ಹಬ್ಬದ ಆಚರಣೆಯಿಂದ ಧಾರ್ಮಿಕ ಸಾಮರಸ್ಯ ಬೆಳೆಯಲಿ-ಬಿಷಪ್- ಕಡಬದಲ್ಲಿ ಸಂಯುಕ್ತ ಕ್ರಿಸ್ಮಸ್ ಆಚರಣೆ

Puttur_Advt_NewsUnder_1
Puttur_Advt_NewsUnder_1

kadaba kadaba1ಕಡಬ: ಸಮಾಧಾನ ಶಾಂತಿ, ಸೌಹಾರ್ದತೆ, ಪ್ರೀತಿ, ವಿಶ್ವಾಸದಿಂದ ಬಾಳುವುದರೊಂದಿಗೆ ಯೇಸು ಕ್ರಿಸ್ತನ ಅನುಗ್ರಹಕ್ಕಾಗಿ ನಮ್ಮ ಜೀವನ ಮುಡಿಪಾಗಿರಲಿ ಎಂದು ಮಂಗಳೂರು ಹೊನ್ನಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಯಾಕೂಬ್ ಮೋರ್ ಅಂತೋನಿಯೋಸ್ ಹೇಳಿದರು.

ಅವರು ಕಡಬದ ಸಂತ ಜೋಕಿಮರ ಚರ್ಚ್ ವಠಾರದಲ್ಲಿ ಕಡಬ ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ೩೭ನೇ ಸಂಯುಕ್ತ ಕ್ರಿಸ್ಮಸ್ ಆಚರಣೆ ಅಂಗವಾಗಿ ಜರಗಿದ ಸಭಾ ಕಾರ‍್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕ್ರಿಸ್ಮಸ್ ಸಂದೇಶ ನೀಡಿ ಮನುಕುಲದ ಉದ್ದಾರಕ್ಕಾಗಿ ಯೇಸು ಕ್ರಿಸ್ತ ಮನುಷ್ಯ ರೂಪ ತಾಳಿ ಜನ್ಮತಾಳಿದ್ದಾರೆ. ಹಬ್ಬದ ಆಚರಣೆಗಳಿಂದ ಧಾರ್ಮಿಕ ಸಾಮರಸ್ಯ ಬೆಳೆಯುವಂತಾಗಬೇಕು. ಜಗತ್ತಿನ ಸಾರ್ವತ್ರಿಕ ಹಬ್ಬವಾಗಿರುವ ಕ್ರಿಸ್‌ಮಸ್ ಹೃದಯ ವೈಶಾಲ್ಯ ಪ್ರತಿಬಿಂಬಿಸುವ ಹಬ್ಬವಾಗಿದೆ ಎಂದರು.

ಜಗತ್ತಿನ ಎಲ್ಲೆಡೆಯೂ ಅಶಾಂತಿ ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಯೇಸುಕ್ರಿಸ್ತರ ಸಂದೇಶ ಮತ್ತು ಬದುಕು ಅತ್ಯಂತ ಪ್ರಸ್ತುತ. ಕ್ರಿಸ್ತರ ಸಂದೇಶ ಮತ್ತು ಮಾರ್ಗದರ್ಶನದಂತೆ ಬದುಕುವವನೇ ನಿಜವಾದ ಕ್ರೈಸ್ತ. ಮನುಷ್ಯ ತನ್ನ ತಪ್ಪುಗಳಿಗೆ ಪಶ್ಚಾತ್ತಾಪಪಟ್ಟು ಸನ್ಮಾರ್ಗದಲ್ಲಿ ಮುನ್ನಡೆಯಲು ಮನಸ್ಸು ಮಾಡುವುದೇ ನಿಜವಾದ ಧರ್ಮ ಎಂದು ಹೇಳಿದ ಅವರು ಕತ್ತಲು ತುಂಬಿದ ಈ ಲೋಕಕ್ಕೆ ಬೆಳಕಾಗಿರುವ ಸರ್ವ ಶ್ರೇಷ್ಟನಾದ ಯೇಸು ಕ್ರಿಸ್ತನ ಅನುಗ್ರಹ ನಮ್ಮೆಲ್ಲರ ಮೇಲೆ ಇರಲಿ ಎಂದು ಆಶೀರ್ವಚನ ಹಾರೈದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿ ಅಧ್ಯಕ್ಷ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ| ಜಾರ್ಜ್ ಕಾಲಾಯಿಲ್‌ರವರು ಯೇಸು ಕ್ರಿಸ್ತ ಬೋಧಿಸಿದ ಅಮೂಲ್ಯ ಮೌಲ್ಯಯುತ ಬೋಧನೆಗಳನ್ನು ಕಾರ್ಯಗತಗೊಳಿಸಿ ಸಮಾಜದಲ್ಲಿ ಶೋಷಿತರ, ದುರ್ಬಲರ ಬಾಳಿಗೆ ಬೆಳಕಾಗುವುದರೊಂದಿಗೆ ಒಡೆದ ಮನಸ್ಸುಗಳನ್ನು ಒಂದಾಗಿಸಿಕೊಂಡು ಶಾಂತಿ ನೆಮ್ಮದಿಯ ಬದುಕನ್ನು ನೀಡುವ ವೃದ್ದರ ಬಾಳಿಗೆ ಸಹಾಯ ಮಾಡುವ ಎಲ್ಲಾ ಜಾತಿ ಜನಾಂಗ ಭೇದವಿಲ್ಲದೆ ಕ್ರೈಸ್ತರು ಹಾಗೂ ಎಲ್ಲರೂ ಒಂದಾಗಿ ಆಚರಿಸುವ ಕ್ರಿಸ್ಮಸ್ ಹಬ್ಬ ಲೋಕದಲ್ಲಿರುವ ಎಲ್ಲರಿಗೂ ಒಳಿತನ್ನು ನೀಡುವುದರೊಂದಿಗೆ ಈ ಪ್ರದೇಶದ ಸರ್ವ ಜನಾಂಗದವರನ್ನು ಸೌಹಾದತೆಯಿಂದ ಬಾಳುವಂತೆ ಏಸುಕ್ರಿಸ್ತನು ಅನುಗ್ರಹಿಸಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಸನ್ಮಾನ ಸ್ವೀಕರಿಸಿ ಮಾತನಾಡಿ ಪರಮಾತ್ಮನ ಆಶೀರ್ವಾದ ಪಡೆದುಕೊಳ್ಳಬೇಕಾದರೆ ನಾವು ಬಹಳ ಶ್ರಮಜೀವಿಗಳಾಗುವುದರೊಂದಿಗೆ ಧರ್ಮಗುರುಗಳು ಸಾರುವ ಸಂದೇಶವನ್ನು ಪಾಲಿಸುತ್ತಾ ಸಮಾಜದ ಎಲ್ಲಾ ಜನರ ದುಃಖ ದುಮ್ಮಾನಗಳಲ್ಲಿ ಪಾಲ್ಗೊಂಡು ಅವರ ಸಂಕಷ್ಟಗಳಿಗೆ ನೆರವಾಗುವ ಜನತೆಎಗೆ ಎಲ್ಲಾ ಜಾತಿ ಜನಾಂಗದವರಿಗೆ ಸಹಾಯ ಸಹಕಾರ ಪ್ರೀತಿ ವಿಶ್ವಾಸ ತೋರುತ್ತಾ ಸಹಬಾಳ್ವೆಯನ್ನು ನಡೆಸುವುದು ನಮ್ಮ ಧರ್ಮವಾಗಿದೆ. ಎಂದು ಕ್ರಿಶ್ಚಿಯನ್ ಸಮುದಾಯದ ಒಬ್ಬ ಈ ಭಾಗದ ಜನಪ್ರತಿನಿಧಿಯಾಗಿದ್ದು ಈ ಕ್ರಿಸ್ಮಸ್ ಆಚರಣಾ ಸಂದರ್ಭದಲ್ಲಿ ನನ್ನನ್ನು ಬಿಷಪ್‌ರಿಂದ ಸನ್ಮಾನಿಸಿ ಆಶೀರ್ವದಿಸಲಾಗಿದ್ದು ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ತಾವು ಕೊಟ್ಟ ಗೌರವಕ್ಕೆ ಚ್ಯುತಿ ಬಾರದಂತೆ ಈ ಭಾಗದ ಎಲ್ಲಾ ಧರ್ಮ ಕ್ಷೇತ್ರಗಳ ಅಭಿವೃದ್ದಿಗೆ ಶ್ರಮಿಸುವುದರೊಂದಿಗೆ ಸಾರ್ವಜನಿಕ ಕ್ಷೇತ್ರದ ಅಭಿವೃದ್ದಿಗೆ ಸರಕಾರದಿಂದ ಅತೀ ಹೆಚ್ಚಿನ ಅನುದಾನವನ್ನು ಈ ಭಾಗಕ್ಕೆ ತರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಹೇಳಿ ಕಾರ‍್ಯಕ್ರಮಕ್ಕೆ ಶುಭಹಾರೈಸಿದರು.  ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿ ಸಂಚಾಲಕರಾದ ರೆ|ಫಾ| ಪಿ.ಕೆ ಅಬ್ರಹಾಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವಶಕ್ತನಾದ ಯೇಸುಕ್ರಿಸ್ತ ದೇವರು ಬೋಧಿಸಿದ ಅಮೂಲ್ಯವಾದ ಬೋಧನೆಗಳನ್ನು ಕಾರ‍್ಯಗತಗೊಳಿಸಿ ಸಮಾಜದಲ್ಲಿ ಶೋಷಿತ ಬಡ ವರ್ಗದ ಸಮಾಜದಲ್ಲಿ ನೊಂದವರ ಬಾಳಿಗೆ ಬೆಳಕಾಗುವುದರ ಮೂಲಕ ಜಾತಿ ಪಂಗಡ ಭೇದವಿಲ್ಲದೆ ಎಲ್ಲರ ಬದುಕಿಗೆ ಆಶಾಕಿರಣವಾಗಿರುವ ಏಸುಕ್ರಿಸ್ತನ ಆದರ್ಶ ವ್ಯಕ್ತಿಗಳಾಗಿ ಬಾಳುವುದರೊಂದಿಗೆ ಈ ಭಾಗದ ಎಲ್ಲಾ ಜಾತಿ ಧರ್ಮದವರು ಒಗ್ಗಟ್ಟಿನಿಂದ ಒಟ್ಟಾಗಿ ಆಚರಿಸುವ ಈ ಕ್ರಿಸ್ಮಸ್ ಹಬ್ಬ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹೇಳಿ ಎಲ್ಲರ ಸಹಕಾರವನ್ನು ಕೋರಿದರು.

ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿ ಉಪಾಧ್ಯಕ್ಷ ಮರ್ದಾಳ ಜೀವನ್‌ಜ್ಯೋತಿ ವಿಶೇಷ ಶಾಲಾ ನಿರ್ದೇಶಕ ಇಚಿಲಂಪಾಡಿ ಸೈಂಟ್ ತೋಮಸ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರು ರೆ|ಫಾ| ವಂ| ಆಂಟನಿ ಒಐಸಿ,  ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು  ರೆ|ಫಾ| ಪೌಲ್ ಕ್ರಾಸ್ತಾ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ಸಂತ ಪೌಲರ ಮಲಂಕರ ಚರ್ಚ್‌ನ ಫಾದರ್ ರೆ|ಫಾ| ಪೀಟರ್ ಜೋನ್ ಒಐಸಿ, ರೆಂಜಿಲಾಡಿ ಸೈಂಟ್ ಮೇರೀಸ್ ಸೂನೋರೋ ಜಾಕೋ ಬೈಟ್ ಸಿರಿಯನ್ ಚರ್ಚ್‌ನ ಧರ್ಮಗುರು ರೆ|ಫಾ| ಕ್ಲಿಂಟೋ ಮ್ಯಾಥ್ಯು, ನೂಜಿಬಾಳ್ತಿಲ ಪ್ರೋ ಕಥೀಡ್ರಲ್ ಧರ್ಮಗುರು ರೆ|ಫಾ| ವಿನ್ಸೆಂಟ್ ಜಾರ್ಜ್, ರೆಂಜಿಲಾಡಿ ಪೇರಡ್ಕ ಸಾನ್‌ತೋಮ್ ಚರ್ಚ್‌ನ ಧರ್ಮಗುರುವರ್ಗೀಸ್ ತೋಮಸ್, ಪದವು ಚರ್ಚ್‌ನ ಧರ್ಮಗುರುಗಳಾದ ಬೆನ್ನಿ ಮ್ಯಾಥ್ಯು, ವಿಮಲಗಿರಿ ಸೈಂಟ್ ಮೇರೀಸ್ ಚರ್ಚ್‌ನ ಧರ್ಮಗುರುಗಳಾದ ರೆ|ಫಾ| ಫಿಲಿಪ್ಸ್  ನೆಲ್ಲಿವಿಲ್ಲ, ಕುಟ್ರುಪ್ಪಾಡಿ ಸೈಂಟ್ ಮೇರೀಸ್ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರುಗಳಾದ ಮಾಣಿ ವೆಲ್ತೆಡ್ತ್, ಕರ್ಮಾಯಿ ಚರ್ಚ್‌ನ ಧರ್ಮಗುರುಗಳಾದ ರೆ|ಫಾ| ದಾನಿಯಲ್, ರೆ|ಫಾ| ವಂದನೀಯ ಮಾಣಿ ಕೋರ್‌ಎಪಿಸ್ಕೋಪಾ, ರೆ|ಫಾ| ಅನಿ, ಬಿಷಪ್‌ರ ಪ್ರಧಾನ ಕಾರ‍್ಯದರ್ಶಿ ರೆ|ಫಾ| ಎಲ್ದೋಸ್ ಮಣಿಪಾಲ, ಸೇರಿದಂತೆ  ವಿವಿಧ ಕ್ರೈಸ್ತ ದೇವಾಲಯಗಳ ಧರ್ಮಗುರುಗಳು, ಧರ್ಮಭಗಿನಿಯರು, ಟ್ರಸ್ಟೀ ಕಾರ‍್ಯದರ್ಶಿ, ಆಡಳಿತ ಮಂಡಳಿ, ಸೇರಿದಂತೆ ವಿದ್ಯಾಸಂಸ್ಥೆಗಳವರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕ್ರಿಸ್ಮಸ್ ಮೆರವಣಿಗೆಯಲ್ಲಿ ಭಾಗವಹಿಸಿದ ಸ್ಥಬ್ಧಚಿತ್ರಗಳಿಗೆ ನಗದು ಬಹುಮಾನ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪಿಯುಸಿ ಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ರೀನಾ ,  ವಿವೇಕ್‌ಚಂದ್ರನ್, ಪ್ರತಿಭಾನ್ವಿತ  ಕ್ರೀಡಾಪಟು ರೇಷ್ಮಾ , ಕಡಬ ವಿಮಲಗಿರಿ ಚರ್ಚ್ ವ್ಯಾಪ್ತಿಯ ವಿದ್ಯಾರ್ಥಿ ನೇಹಾ, ಸೈಂಟ್ ಪೌಲ್ ಮಲಂಕರ ಚರ್ಚ್ ವ್ಯಾಪ್ತಿಯ ಆಳ್ವಾಸ್ ವಿದ್ಯಾರ್ಥಿನಿ ಮೋಕ್ಷಾ ಮ್ಯಾಥ್ಯು, ಮರ್ದಾಳ ಜೀವನ್ ಜ್ಯೋತಿ ವಿಶೇಷ ಶಾಲಾ ಕ್ರೀಡಾಪಟು ರೆಬೆಕಾ, ರೆಂಜಿಲಾಡಿ ಸಾನ್‌ತೋಮ್ ಓರ್ಥಡೋಕ್ಸ್ ಚರ್ಚ್‌ನ ಕಾರ‍್ಯದರ್ಶಿ ಎ.ಎಸ್ ಪೈಲಿ, ಹಾಗೂ ನಿವೃತ್ತ ಆರೋಗ್ಯ ಸಹಾಯಕಿ ಎಲಿಜಬೆತ್ ದಂಪತಿ ಪುತ್ರ ಪಿಎಚ್‌ಡಿ ಪದವಿ ಪಡೆದ ವಿನೋದ್ ಕುಮಾರ್ ಸೇರಿದಂತೆ ವಿವಿಧ ಚರ್ಚ್‌ಗಳಿಂದ ವರ್ಣರಂಜಿತ ಸ್ಥಭ್ತಚಿತ್ರ ಪ್ರದರ್ಶಿಸಿದ ಚರ್ಚ್‌ಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಚರ್ಚ್‌ಗಳಿಗೆ ನಗದು ಹಾಗೂ  ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೊಶಾಧಿಕಾರಿ ಸಜಿ ಒ.ಕೆ ಉರುಂಬಿಲ್ ವಂದಿಸಿದರು. ಕಾರ‍್ಯದರ್ಶಿ ಜೋಸೆಫ್ ಟಿ.ಜೆ ನಿರೂಪಿಸಿದರು. ಸಭಾ ಕಾರ‍್ಯಕ್ರಮಕ್ಕೆ ಕಡಬ ಪೇಟೆಯಾದ್ಯಂತ ಸಂಯುಕ್ತ ಕ್ರಿಸ್ಮಸ್‌ನ ಭವ್ಯ ಮೆರವಣಿಗೆ ನಡೆಯಿತು. ಕಾರ‍್ಯಕ್ರಮ ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಕ್ರಿಸ್ಮಸ್ ಸಂದೇಶ ಸಾರುವ ಸ್ವಾಗತನೃತ್ಯ ನಡೆಯಿತು.

ಈ ಲೋಕದಲ್ಲಿರುವ ಎಲ್ಲರೂ ಸಂತೋಷದಿಂದಿರಬೇಕೆಂಬುದೇ ದೇವರ ಇಚ್ಚೆಯಾಗಿದ್ದು ಎಲ್ಲರ ಕ್ಷೇಮಕ್ಕಾಗಿ ಯೇಸುಕ್ರಿಸ್ತ ದೇವರು ಭೂಮಿಯಲ್ಲಿ ಹುಟ್ಟಿ ಸರ್ವರನ್ನು ಅನುಗ್ರಹಿಸಿದ ದೇವರೂಪಿಯಾಗಿದ್ದಾರೆ -ಬಿಷಪ್ ಯಾಕೂಬ್ ಮೋರ್ ಅಂತೋನಿಯೋಸ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.