Breaking News

ಕೇಪುಳು, ಸಿದ್ಯಾಳ, ಉರಮಾಲು ರಸ್ತೆ ಸಮಸ್ಯೆಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷರು

Puttur_Advt_NewsUnder_1
Puttur_Advt_NewsUnder_1

kepuluಪುತ್ತೂರು: ನಗರಸಭಾ ವ್ಯಾಪ್ತಿಯ ಕೇಪುಳು, ಸಿದ್ಯಾಳ, ಉರಮಾಲು ರಸ್ತೆ ಸಂಪೂರ್ಣ ಹಾಳಾಗಿದ್ದು, ಜನರಿಗೆ ವಾಹನ ಸಂಚಾರಕ್ಕೆ ತೊಂದರೆಯಾಗಿರುವ ಕುರಿತು ಪರಿಸರದವರು ನೀಡಿದ ಮನವಿಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡುರವರು ಅಲ್ಲಿನ ಸ್ಥಿತಿಗತಿಯ ಕುರಿತು ಪರಿಶೀಲಿಸಿದ್ದಾರೆ.

ರಸ್ತೆ ಅಭಿವೃದ್ಧಿ ಪಡಿಸದೆ ನಮಗೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಕೂಡಲೇ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳ ನಿಯೋಗ ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾದ ಎಚ್ ಮಹಮ್ಮದ್ ಆಲಿ, ಅನ್ವರ್ ಖಾಸಿಂ, ಶಕ್ತಿಸಿನ್ಹ, ಜಯಲಕ್ಷ್ಮೀ ಸುರೇಶ್, ಮುಕೇಶ್ ಕೆಮ್ಮಿಂಜೆ ಯವರೊನ್ನೊಳಗೊಂಡ ತಂಡ ಸ್ಥಳಕ್ಕೆ  ತೆರಳಿ ಅಲ್ಲಿನ ನಿವಾಸಿಗಳ ಜೊತೆ ಸಭೆ ನಡೆಸಿ ಕೂಡಲೇ ಈ ರಸ್ತೆಯನ್ನು  ಅಭಿವೃದ್ಧಿ ಪಡಿಸಲು ದೊಡ್ಡ ಮಟ್ಟದ ಅನುದಾನ ಬೇಕಾಗಿದೆ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಯೋಜನೆ ಕುರಿತು ಶಾಸಕಿ ಶಕುಂತಳಾ ಶೆಟ್ಟಿ ಯವರೊಂದಿಗೆ ಚರ್ಚಿಸಿ  ತೀರ್ಮಾನ ಕೈಗೊಳ್ಳಲಾಗುವುದು,  ಪ್ರಸ್ತುತ ರಸ್ತೆಯ ಬದಿಯಲ್ಲಿರುವ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಇಲ್ಲಿಗೆ ಬೇಕಾಗಿರುವ ದಾರಿದೀಪದ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಸ್ಥಳೀಯರಾದ ಪ್ರಭಾಕರ ರೈ, ನಾರಾಯಣ ಪೂಜಾರಿ, ಯಶವಂತ, ಕೃಷ್ಣಪ್ಪ ಪೂಜಾರಿ, ಶಿವಾನಂದ, ಮನೋಹರ ರೈ, ಮೋಹನ, ಪುರುಷೋತ್ತಮ, ಅಬ್ದುಲ್ಲ, ಮೋಹಿನಿ ರೈ, ರತಿ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.