ಕಾಣಿಯೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರಿಗೆ ರುಕ್ಮಯ್ಯ ಮಲೆಕೆರ್ಚಿಯವರಿಂದ  ಅವ್ಯಾಚ್ಯ ಶಬ್ದಗಳಿಂದ ನಿಂದನೆ- ಸೂಕ್ತ ಕ್ರಮಕ್ಕೆ ಗ್ರಾಮಸ್ಥರಿಂದ ದೂರು- ಬೆಳ್ಳಾರೆ ಠಾಣಾ ಮುಂದೆ ಪ್ರತಿಭಟನೆ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1

 

ಕಾಣಿಯೂರು: ಕಾಣಿಯೂರು ಗ್ರಾ.ಪಂ ವಿರುದ್ಧ ಇಲ್ಲ ಸಲ್ಲದ ಆಧಾರ ರಹಿತ ಆರೋಪಗಳನ್ನು ಮಾಡಿ, ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡುತ್ತಿರುವ ರುಕ್ಮಯ್ಯ ಗೌಡ ಮಲೆಕೆರ್ಚಿ ಎಂಬವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಚಾರ್ವಾಕ, ಕಾಣಿಯೂರು, ದೋಳ್ಪಾಡಿ ಗ್ರಾಮದ ಸುಮಾರು 200ಕ್ಕೂ ಮಿಕ್ಕಿ ಗ್ರಾಮಸ್ಥರು ಸಹಿ ಹಾಕಿದ ಮನವಿಯನ್ನು ಪುತ್ತೂರು ಉಪವಿಭಾಗ ಪೊಲೀಸ್ ಅಧೀಕ್ಷಕರಿಗೆ ಗ್ರಾಮಸ್ಥರ ಪರವಾಗಿ ಪದ್ಮಯ್ಯ ಗೌಡ ಅನಿಲರವರು ದ 28ರಂದು  ದೂರು ಸಲ್ಲಿಸಿದ್ದಾರೆ. ರುಕ್ಮಯ್ಯ ಗೌಡರು ದುರುದ್ದೇಶ ಪೂರಿತವಾಗಿ ಸಾರ್ವಜನಿಕ ವಲಯದಲ್ಲಿ ಗ್ರಾ.ಪಂಗೆ ಕೆಟ್ಟ ಹೆಸರು ಮತ್ತು ಕಳಂಕ ಹಚ್ಚುವ ದುರುದ್ಧೇಶವನ್ನು ಹೊಂದಿರುವುದು ನಮಗೆ ಮನದಟ್ಟಾಗಿದೆ. ಗ್ರಾ.ಪಂ.ನ ಅಧ್ಯಕ್ಷರು, ಮತ್ತು ಅಭಿವೃದ್ಧಿ ಅಧಿಕಾರಿ ಮತ್ತು ಸದಸ್ಯರು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರಕಾರ ಪಂಚಾಯತ್ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೊರೆಯಲ್ಪಟ್ಟ ಕೊಳವೆ ಬಾವಿಯನ್ನು ಮುಚ್ಚುವುದಕ್ಕೋಸ್ಕರ ಕಳೆದ ದ 19ರಂದು ಮಲೆಕೆರ್ಚಿಗೆ ತೆರಳಿದ ಸಂದರ್ಭದಲ್ಲಿ ಮಹಿಳೆಯಾಗಿರುವ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಹಲ್ಲೆ ನಡೆಸಲು ಸ್ಥಳದಲ್ಲಿದ್ದ ಪೊಲೀಸರ ಎದುರಿನಲ್ಲಿಯೇ ಮುಂದಾಗಿರುವುದು ನಮಗೆ ತಿಳಿದಿರುತ್ತದೆ, ಆದರೆ ಪೊಲೀಸರು ರುಕ್ಮಯ್ಯ ಗೌಡರವರನ್ನು ಬಂಧಿಸುವುದಾಗಲಿ, ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಲಿ, ಈ ತನಕ ಮಾಡಿರುವುದಿಲ್ಲ. ತದ ನಂತರವು ರುಕ್ಮಯ್ಯ ಗೌಡರು ಪತ್ರಿಕಾಗೋಷ್ಠಿ ನಡೆಸಿ ಪಂಚಾಯತ್ ಸದಸ್ಯರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸುಳ್ಳು ಆರೋಪಿಸಿ ಗ್ರಾ.ಪಂ ಆಡಳಿತಕ್ಕೆ ಕಳಂಕ ಹಚ್ಚುವ ಚಾಳಿಯನ್ನು ಮುಂದುವರಿಸಿಕೊಂಡು ಬಂದಿದ್ದು, ಪಂಚಾಯತ್‌ನ ನಮ್ಮ ಜನಪ್ರತಿನಿಧಿಗಳು ಯಾರೇ ಆಗಲೀ ಜೀವ ಬೆದರಿಕೆ ಒಡ್ಡುವ ಕೀಳು ಮಟ್ಟದವರಲ್ಲ ಅನ್ನುವ ವಿಶ್ವಾಸ ನಮಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಮಲೆಕೆರ್ಚಿ ರುಕ್ಮಯ್ಯ ಗೌಡ ಎಂಬವರ ಮೇಲೆ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಕ್ರಮಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಿzವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಧರ್ಮೇಂದ್ರ ಗೌಡ ಕಟ್ಟತ್ತಾರು, ಶಿವರಾಮ ರೈ ಪಿಜಕ್ಕಳ, ಸುರೇಶ್ ಓಡಬಾಯಿ, ಚಂದ್ರಶೇಖರ ಪಾಳ್ತಿಲ, ಪುಟ್ಟಣ್ಣ ಗೌಡರವರು ಮನವಿ ಸಲ್ಲಿಸುವ ವೇಳೆ ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.