ಗಂಡಿಬಾಗಿಲು ಶಾಲಾ ಗೋಡೆ ಕುಸಿತದ ಭೀತಿ ಜಿ. ಪಂ., ತಾ. ಪಂ. ಸದಸ್ಯರಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1

 

gandibagirluಉಪ್ಪಿನಂಗಡಿ: ಸರ್ಕಾರಿ ದ.ಕ.ಜಿ.ಪ. ಶಾಲೆ ಗಂಡಿಬಾಗಿಲು ಇದರ ಕಟ್ಟಡದ ಒಂದು ಭಾಗದಲ್ಲಿ ಪೌಂಡೇಶನ್ ಬದಿಯಲ್ಲಿ ಮಣ್ಣು ಮಳೆ ನೀರಿನಲ್ಲಿ ಕರಗಿ ಹೋಗಿ ಬಿರುಕು ಬಿಡಲಾರಂಭಿಸಿದ್ದು, ಗೋಡೆ ಕುಸಿತದ ಭೀತಿ ವ್ಯಕ್ತವಾಗತೊಡಗಿದೆ.

ಗೋಡೆ ಕುಸಿತವಾಗುವ ಸಾಧ್ಯತೆ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರು ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದು, ಅಗತ್ಯ ಮುಂಜಾಗೃತಾ ಕ್ರಮವಾಗಿ ಅದಕ್ಕೆ ಪೂರಕವಾಗಿ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ದೂರಿನ ಮೇರೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಜಯಂತಿ ಆರ್. ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಸದಸ್ಯರು ಸ್ಥಳದಿಂದಲೇ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗೆ ಕರೆ ಮಾಡಿ ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಬಡ್ಡಮೆ, ಉಪಾಧ್ಯಕ್ಷೆ ಶ್ರೀಮತಿ ಸಪ್ನಾ, ಸದಸ್ಯರುಗಳಾದ ಬಾಬು ಅಗರಿ, ಮಹಾಬಲೇಶ್ವರ ಭಟ್, ಮುಸ್ತಫಾ, ಶ್ರೀಮತಿ ಉಷಾ, ಶ್ರೀಮತಿ ಸರಸ್ವತಿ, ಶ್ರೀಮತಿ ಬೇಬಿ, ಶ್ರೀಮತಿ ರಹಮತ್, ಶಾಲಾ ಮುಖ್ಯ ಶಿಕ್ಷಕ ಶೇಖರ್ ಅತ್ರಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.