ಡಾ|  ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಂದ ನರಿಮೊಗರು, ಶಾಂತಿಗೋಡು, ಸರ್ವೆ ಗ್ರಾಮಗಳ ಭೇಟಿ

Puttur_Advt_NewsUnder_1
Puttur_Advt_NewsUnder_1

narimogaru1 narimogaru2*      ಶಾಂತಿಗೋಡು ಪಾದೆ ಎಸ್.ಪಿ. ಮೋಹನ ಗೌಡರ   ಮನೆಯಲ್ಲಿ ಪಾದಪೂಜೆ

*      ಕಲುಷಿತವಾಗಿರುವ ಮನುಷ್ಯ ಮಾಧವನಾಗಬೇಕು  ಡಾ| ನಿರ್ಮಲಾನಂದನಾಥ ಸ್ವಾಮೀಜಿ

*     ಗೌಡ ಪರಂಪರೆಗೆ ಸತ್ವ ಇದೆ: ಪುಷ್ಪಾವತಿ ಡಿ.

ನರಿಮೊಗರು: ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌ ಸೇವಾ ಸಂಘ, ಗೌಡ ಮಹಿಳಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ|  ನಿರ್ಮಲಾನಂದ ಮಹಾಸ್ವಾಮೀಜಿಯವರು ಧರ್ಮಜಾಗೃತಿ ಮೂಡಿಸಲು ನರಿಮೊಗರು, ಶಾಂತಿಗೋಡು, ಸರ್ವೆ ಗ್ರಾಮಗಳ ಭೇಟಿ ಕಾರ್ಯಕ್ರಮದ ಸಲುವಾಗಿ ಡಿ.27ರಂದು ಶಾಂತಿಗೋಡು ಪಾದೆ ಎಸ್.ಪಿ. ಮೋಹನ ಗೌಡರ ಮನೆಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಭಕ್ತರಿಗೆ ಮಂತ್ರಾಕ್ಷತೆ ನೀಡಿದರು.

ಕಲುಷಿತವಾಗಿರುವ ಮನುಷ್ಯ ಮಾಧವನಾಗಬೇಕು:  ಸಭಾ ಕಾರ್ಯಕ್ರಮದಲ್ಲಿ ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ದ.ಕ. ಜಿಲ್ಲೆಯ ಜನರು ಹೀಗೆ ಬರೆಯುತ್ತಾರೋ, ಹಾಗೆಯೇ ಮಾತನಾಡುತ್ತಾರೆ. ಹಾಗೆಯೇ ಜೀವಿಸುತ್ತಾರೆ. ಇಲ್ಲಿನ ಜನರು ಕರುಣಾವಂತರು. ನಮ್ಮನ್ನು ರಾತ್ರಿ ಕಾರ್ಯಕ್ರಮ ಇಟ್ಟುಕೊಳ್ಳದೆ ಬೇಗ ಕಳುಹಿಸಿಕೊಡುತ್ತಾರೆ. ವಿಜ್ಞಾನ ಸಾರ್ವತ್ರಿಕ ಸತ್ಯ ಅಲ್ಲ. ನಮ್ಮ ಅರಿವಿಗೆ ಬಾರದೇ ಯಾವ ಕೆಲಸವನ್ನೂ ಮಾಡಬಾರದು. ಕಲುಷಿತವಾಗಿರುವ ಮನುಷ್ಯ ಮಾಧವನಾಗಬೇಕು. ಸಮಸ್ಯೆ ಇಲ್ಲದ ಬದುಕು ಮನುಷ್ಯನನ್ನು ಯಶಸ್ವಿಯಾಗಿಸಲ್ಲ. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸುವುದು ತಾಯಂದಿರ ಕರ್ತವ್ಯ. ನಮ್ಮ ದೇಶಕ್ಕೆ ಭಾರತ ಎಂಬ ಹೆಸರಿದ್ದರೂ ತಾಯಿ ಭಾರತಿ ಎಂದು ಪೂಜಿಸುತ್ತೇವೆ. ಪ್ರಜ್ಞೆ, ಜ್ಞಾನದಿಂದ ಭಗವಂತನಲ್ಲಿ ಲೀನವಾಗಬೇಕು ಎಂದರು.

ಗೌಡ ಪರಂಪರೆಗೆ ಸತ್ವ ಇದೆ:  ಉಪ್ಪಿನಂಗಡಿ ಸ.ಪ.ಪೂ. ಕಾಲೇಜ್‌ನ ಉಪನ್ಯಾಸಕಿ ಪುಷ್ಪಾವತಿ ಡಿ.ರವರು ಮುಖ್ಯ ಅತಿಥಿಗಳಿಗೆ ಮಾತನಾಡಿ, ಗೌಡ ಪರಂಪರೆಗೆ ಸತ್ವ ಇದೆ. ಗೌಡ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಶಿಕ್ಷಣದ ಕೊರತೆ ಮಾನವೀಯ ಮೌಲ್ಯಗಳ ಅಧಃಪತನಕ್ಕೆ ಕಾರಣವಾಗುತ್ತದೆ. ಮನುಷ್ಯನ ಮನಸ್ಸು ಸತ್ಯದೆಡೆಗೆ ಹೋಗಬೇಕು. ಯತಿಗಳು ಸತ್ಯದೆಡೆಗೆ ಸಾಗುತ್ತಾರೆ. ಮನಸ್ಸನ್ನು ಶುದ್ಧವಾಗಿಡಲು ಸಮಾಜದ ಬಂಧುಗಳನ್ನು ಪ್ರೀತಿಸಬೇಕು ಎಂದರು. ವೇದಿಕೆಯಲ್ಲಿ ಮಂಗಳೂರು, ಶೃಂಗೇರಿ ಶಾಖಾ ಮಠದ ಸ್ವಾಮೀಜಿ, ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಪಿ. ನಾರಾಯಣ ಗೌಡರವರು ಉಪಸ್ಥಿತರಿದ್ದರು.

ಪಾದಪೂಜೆ, ಸನ್ಮಾನ: ಪಾದೆ ಎಸ್.ಪಿ. ಮೋಹನ ಗೌಡ ದಂಪತಿ ಸ್ವಾಮೀಜಿಯವರ ಪಾದಪೂಜೆ ನಡೆಸಿದರು. ಊರ ಹಿರಿಯ ಗೌಡರುಗಳನ್ನು ಶ್ರೀಗಳು ಸನ್ಮಾಸನಿಸಿದರು.  ಬಳಿಕ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿದರು. ಶ್ರೀಗಳು ಎಸ್.ಪಿ. ಮೋಹನ ಗೌಡರ ಮನೆಯ ದೇವರ ಕೋಣೆಯಲ್ಲಿ ದೇವರಿಗೆ ಆರತಿ ಬೆಳಗಿದರು. ಭಕ್ತಾದಿಗಳಿಗೆ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳನ್ನು ಪೂರ್ಣಕುಂಭ ಸ್ವಾಗತ, ಚೆಂಡೆ, ವಾದ್ಯದೊಂದಿಗೆ ಸ್ವಾಗತಿಸಲಾಯಿತು. ಹಿತಾ ಎಂ.ಪಿ ಪ್ರಾರ್ಥಿಸಿದರು. ಉಮೇಶ್ ಕೋಡಿಬೈಲುರವರು ಸ್ವಾಗತಿಸಿದರು. ವಸಂತ ಜೆಸಿ ವೀರಮಂಗಲರವರು ಕಾರ್ಯಕ್ರಮ ನಿರೂಪಿಸಿದರು. ಯಶೋಧಾ ಕೆ.ಗೌಡ ಮಾಡತ್ತಾರುರವರು ವಂದಿಸಿದರು.

ಸಭೆಯಲ್ಲಿ ನಳಿನಿಲೋಕಪ್ಪ ಗೌಡ ಕರೆಮನೆ, ಚಿದಾನಂದ ಬೈಲಾಡಿ, ಯು.ಪಿ. ರಾಮಕೃಷ್ಣ, ಮೋಹನ ಗೌಡ ಇಡ್ಯಡ್ಕ, ಸಂಜೀವ ಮಠಂದೂರು, ಕರುಣಾಕರ ಎಲಿಯ, ಹೊನ್ನಪ್ಪ ಪೂಜಾರಿ ಕೈಂದಾಡಿ,  ಸ್ವಾಗತ ಸಮಿತಿ ಗೌರವಾಧ್ಯಕ್ಷ ದೇವಪ್ಪ ಗೌಡ ಓಲಾಡಿ, ಸಂಚಾಲಕ ವಸಂತ ಗೌಡ ಸೇರಾಜೆ, ಕೋಶಾಧಿಕಾರಿ ಬೆಳಿಯಪ್ಪ ಗೌಡ ಸರ್ವೆ, ರುಕ್ಮಯ್ಯ ಗೌಡ ಆನಾಜೆ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನರಿಮೊಗರು, ಶಾಂತಿಗೋಡು, ಸರ್ವೆ ಗ್ರಾಮಗಳ 600ಕ್ಕೂ ಅಧಿಕ ಭಕ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.