ನಿಷ್ಕಲ್ಮಶ ಕೆಲಸದಿಂದ ಭಗವಂತನ ಅನುಗ್ರಹ- ಆದಿಚುಂಚನಗಿರಿ ಪೀಠಾಧ್ಯಕ್ಷರಿಂದ ಕಡಬ ವಲಯ ಗ್ರಾಮಗಳ ಭೇಟಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1

swamiji1 swamiji7 swamiji2 swamiji3 swamiji4 swamiji5 swamiji6

ಕಡಬ: ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ ೭೨ನೇ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರು ಗ್ರಾಮ ಭೇಟಿ ಧರ್ಮಜಾಗೃತಿ ಕಾರ‍್ಯಕ್ರಮದ ೩ನೇ ದಿನವಾದ ಡಿ.೨೮ರಂದು ಕಡಬ ವಲಯದ ಗ್ರಾಮಗಳನ್ನು ಭೇಟಿ ಮಾಡಿ ಬಳಿಕ ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡರು ಬಳಿಕ ನಡೆದ ಧಾರ್ಮಿಕ ಸಭಾ ಕಾರ‍್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಬಳಿಕ ಆಲಂಕಾರು ವಲಯಕ್ಕೆ ತೆರಳಿದರು.

ಅಂತರಂಗ ಶುದ್ದಿಯಿಂದ ಕೆಲಸ ಮಾಡಿ, ಸ್ವಾತಂತ್ರ್ಯ  ಸ್ವೇಚ್ಚಾಚಾರವಾಗಬಾರದು-ಡಾ.ನಿರ್ಮಲಾನಂದನಾಥ ಸ್ವಾಮೀಜಿ: ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ನಮ್ಮ ಬದುಕಿನ ಸೂತ್ರಧಾರ ಭಗವಂತ, ಎಲ್ಲವೂ ದೈವೇಚ್ಚೆಯಲ್ಲಿ ನಡೆಯುತ್ತಿರುವುದಾದರೂ ಭಗವಂತ ನಮಗೆ ಕೆಲವು ಅವಕಾಶಗಳನ್ನು ನೀಡಿದ್ದಾರೆ, ಭಗವಂತ ನೀಡಿದ ಸ್ವಾತಂತ್ರ್ಯದಲ್ಲಿ ನಾವು ಸ್ವೇಚ್ಚಾಚಾರಿಗಳಾಗಬಾರದು, ಸನ್ಮಾರ್ಗದಲ್ಲಿ ನಡೆಯಬೇಕು, ತಮ್ಮ ಕೆಲಸವನ್ನು ನಿಷ್ಕಲ್ಮಶವಾಗಿ ಮಾಡಿದಾಗ ಮಾತ್ರ ಭಗವಂತನ ಅನುಗ್ರಹ ಸಿಗುತ್ತದೆ. ಬದುಕಿನ ದೋಷಗಳನ್ನು ಕಳೆಯಲು ಭಗವಂತನ ಧ್ಯಾನ, ಪೂಜೆ, ಉಪಾಸನೆಗಳಿಂದ ಮಾತ್ರ ಸಾಧ್ಯ ಎಂದರು. ನಾವು ಇಂದು ಪ್ರಕೃತಿ ನಾಶ ಮಾಡುತ್ತಿzವೆ, ಇದರಿಂದ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿzವೆ, ಇದಕ್ಕಾಗಿ ನಮ್ಮ ಸಂಪ್ರದಾಯ ಆಚರಣೆಗಳನ್ನು ಬಿಡಬಾರದು, ಮನಃಶುದ್ಧಿಯಿಂದ ದೇವರನ್ನು ಭಜಿಸಬೇಕು ಎಂದ ಸ್ವಾಮೀಜಿ ನಾವು ಸಮಾಜಕ್ಕೆ ಏನು ಕೊಡುತ್ತೇವೋ ಅದೇ ನಮ್ಮ ಬದುಕಿಗೆ ಸಿಗುತ್ತದೆ, ಆದುದರಿಂದ ನಾವು ಸಮಾಜದ ಕಡೆ ನೋಡಬೇಕು, ಇತರರೊಂದಿಗೆ ಪ್ರೀತಿಯಿಂದ ಬದುಕುವುದನ್ನು ಕಲಿಯಬೇಕು, ಜ್ಞಾನದ ಮೂಲಕ ಬದುಕಿನ ಮುಕ್ತಿಪಡುವಂತಾಗಬೇಕು, ಮುಂದೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ತಾಯಂದಿರು ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಉತ್ತಮ ಸಂಸ್ಕಾರಗಳನ್ನು ನೀಡಬೇಕು ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಶ್ರೀ ಆದಿಚುಂಚನಗಿರಿಯಲ್ಲಿ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳು ಪೀಠಾಧ್ಯಕ್ಷರಾದ ಮೇಲೆ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ, ಇದೀಗ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಸಮಾಜದ ಆಗು ಹೋಗುಗಳನ್ನು ತಾವೇ ಸ್ವತಃ ತಿಳಿಯುವ ಉzಶದಿಂದ ಧರ್ಮಜಾಗೃತಿ ಮಾಡುವ ಮೂಲಕ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ, ಶಿಕ್ಷಣ ಕ್ಷೇತ್ರಕ್ಕೆ ಕ್ಷೇತ್ರದಿಂದ ಅಪಾರ ಸೇವೆ ನೀಡಲಾಗುತ್ತಿದ್ದು ಉಚಿತ ಶಿಕ್ಷಣ ನೀಡುವ ಮೂಲಕ ಉತ್ತಮ ಸಂಸ್ಕಾರಗಳನ್ನು ನೀಡಿ ಸತ್ಪ್ರಜೆಯಾಗಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಕಡಬ ಒಕ್ಕಲಿಗ ಗೌಡ ಸಂಘದ ಸಲಹೆಗಾರ ಜನಾರ್ದನ ಗೌಡ ಪಣೆಮಜಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ಗೌಡ ಕೆಮ್ಮಾರ, ಮಾಜಿ ಅಧ್ಯಕ್ಷರುಗಳಾದ ಚಿದಾನಂದ ಗೌಡ ಬೈಲಾಡಿ, ಮೋಹನ ಗೌಡ ಇಡ್ಯಡ್ಕ, ಕಡಬ ವಲಯಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲ್, ಹಿರಿಯ ಸಹಕಾರಿ ಧುರೀಣ ಸೀತಾರಾಮ ಗೌಡ ಕೋಡಿಂಬಾಳ, ಸುರೇಶ್ ಗೌಡ ಬೈಲು, ಕಡಬ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ,  ಅಧ್ಯಕ್ಷ ಗಣೇಶ್ ಕೈಕುರೆ, ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಸಂಚಾಲಕ ಸೀತಾರಾಮ ಗೌಡ ಪೊಸವಳಿಕೆ ಸ್ವಾಗತಿಸಿ, ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ವಲಯ ಕಾರ್ಯದರ್ಶಿ ವಾಸುದೇವ ಗೌಡ ಕೋಲ್ಪೆ ವಂದಿಸಿದರು. ಲಕ್ಷ್ಮೀಶ ಆರಿಗ ಕಾರ್ಯಕ್ರಮ ನಿರೂಪಿಸಿದರು.

ಸ್ವಾಮೀಜಿಯವರಿಗೆ ಗೌರವಾರ್ಪಣೆ: ಕೇಪು ಲಕ್ಷ್ಮೀಜನಾರ್ಧನ ದೇವಸ್ಥಾನ, ಕಡಬ ದುರ್ಗಾಂಬಿಕಾ ಭಜನಾ ಮಂಡಳಿ, ಹಾಗೂ ವಿವಿಧ ಗ್ರಾಮಗಳ ಒಕ್ಕಲಿಗ ಗೌಡ ಸೇವಾ ಸಂಘದ ಸಮಿತಿಯವರಿಂದ ಸ್ವಾಮೀಜಿಯವರಿಗೆ  ಗೌರವಾರ್ಪಣೆ ಮಾಡಲಾಯಿತು.  ಅಲ್ಲದೆ ಕಡಬ ವಲಯದ ಪ್ರತಿ ಗ್ರಾಮದಿಂದ ಸ್ವಾಮೀಜಿಯವರಿಗೆ ಗೌರವ ಅರ್ಪಿಸಲಾಯಿತು.

ಸನ್ಮಾನ: ಈ ಸಂದರ್ಭದಲ್ಲಿ ಸೀತಾರಾಮ ಗೌಡ ಕೋಡಿಂಬಾಳ, ಉದ್ಯಮಿ ಸುರೇಶ್ ಗೌಡ ಬೈಲು ಹಾಗೂ ಹಾಸನ ಜಿಲ್ಲಾ ಅಬಕಾರಿ ಇಲಾಖಾ ಆಯುಕ್ತ ಗೋಪಾಲಕೃಷ್ಣ ಗೌಡ ಅವರ ಪರವಾಗಿ ಅವರ ತಾಯಿ ರುಕ್ಮಿಣಿ ಸಾಂತಪ್ಪ ಗೌಡ ಪುಯಿಲ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.

ಕಡಬ ಪುರಪ್ರವೇಶ ಮಾಡಿದ ಸ್ವಾಮೀಜಿಯವರಿಗೆ ಅದ್ದೂರಿ ಸ್ವಾಗತ: ಬೆಳಿಗ್ಗೆ ಕಡಬ ಪುರ ಪ್ರವೇಶ ಮಾಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಧರ್ಮಪಾಲನಾಥ ಸ್ವಾಮೀಜಿಯವರನ್ನು ಪುಳಿಕುಕ್ಕುವಿನಲ್ಲಿ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಬರಮಾಡಿಕೊಳ್ಳಲಾಯಿತು. ಬಳಿಕ ಕೋಡಿಂಬಾಳ ಕೋಲ್ಪೆ ಕುಟುಂಬದ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೋಲ್ಪೆ ಕುಟುಂಬದ ಮುಖ್ಯಸ್ಥರು ಹಾಗೂ ಕುಟುಂಬ ಸದಸ್ಯರು ಸ್ವಾಮೀಜಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮನೆಗೆ ಆಗಮಿಸಿದ ಸ್ವಾಮೀಜಿಯವರು ಮನೆಯ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಸ್ವಾಮೀಜಿಯವರ ಪಾದಪೂಜೆ ನಡೆಯಿತು.

ಬಿಳಿನೆಲೆಯಲ್ಲಿ ಗ್ರಾಮಸ್ಥರಿಂದ ಪಾದಪೂಜೆ: ಕೋಡಿಂಬಾಳದಿಂದ ಬಿಳಿನೆಲೆ ಹಿರಿಯಣ್ಣ ಗೌಡರ ಮನೆಗೆ ತೆರಳಿದರು. ಸ್ವಾಮೀಜಿಯವರಿಗೆ ಪಾದಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮನುಷ್ಯ ಇಂದು ನಾಗಾಲೋಟದಿಂದ ಓಡುತ್ತಿದ್ದಾನೆ, ಈ ಜಗತ್ತೇ ಸ್ಥಿರವಿಲ್ಲ, ಭೂಮಿ ಜತೆ ನಾವು ಸುತ್ತುತ್ತಿzವೆ, ಅದಕ್ಕಿಂತ ನಮ್ಮ ಮನಸ್ಸು ವೇಗವಾಗಿ ಓಡುತ್ತಿದೆ, ಪರಿವರ್ತನೆಯ ಈ ಜಗದಲ್ಲಿ ಮನುಷ್ಯನಿಗೆ ಒಂದು ದಿನ ಸುಖ ಇದ್ದರೆ, ಇನ್ನೊಂದು ದಿನ ಕಷ್ಟ ಏಕೆಂದರೆ ಪರಿವರ್ತನೆ ಈ ಜಗದ ನಿಯಮ, ಜೀವನದಲ್ಲಿ ಶಾಶ್ವತ ಸುಖ ಸಿಗಬೇಕಾದರೆ ನಮ್ಮ ಅಂತರಂಗದಲ್ಲಿ ದೇವರನ್ನು ಕಾಣಬೇಕು. ತಂದೆ ತಾಯಿ ಮಕ್ಕಳಿಗೆ ಸಂಸ್ಕಾರ ನೀಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಗೌಡ ಮಠಂದೂರು ಸಾಂದರ್ಭಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯಣ್ಣ ಗೌಡ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಬಿಳಿನೆಲೆ ಗ್ರಾಮದ ಅಧ್ಯಕ್ಷ ನಾಗೇಶ್, ಕಾರ‍್ಯದರ್ಶಿ ವಿಜಯ ಕುಮಾರ್, ಬಿಳಿನೆಲೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ, ಪ್ರಮುಖರಾದ ಗಣಪಯ್ಯ ಗೌಡ ಪುತ್ತಿಲ, ತಿಮ್ಮಪ್ಪ ಗೌಡ ಪರ್ಲ, ಸತೀಶ್ ಎರ್ಕ, ಸರೋಜಿನಿ ಜಯಪ್ರಕಾಶ್, ಕೇಶವ ಗೌಡ ಪುತ್ತಿಲ, ದುಗ್ಗಪ್ಪ ಗೌಡ ಸೂಡ್ಲು, ಜಯಪ್ರಕಾಶ್ ಮೊಂಟಡ್ಕ, ಪ್ರವೀಣ್ ಕೈಕಂಬ, ಸುರೇಂದ್ರ ಗೌಡ ಕಳಿಗೆ, ರಮೇಶ್ ವಾಲ್ತಾಜೆ, ವಿಜಯ ಕುಮಾರ್ ಎರ್ಕ, ಕೊಂಬಾರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀರಾಮಚಂದ್ರ ಉಪಸ್ಥಿತರಿದ್ದರು.

ಪಣೆಮಜಲು ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ಪೂಜೆ-ಸ್ವಾಮೀಜಿಯವರ ಪಾದಪೂಜೆ: ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಕಾರ‍್ಯಕ್ರಮ ಮುಗಿಸಿ ಬಳಿಕ ಪಣೆಮಜಲು ಜನಾರ್ದನ ಗೌಡರ ಮನೆಗೆ ತೆರಳಿದ ಸ್ವಾಮೀಜಿಯವರು ಅಲ್ಲಿ ಸಬ್ಬಮ್ಮ ದೇವಿಗೆ ಪೂಜೆ ಸಲ್ಲಿಸಿದರು, ಬಳಿಕ ಸ್ವಾಮೀಜಿಯವರ ಪಾದ ಪೂಜೆ ನಡೆಸಲಾಯಿತು.  ಮಧ್ಯಾಹ್ನದ ಭೋಜನವನ್ನು ಪಣೆಮಜಲು ಮನೆಯಲ್ಲಿ ಸ್ವೀಕರಿಸಿ ಬಳಿಕ ಆಲಂಕಾರು ವಲಯಕ್ಕೆ ತೆರಳಿದರು.

ಕಡಬ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಸ್ವಾಮೀಜಿ ಭೇಟಿ: ಕಡಬ ಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ ವೇಳೆ, ಕಡಬ ವೈಭವ ಸಂಕೀರ್ಣದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಕಛೇರಿಗೆ ಭೇಟಿ ನೀಡಿದ ಸ್ವಾಮೀಜಿಗಳು ಅಲ್ಲಿ ಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ವತಿಯಿಂದ ಸ್ವಾಮೀಜಿಯವರಿಗೆ ಫಲ, ಪುಷ್ಪ ನೀಡಿ ಬರಮಾಡಿಕೊಂಡು ಗೌರವಿಸಲಾಯಿತು.

೧೯೭೯ರಲ್ಲಿ ಆದಿಚುಂಚನಗಿರಿ ಸ್ವಾಮೀಜಿಯವರಿಂದ ಕೊಂಬಾರು ಕಟ್ಟೆ ಮನೆಗೆ ಭೇಟಿ ನೆನಪಿನ ಬುತ್ತಿ ಬಿಚ್ಚಿದ ಪ್ರಸನ್ನ ಕುಮಾರ್ ಕಟ್ಟೆ: ಬಿಳಿನೆಲೆಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಸ್ವಾಮೀಜಿಯವರ ಆಶೀರ್ವಚನದ ಮೊದಲು ಮಾತನಾಡಿದ ಪ್ರಸನ್ನ ಕುಮಾರ್ ಕಟ್ಟೆಯವರು, ೧೯೭೯ರ ಫೆಬ್ರವರಿ ೨ರಂದು ಜಗದ್ಗುರು ಡಾ|ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಕೊಂಬಾರು ಗ್ರಾಮದ ಕೊಂಬಾರು ಕಟ್ಟೆ ಕುಮಾರಪುರ ನಿವಾಸಿ  ಪ್ರಾಚಾರ‍್ಯ ಕೆ. ನೋಣಪ್ಪ ಗೌಡರ ಮನೆಗೆ ಮೊದಲ ಬಾರಿಗೆ ಪಾದಾರ್ಪಣೆಗೈದಿದ್ದರು. ಕೆ. ನೋಣಪ್ಪ ಗೌಡರ ಮನೆ ದೇವರು ಕುಮಾರಪುರ ಶ್ರೀ ಲಕ್ಷ್ಮೀನಾರಾಯಣ ಮಂದಿರವನ್ನು ಉದ್ಘಾಟಿಸಿದ್ದರು, ಮಹಾಸ್ವಾಮೀಜಿಯವರಿಗೆ ನೋಣಪ್ಪ ಗೌಡರು ಹಾಗೂ ಸಮಾಜದ ಭಕ್ತ ವೃಂದ ಗುರುಪೂಜಾ ಕಾರ‍್ಯಕ್ರಮ ಹಮ್ಮಿಕೊಂಡಿದ್ದರು. ಆಗ ಸ್ವಾಮೀಜಿಯವರು ಆಶೀರ್ವಚನ ನೀಡಿ, ತಮ್ಮ ದಿವ್ಯ ಹಸ್ತಾಕ್ಷರ ಬರೆದು ಅದನ್ನು ನಮಗೆ ನೀಡಿ ಆಶೀರ್ವದಿಸಿದ್ದರು. ಸ್ವಾಮೀಜಿಯವರ ಕರೆಯಂತೆ ಕೆ.ನೋಣಪ್ಪ ಗೌಡರ ಪುತ್ರ, ಹೈಕೋರ್ಟ್ ನ್ಯಾಯವಾದಿಯಾಗಿರುವ ಪ್ರವೀಣ್ ಕುಮಾರ್ ತನ್ನ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಆದಿಚುಂಚನಗಿರಿಯಲ್ಲಿ ಮಾಡಿದ್ದರು ಎಂದು ಹೇಳಿ ಸ್ವಾಮೀಜಿಯವರು ಅಂದು ಬರೆದಿದ್ದ ಹಸ್ತಾಕ್ಷರ ಪ್ರತಿಯನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಸಮರ್ಪಿಸಿದರು. ಈ ಬಗ್ಗೆ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಇರಿಸಿಕೊಂಡಿರುವ ದಿ.ಕೆ.ನೋಣಪ್ಪ ಗೌಡರ ಕುಟುಂಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಡಬ ಪೇಟೆಯಾದ್ಯಂತ ಆಕರ್ಷಕ ಮೆರವಣಿಗೆ: ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಗೆ ಕಡಬ ಪೇಟೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಆದಿಚುಂಚನಗಿರಿಯ ಹಿಂದಿನ ಪೀಠಾಧ್ಯಕ್ಷ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರವನ್ನು ಇರಿಸಲಾಗಿದ್ದ ರಥವನ್ನು ಏರಿದ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದರು. ಸ್ವಾಮೀಜಿಯವರಿಗೆ ಒಕ್ಕಲಿಗ ಗೌಡ ಸಮುದಾಯದ ಮುಖಂಡರು ಹಾಗೂ ವಿವಿಧ ಸಮುದಾಯದ ಜನರಿಂದ ಗೌರವಪೂರ್ವಕ ಸ್ವಾಗತ ನೀಡಲಾಯಿತು. ಬ್ಯಾಂಡ್ ವಾದ್ಯ, ಚೆಂಡೆ, ಛತ್ರ ಚಾಮರ, ಕೀಲು ಕುದುರೆಗಳು ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಮಾತೆಯರು ಕಲಶ ಹಿಡಿದು ಸ್ವಾಗತಿಸಿದರು. ಕಡಬ ಪೇಟೆಯಲ್ಲಿ ಸ್ವಾಗತ ಮಾಡುವ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್, ಪುತ್ತೂರು ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಪುತ್ತೂರು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎ.ಬಿ.ಮನೋಹರ ರೈ, ರಾಜ್ಯ ಬಿಜೆಪಿ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿ ಪುಲಸ್ತ್ಯಾ ರೈ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ರೈ, ಕುಕ್ಕೇಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ,  ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳ, ಫಯಾಜ್ ಕೆನರಾ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ,  ಪಿಎಲ್‌ಡಿ ಬ್ಯಾಂಕ್‌ನ ಕೋಶಾಧಿಕಾರಿ ಭಾಸ್ಕರ ಗೌಡ ಇಚ್ಲಂಪಾಡಿ, ಮಂಜುನಾಥ ಕೊಲಂತ್ತಾಡಿ, ಕಡಬ ಸಿಎ ಬ್ಯಾಂಕ್ ನಿರ್ದೇಶಕ ಪೂವಪ್ಪ ಗೌಡ ಐತ್ತೂರು, ನಿತ್ಯಾನಂದ ಗೌಡ ಬೊಳ್ಳಾಜೆ, ಶ್ರೀ.ಕ್ಷೇ.ಧ.ಗ್ರಾ.ಯೋ.ಬಿಳಿನೆಲೆ ವಲಯ ಒಕ್ಕೂಟ ಅಧ್ಯಕ್ಷ ಭವಾನಿಶಂಕರ್, ಮೋಹನ ಗೌಡ ಪಂಜೋಡಿ,ಸ ಶಿವಪ್ರಸಾದ್ ಕೈಕುರೆ, ಗುಡ್ಡಪ್ಪ ಗೌಡ ಕೂತೂರು, ಸಾಂತಪ್ಪ ಗೌಡ ಪಿಜಕ್ಕಳ, ಮೋನಪ್ಪ ಗೌಡ ನಾಡೋಳಿ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಗೌಡ ಕೆ.ಪಿ, ಸೀತಾರಾಮ ಗೌಡ ಕುತ್ಯಾಡಿ ಪಟ್ನ,ನಿತ್ಯಾನಂದ ಗೌಡ ಬೊಳ್ಳಾಜೆ, ರಾಮಕೃಷ್ಣ ಹೊಳ್ಳಾರು, ರಾಧಾಕೃಷ್ಣ ಗೌಡ ಕೋಲ್ಪೆ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಕೊಂಬಾರು ಗ್ರಾ.ಪಂ. ಸದಸ್ಯ ಮಧುಸೂದನ್,ಚಿದಾನಂದ ಗೌಡ ದೇವುಪಾಲ್,ಬಿಳಿನೆಲೆ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಚೆನ್ನಕೇಶವ ಗೌಡ ಕೈಂತಿಲ, ಜೆಸಿಐ ಸೆನೆಟರ್  ನಾರಾಯಣ ಎನ್ ಬಲ್ಯ ಕೊಲ್ಲಿಮಾರು, ಲಿಂಗಪ್ಪ ಗೌಡ ಕಾನದಬಾಗಿಲು, ಜನಾರ್ಧನ ಗೌಡ ಪುತ್ತಿಲ, ಸುಂದರ ಗೌಡ ದೊಡ್ಡಮನೆ ಕೊಣಾಜೆ, ತಿಮ್ಮಪ್ಪ ಗೌಡ ಬೃಂತೋಡು, ಸುರೇಶ್ ದೇಂತಾರು, ಸುದರ್ಶನ ಗೌಡ ಕೋಡಿಂಬಾಳ, ಕಡಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ಅದ್ಯಕ್ಷ ಕೆ.ಸೀತಾರಾಮ ಗೌಡ, ಚಂದ್ರಶೇಖರ ಗೌಡ ಹಳೆನೂಜಿ, ಶ್ರೀಕಂಠಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ನಾರಾಯಣ ಗೌಡ ಅಲುಂಗೂರು, ವೆಂಕಟೇಶ್ ಪಾಡ್ಲ, ಕುಟ್ರುಪಾಡಿ ಗ್ರಾ.ಪಂ. ಸದಸ್ಯರಾದ ದೇವಯ್ಯ ಗೌಡ ಪನ್ಯಾಡಿ, ಶಿವಪ್ರಸಾದ್ ಗೌಡ ಪುತ್ತಿಲ, ಮರ್ದಾಳ ಗ್ರಾ.ಪಂ. ಸದಸ್ಯರಾದ ಹರೀಶ್ ಕೊಡಂದೂರು, ಹರೀಶ್ ಕೊಡಿಬೈಲ್, ಜಯರಾಮ ಗೌಡ ಪಡೆಜ್ಜಾರು, ಮೇದಪ್ಪ ಗೌಡ ನವದುರ್ಗಾ,ವಿವೇಕಾನಂದ ಬೊಳ್ಳಾಜೆ, ಲೋಕೇಶ್ ಪಂಜೋಡಿ, ಕೆ.ಎಂ.ಹನೀಫ್, ಅಶ್ರಫ್ ಶೇಡಿಗುಂಡಿ. ಸುಧೀರ್ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಇತರ ಸಮಾಜದ ಮುಖಂಡರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.