ಗಾಂಜಾ ಮಾರಾಟ-ಆರೋಪಿಗೆ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಾಂಜಾ ಸೇವನೆ ಮತ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಬಂಧನಕ್ಕೊಳಗಾದ ಯುವಕನಿಗೆ ನ್ಯಾಯಾಲಯ ಜಾಮೀನು ನೀಡಿದೆ.

ತಾರಿಗುಡ್ಡೆ ನಿವಾಸಿ ಅಬ್ಬಾಸ್‌ರವರ ಪುತ್ರ ರಿಯಾಜ್‌ರವರು ದ.26ರಂದು ಇಲ್ಲಿನ ಅರುಣಾ ಚಿತ್ರಮಂದಿರ ಬಳಿ ಗಾಂಜಾ ಸೇವೆನೆ ಮಾಡುತ್ತಾ ಮಾರಾಟಕ್ಕೂ ಯತ್ನಿಸುತ್ತಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿ ಪರ ವಕೀಲರಾದ ಪ್ರಸಾದ್ ರೈ, ಶ್ರೀಹರಿ, ನವೀನ್ ದೋಳ, ಉಲ್ಲಾಸ್ ವಾದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.