್ಯ

Puttur_Advt_NewsUnder_1
Puttur_Advt_NewsUnder_1

uppinangady1 uppinangady2ಉಪ್ಪಿನಂಗಡಿ: ಇಲ್ಲಿನ ಮಾಲೀಕುದ್ದೀನಾರ್ ಜುಮಾ ಮಸೀದಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಜಾಗದ ವಿಷಯಕ್ಕೆ ಸಂಬಂಧಿಸಿದ ಗೊಂದಲದಿಂದಾಗಿ ಸ್ಥಳದಲ್ಲಿ ಮಂಗಳವಾರ ಜಂಟಿ ಸರ್ವೆ ನಡೆಸಿ, ಗಡಿಗುರುತು ಹಾಕಲಾಯಿತು.

ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸ್ವಲ್ಪ ಜಾಗ ಮಾಲೀಕುದ್ದೀನಾರ್ ಮಸೀದಿಯ ವಶದಲ್ಲಿದೆ ಎಂದು ಆರೋಗ್ಯ ಕೇಂದ್ರದವರು ಹೇಳುತ್ತಿದ್ದರೆ, ಮಸೀದಿಯ ಸ್ವಲ್ಪ ಜಾಗ ಆರೋಗ್ಯ ಕೇಂದ್ರದ ವಶದಲ್ಲಿದೆ ಎಂದು ಮಸೀದಿಯವರು ಹೇಳುತ್ತಿದ್ದರು. ಈ  ಹಿನ್ನೆಲೆಯಲ್ಲಿ ಮಂಗಳವಾರ ಕಂದಾಯಾಧಿಕಾರಿಗಳ ನೇತೃತ್ವದಲ್ಲಿ ಸರ್ವೆ ಇಲಾಖೆಯವರು ಜಂಟಿ ಸರ್ವೆ ನಡೆಸಿ, ಮಾಲೀಕುದ್ದೀನಾರ್ ಮಸೀದಿ ಹಾಗೂ ಆರೋಗ್ಯ ಕೇಂದ್ರಕ್ಕೆ ಸೇರಿದ ಜಾಗವನ್ನು ಗುರುತಿಸಿ, ಗಡಿ ಗುರುತು ಮಾಡಿಕೊಟ್ಟರು.

ಸರ್ವೆ ಇಲಾಖೆಯ ದಿವಾಕರ್ ಹಾಗೂ ಶಿವಕುಮಾರ್ ಜಮೀನಿನ ಅಳತೆ ಕಾರ್ಯ ನಡೆಸಿಕೊಟ್ಟರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ, ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಅತ್ರಮಜಲು, ಸುನೀಲ್ ಕುಮಾರ್ ದಡ್ಡು, ರಮೇಶ್ ಭಂಡಾರಿ, ಮಾಲೀಕುದದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ, ಕಾರ್ಯದರ್ಶಿ ಶುಕೂರ್ ಹಾಜಿ, ಕೋಶಾಧಿಕಾರಿ ಮುಸ್ತಾಫ ಡಬಲ್‌ಫೋರ್, ಆಡಳಿತ ಮಂಡಳಿ ಸದಸ್ಯರಾದ ಅಝೀರh ನಿನ್ನಿಕಲ್, ಮುಹಮ್ಮದ್ ಕೂಟೇಲ್, ರವೂಫ್ ಯು.ಟಿ., ಮುನೀರ್ ಇಳಂತಿಲ, ಈಸುಬು ಹಾಜಿ ಇಳಂತಿಲ, ಇಬ್ರಾಹೀಂ ಕಡವಿನ ಬಾಗಿಲು, ಯೂಸುಫ್ ಗಾಂಧಿಪಾರ್ಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಉಪ್ಪಿನಂಗಡಿ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ಜಯಪ್ರಕಾಶ್, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮಕರಣಿಕ ರಮಾನಂದ ಚಕ್ಕಡಿ, ಗ್ರಾಮ ಸಹಾಯಕ ಯತೀಶ್ ಮತ್ತಿತರರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.