ಸಂಪ್ಯ ಉದಯಗಿರಿಯಲ್ಲಿ ಕನ್ನಡ ಡಿಂಡಿಮ-338

Puttur_Advt_NewsUnder_1
Puttur_Advt_NewsUnder_1

sampyaಪುತ್ತೂರು: ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಪುತ್ತೂರು ಇವರಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ  ಮತ್ತು ಧರ್ಮ ನಡಾವಳಿ ಸಂದರ್ಭದಲ್ಲಿ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದಲ್ಲಿ ಧ್ವನಿ ಮುದ್ರಿತ ವಾದ್ಯ ಸಂಗೀತದೊಂದಿಗೆ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದ 338 ನೇ ಪ್ರದರ್ಶನ ಕನ್ನಡ ಭಕ್ತಿ, ಭಾವಗಾನ, ನೃತ್ಯ ವೈಭವದೊಂದಿಗೆ ದ.22 ರಂದು ಸಂಪ್ಯ ಉದಯಗಿರಿಯಲ್ಲಿ ನಡೆಯಿತು.

ಹಿರಿಯ ಡಿಂಡಿಮ ಪ್ರತಿಭೆ ನೀಮಾ ಎಚ್. ಕುಂಬ್ರ ನೇತೃತ್ವ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರೀಕ್ಷಾ ಕೆ.ಜೆ., ಸಾನ್ವಿಕಾ ಕಡಬ, ಸಾಯಿ ಶ್ರೀಪದ್ಮ, ಖುಷಿ ಕುಂಬ್ರ, ಪೃಥ್ವಿ ಆರ್. ಕುಂಬ್ರ, ಸಿಂಚನಾ ಪರ್ಪುಂಜ ಭಾಗವಹಿಸಿದ್ದರು.

ಪ್ರಸಾದನದಲ್ಲಿ ಉಷಾ ನಾರಾಯಣ ಕುಂಬ್ರ, ಜ್ಯೋತಿ ಜನಾರ್ದನ ಸಹಕರಿಸಿದರೆ, ನೇಪಥ್ಯದಲ್ಲಿ ಸುನೀತಾ ಆರ್.ಕೆ., ಶಾಲಿನಿ ಆರ್. ಸಹಕರಿಸಿದರು.

ಸ್ವಾಗತ ಸಮಿತಿ ಸದಸ್ಯ ರಾಜೇಶ್ ಬನ್ನೂರು ಸ್ವಾಗತಿಸಿದರು. ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮತ್ತು ಅಧ್ಯಕ್ಷ ಮಹೇಶ್ ಕಜೆ ಡಿಂಡಿಮ ಪ್ರತಿಭೆಗಳನ್ನು ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ಮಹಾಬಲ ರೈ ಬಳತ್ತಡ್ಕ ವಂದಿಸಿದರು. ಪ್ರಮೀಳಾ ಟಿ. ಕಾರ್ಯಕ್ರಮ ನಿರೂಪಿಸಿದರು. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಪ್ರೋತ್ಸಾಹವನ್ನಿತ್ತರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.