Breaking News

ಪಟ್ಟೆ ಪ್ರತಿಭಾ ಪ್ರೌಢಶಾಲೆಯಲ್ಲಿ ರಂಜಿಸಿದ ಕನ್ನಡ ಡಿಂಡಿಮ 339

Puttur_Advt_NewsUnder_1
Puttur_Advt_NewsUnder_1

dindimaಪುತ್ತೂರು: ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಪುತ್ತೂರು ಇವರಿಂದ ಪಟ್ಟೆ ಪ್ರತಿಭಾ ಪ್ರೌಢಶಾಲೆಯ ಬೆಳ್ಳಿಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದಲ್ಲಿ ಧ್ವನಿ ಮುದ್ರಿತ ವಾದ್ಯ ಸಂಗೀತದೊಂದಿಗೆ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದ 339ನೇ ಪ್ರದರ್ಶನ ಕನ್ನಡ ಭಕ್ತಿ, ಭಾವಗಾನ, ನೃತ್ಯ ವೈಭವದೊಂದಿಗೆ ಶಾಲಾ ಸಭಾಂಗಣದಲ್ಲಿ ದ. 23ರ ಸಂಜೆ ನಡೆಯಿತು.

ಕಾರ್ಯಕ್ರಮದಲ್ಲಿ ಡಿಂಡಿಮ ಪ್ರತಿಭೆಗಳಾದ ಶೃತಿ ರಂಜಿನಿ ಎಸ್. ಮುಕ್ವೆ, ಶಮಾ ಪರ್ವೀನ್ ತಾಜ್, ಅನುಶ್ರೀ ಸಾಮೆತ್ತಡ್ಕ, ವೈಷ್ಣವಿ ಅನ್ಯಾಡಿ, ಅಶ್ವಿನಿ ಪೈ ಮೊಟ್ಟೆತ್ತಡ್ಕ, ಸನ್ನಿಧಿ ಶೆಣೈ ಕೆಮ್ಮಿಂಜೆ, ಸಮೃದ್ಧಿ ಶೆಣೈ ಕೆಮ್ಮಿಂಜೆ, ಸಿಂಚನಾ ಪರ್ಪುಂಜ, ಖುಷಿ ಕುಂಬ್ರ, ಪೃಥ್ವಿ ಆರ್. ಕುಂಬ್ರ, ನೀಮಾ ಎಚ್. ಕುಂಬ್ರ, ಜಯಪ್ರಕಾಶ್ ದರ್ಬೆ ಭಾಗವಹಿಸಿದ್ದರು. ಮಕ್ಕಳೊಂದಿಗೆ ಹಿರಿಯ ಗಾಯಕಿ ಮುಬೀನಾ ಪರ್ವೀನ್ ತಾಜ್ ಧ್ವನಿಗೂಡಿಸಿದರು.

ಪ್ರಸಾದನದಲ್ಲಿ ಉಷಾ ನಾರಾಯಣ ಕುಂಬ್ರ, ಪ್ರೇಮಾ ಟಿ. ನಾಯ್ಕ, ಕುಸುಮಾ ಹರೀಶ್, ಆಶಾಲತಾ ಯು. ಪೈ, ಸಹಕರಿಸಿದರೆ ನೇಪಥ್ಯದಲ್ಲಿ ವಸಂತಿ ಆರ್. ಐತಾಳ್, ಶಕುಂತಳಾ ಎಸ್. ವಾರಂಬಳಿತ್ತಾಯ, ಶಾಲಿನಿ ಆರ್., ಸುನೀತಾ ಆರ್. ರೈ, ಪ್ರಮೀಳಾ ಟಿ. ಸಹಕರಿಸಿದರು. ಈ ಸಂದರ್ಭದಲ್ಲಿ  ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಪಿ. ನಾರಾಯಣ ಭಟ್ ಡಿಂಡಿಮ ನಿರ್ದೇಶಕರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.