ಹಸುಗೂಸು ಅಪಹರಣ ಪ್ರಕರಣ ತಿಂಗಳು ಕಳೆದರೂ ಗುರಿ ಮುಟ್ಟದ ಪೊಲೀಸ್ ತನಿಖೆ

Puttur_Advt_NewsUnder_1
Puttur_Advt_NewsUnder_1

 

ಉಪ್ಪಿನಂಗಡಿ: ಮೂವರು ಯುವಕರು ಹಸುಗೂಸೊಂದನ್ನು ಬಾಡಿಗೆ ಮನೆಯಲ್ಲಿ ಸಾಕಲೆತ್ನಿಸಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ, ಮೂವರನ್ನು ಬಂಧಿಸಿದ ಘಟನೆ ನಡೆದು ಒಂದು ತಿಂಗಳು ಕಳೆದರೂ, ಇದರ ಹಿಂದಿರುವ ನೈಜ ಆರೋಪಿಗಳನ್ನು ಪತ್ತೆಹಚ್ಚಿ ತನಿಖೆಯನ್ನು ಗುರಿ ಮುಟ್ಟಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ತಂದೆ-ತಾಯಿ ಯಾರು? ಇದರ ಹಿಂದಿರುವ ನೈಜ ಆರೋಪಿಗಳ್ಯಾರು ಎಂಬ ಗೊಂದಲ ಇನ್ನೂ ಸಾರ್ವಜನಿಕ ವಲಯದಲ್ಲಿ ಮುಂದುವರಿಯುವಂತಾಗಿದೆ.

ಯಾವುದು ಪ್ರಕರಣ: 58 ದಿನಗಳ ಗಂಡು ಮಗುವೊಂದನ್ನು ಮೂವರು ಯುವಕರು ಪೆರ್ನೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಸಾಕಲೆತ್ನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ, ಮೂವರು ಯುವಕರು ಹಾಗೂ ಅವರೊಂದಿಗಿದ್ದ ಹಸುಗೂಸನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭ ಆ ಯುವಕರು “ಈ ಮಗುವಿನ ತಾಯಿ ನೇಪಾಳಿಯಾಗಿದ್ದು, ಅವರು ಅವರ ಊರಿಗೆ ತೆರಳಿದ ಕಾರಣ. ಒಂದು ತಿಂಗಳ ಮಟ್ಟಿಗೆ ಮಗುವನ್ನು ಆರೈಕೆ ಮಾಡಲು ಮಗುವಿನ ತಂದೆ ನಮ್ಮಲ್ಲಿ ವಿನಂತಿಸಿದ್ದು, ಆ ಕಾರಣದಿಂದ ಈ ಮಗುವನ್ನು ತಂದಿzವೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮಗು ಜನನವಾಗಿರುವುದಕ್ಕೆ ಆಸ್ಪತ್ರೆಯಲ್ಲಿ ನೀಡಿದ ಮಾಹಿತಿಯ ಕಾರ್ಡ್ ಅನ್ನು ತೋರಿಸಿದ್ದರು. ಅದರಲ್ಲಿ ಮಗುವಿನ ತಾಯಿಯ ಹೆಸರು ಕರೀಷ್ಮಾ ಎಂದಿದ್ದರೆ, ತಂದೆಯ ಹೆಸರು ಬೆಂಗಳೂರಿನ ಜಲಾಲು ಯಾನೆ ಜಲಾಲುದ್ದೀನ್ ಎಂದಿತ್ತು. ಆದರೆ ಈ ಯುವಕರು ನೀಡಿದ ವ್ಯತ್ತಿರಿಕ್ತ ಹೇಳಿಕೆಯಿಂದ ಸಂಶಯಗೊಂಡ ಪೊಲೀಸರು ಮರುದಿನ ಹಸುಗೂಸಿನೊಂದಿಗಿದ್ದ ಬೆಂಗಳೂರಿನ ಎಚ್.ಬಿ.ಆರ್. ಲೇ ಔಟ್‌ನ ಹೆಣ್ಣೂರು ನಿವಾಸಿ ಮುಹಮ್ಮದ್ ಉಜೈಫ್ (27ವ), ಹಿರೇಬಂಡಾಡಿಯ ಆನಡ್ಕದ ಶಿಯಾಬುದ್ದೀನ್ ಅಹಮ್ಮದ್ (27ವ) ಹಾಗೂ ಹಿರೇಬಂಡಾಡಿಯ ಅಡೆಕ್ಕಲ್‌ನ ಕೋಲಾಡಿ ನಿವಾಸಿ ಮುಹಮ್ಮದ್ ಶಬೀರ್ (21ವ) ಎಂಬ ಯುವಕರನ್ನು ಬಂಧಿಸಿ, ಅವರ ಮೇಲೆ ಮಗು ಅಪಹರಣ ಹಾಗೂ ಅಕ್ರಮ ಸಾಗಾಟ ಪ್ರಕರಣವನ್ನು ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಮಹಮ್ಮದ್ ಉಜೈಫ್‌ನನ್ನು ಮತ್ತೆ ಉಪ್ಪಿನಂಗಡಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗಾಗಿ ಹಾಗೂ ಮಗುವಿನ ನೈಜ ಹೆತ್ತವರನ್ನು ಪತ್ತೆ ಹಚ್ಚಲು ಬೆಂಗಳೂರಿಗೆ ಹೋಗಿ ಬಂದಿದ್ದರು. ಅಲ್ಲಿ ಮಗುವಿನ ನೈಜ ತಂದೆ ಎನ್ನಲಾದ ಜಲಾಲು ಎಂಬಾತನ  ಬೀಗ ಜಡಿದ ಬಾಡಿಗೆ ಮನೆ ಪತ್ತೆಯಾಗಿದೆಯಾದರೂ ವ್ಯಕ್ತಿ ಪತ್ತೆಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ತಿಂಗಳು ಕಳೆದರೂ ಈ ಪ್ರಕರಣದ ತನಿಖೆ ನಡೆಯುತ್ತಿದೆ ಎನ್ನಲಾಗಿದ್ದು, ಆದರೆ ಯಾವುದೇ ನಿಖರ ಫಲಿತಾಂಶ ಮಾತ್ರ ದೊರೆತ್ತಿಲ್ಲ.

ಕೇಸು ದಾಖಲಿಸಲೂ ವಿಳಂಬ:  ಪ್ರಕರಣದಲ್ಲಿ ಯಾವ ನೈಜ ತಾಯಿ ತನ್ನ 58 ದಿನಗಳ ಮುದ್ದಾದ ಕರುಳ ಕುಡಿಯನ್ನು ಬಿಟ್ಟು ನೇಪಾಳಕ್ಕೆ ಹೋಗಬಲ್ಲಳು ? ಎಂಬ ಪ್ರಶ್ನೆ ಮೂಡಿದ್ದರೂ, ಈ ಪ್ರಕರಣದಲ್ಲಿ ಕಾನೂನು ಬಾಹಿರ ಕೃತ್ಯ ಅಡಗಿದೆ ಎಂದು ಜನ ಸಾಮಾನ್ಯರು ಅಂದಾಜಿಸಿದ್ದರೂ, ಪೊಲೀಸ್ ಇಲಾಖೆ ಪ್ರಾರಂಭದಲ್ಲಿ ಆರೋಪಿಗಳ ಮಾತನ್ನು ನಂಬಿದಂತಿತ್ತು. ಆರೋಪಿಗಳು ಹೇಳಿದಂತೆ ನಾಳೆ ದಿನ ಬರಲಿರುವ ಮಗುವಿನ ತಂದೆಯ ಕೈಗೆ ಮಗುವನ್ನಿತ್ತು ಪ್ರಕರಣವನ್ನು ಸುಖಾಂತ್ಯಗೊಳಿಸಲಿzವೆ ಎಂಬ ಮಾತು ಸ್ಥಳೀಯ ಪೊಲೀಸ್ ಸ್ಥಳೀಯ ಅಧಿಕಾರಿಗಳಿಂದ ಕೇಳಿ ಬಂದಿತ್ತು. ಆದ್ದರಿಂದ ಈ ಯುವಕರ ಮೇಲೆ ಪ್ರಕರಣ ದಾಖಲಿಸಲು ವಿಳಂಬ ಮಾಡಿತ್ತು. ಈ ಸಂದರ್ಭ ಯಾರದೋ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂಬ   ಆರೋಪವು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಅದೇ ದಿನ ತಡ ರಾತ್ರಿ ವಿಚಾರಣೆ ನಡೆಸಿ ಪ್ರಕರಣವನ್ನು ದಾಖಲಿಸಿ, ವಶಕ್ಕೆ ಪಡೆದಿದ್ದ ಆರೋಪಿಗಳನ್ನು ಬಂಧಿಸಿದ್ದರು.

ತನಿಖೆ ಯಾಕೆ ಗುರಿಮುಟ್ಟಿಲ್ಲ?: ಬಂಧಿತರಲ್ಲಿ ಪ್ರಮುಖ ಆರೋಪಿಯೋರ್ವನನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದರೂ, ಮಗುವಿನ ಮೂಲ ಪತ್ತೆ ಹಚ್ಚಲು ಪೊಲೀಸರಿಗೆ ಅಸಾಧ್ಯವಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳನ್ನು ಕೂಡಾ ತೀವ್ರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿಲ್ಲ. ಮಗುವಿನ ಜನನಕ್ಕೆ ಸಂಬಂಧಿಸಿ ಆಸ್ಪತ್ರೆ ನೀಡಿದ ಮಾಹಿತ ಪತ್ರ ಆರೋಪಿಗಳ ಕೈಯಲ್ಲಿದ್ದರೂ, ಅದರ ನೆರವು ಪಡೆದಿಲ್ಲ  ಯಾರದೋ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಮಣಿದು ಪೊಲೀಸರು ನ್ಯಾಯೋಚಿತ ತನಿಖೆ ನಡೆಸುತ್ತಿಲ್ಲ. ಇದರ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ. ಆದ್ದರಿಂದ ಇನ್ನಾದರೂ ಪೊಲೀಸರು ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತ ತನಿಖೆಯ ಮೂಲಕ ಮಗು ಅಪಹರಣದಂತಹ ಗಂಭೀರ ಪ್ರಕರಣವನ್ನು ಬೇದಿಸಬೇಕಿದೆ ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಬಂಧಿತರ ಮೇಲೆ ಚಾರ್ಚ್‌ಶೀಟ್: ಎಎಸ್ಪಿ

ಪೊಲೀಸ್ ತನಿಖೆ ನಡೆದಿದೆ. ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿ ನೀಡಿದ ಹೇಳಿಕೆಯಂತೆ ಮಗುವಿನ ತಂದೆ ಎನ್ನಲಾದ ವ್ಯಕ್ತಿಯ ಶೋಧಕ್ಕಾಗಿ ಕಾರ್ಯಾಚರಣೆ ನಡೆದಿದೆ. ತಂದೆ ಎನ್ನಲಾದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ. ಒಂದು ವೇಳೆ  ಬಂಧಿತ ಆರೋಪಿಯು ಸುಳ್ಳು ಹೇಳಿದ್ದೇ ಆಗಿದ್ದಲ್ಲಿ ಎಲ್ಲವೂ ವ್ಯತಿರಿಕ್ತವಾಗಲಿದೆ. ಏನೇ ಆದರೂ ಪೊಲೀಸ್ ಇಲಾಖೆ ಬಂಧಿತ ವ್ಯಕ್ತಿಯನ್ನೇ ಆರೋಪಿಯನ್ನಾಗಿಸಿ ಆತನ ವಿರುದ್ದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.

-ರಿಷ್ಯಂತ್ ಸಿ.ಬಿ ಎಎಸ್ಪೀ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.