Breaking News

ಮಹಿಳೆಯ ನಗ್ನ ಚಿತ್ರಕ್ಕೆ ಬಾಲಕಿ ಮುಖ ಜೋಡಿಸಿ ಮಾನಹಾನಿ ಪ್ರಕರಣದ ಆರೋಪಿಗೆ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಿಳೆಯೋರ್ವರ ನಗ್ನ ಚಿತ್ರಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮುಖ ಜೋಡಿಸಿ ಅಂತರ್ಜಾಲದಲ್ಲಿ ಮಾನಹಾನಿ ಮಾಡಿದ ಪ್ರಕರಣದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಹತ್ಯಡ್ಕ ಗ್ರಾಮದ ನೆಕ್ಯರಡ್ಕ ನಿವಾಸಿ ಶ್ರೀನಿವಾಸ ಆಚಾರಿಯವರ ಪುತ್ರ ಮಹೇಶ್ ಎನ್(20ವ)ರವರು ನೆಲ್ಯಾಡಿಯ ಐಟಿಐವೊಂದರಲ್ಲಿ ಕಲಿಯುತ್ತಿದ್ದ ವೇಳೆ ನೆಲ್ಯಾಡಿಯ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದುದಲ್ಲದೇ, ನನ್ನ ಆಕಾಂಕ್ಷೆಯನ್ನು ಪೂರೈಸದೇ ಇದ್ದಲ್ಲಿ ನಿನ್ನ ಮಾನ ಹರಾಜು ಮಾಡುತ್ತೇನೆ. ವಾಟ್ಸ್‌ಅಪ್ ಮತ್ತು ಫೇಸ್‌ಬುಕ್‌ಗಳಲ್ಲಿ ನಿನ್ನ ಬಗ್ಗೆ ಅಶ್ಲೀಲ ಸಂದೇಶ ಮತ್ತು ನಗ್ನ ಚಿತ್ರ ಹಾಕಿ ಸಮಾಜದಲ್ಲಿ ಮುಖ ಎತ್ತದಂತೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಲ್ಲದೇ ತನ್ನ ಮೊಬೈಲ್ 8880213572 ರಿಂದ ಅಶ್ಲೀಲ ಸಂದೇಶದೊಂದಿಗೆ ಅಪರಿಚಿತ ಮಹಿಳೆಯ ನಗ್ನ ಚಿತ್ರಕ್ಕೆ ಬಾಲಕಿಯ ಮುಖವನ್ನು ಮೊಬೈಲ್ ತಂತ್ರಜ್ಞಾನದ ಮೂಲಕ ಜೋಡಿಸಿ ಅಂತರ್ಜಾಲದಲ್ಲಿ ಪ್ರಸಾರ ಮಾಡಿ ಮಾನ ಹಾನಿ ಮಾಡಿದ್ದ. ಈ ಬಗ್ಗೆ ಬಾಲಕಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯಲ್ಲಿ ಕಲಂ 292, 509 ಐ.ಪಿ.ಸಿ. ಮತ್ತು 67ಐ.ಟಿ.ಆಕ್ಟ್ ಹಾಗೂ ಕಲಂ 14 ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನವಾಗಿತ್ತು. ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರುಗೊಳಿಸಿದೆ. ಆರೋಪಿ ಪರ ಚಾಣಕ್ಯ ಲಾ ಚೇಂಬರ್ಸ್ ನ ನ್ಯಾಯವಾದಿ ಶ್ಯಾಮ ಪ್ರಸಾದ್ ಕೈಲಾರ್, ಸುಮಾ ಟಿ. ಆರ್ ಮತ್ತು ಕೃಷ್ಣಪ್ರಸಾದ್ ದೇವ ವಾದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.