ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಪ್ರ. ಕಾರ್ಯದರ್ಶಿ ಮನೋಹರ್ ಕೆ.ವಿ. ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ; ಸಲಹಾ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಗೌರವಾಧ್ಯಕ್ಷ ಡಿ.ವಿ.; ಮಹಿಳಾ ಘಟಕದ ಅಧ್ಯಕ್ಷೆ ಯಶೋಧ ಕೆ. ಗೌಡ, ಪ್ರ.ಕಾರ್ಯದರ್ಶಿ ಜಯಂತಿ ಆರ್ ಗೌಡ

Puttur_Advt_NewsUnder_1
Puttur_Advt_NewsUnder_1

okkaliga

ಪುತ್ತೂರು: ಪ್ರತಿಷ್ಠಿತ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಬೊಮ್ಮೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಮನೋಹರ್ ಕೆ.ವಿ ಹಾಗೂ ಗೌರವಾಧ್ಯಕ್ಷರಾಗಿ ಚಿದಾನಂದ ಬೈಲಾಡಿ ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿ ಅಧ್ಯಕ್ಷರಾಗಿ ಮೋಹನ್ ಗೌಡ ಇಡ್ಯಡ್ಕ, ಗೌರವಾಧ್ಯಕ್ಷರಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ತಾ.ಪಂ ಮಾಜಿ ಸದಸ್ಯೆ ಯಶೋಧ ಕೆ. ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ತಾ.ಪಂ ಸದಸ್ಯೆ ಜಯಂತಿ ಆರ್ ಗೌಡ ಆಯ್ಕೆಯಾಗಿದ್ದಾರೆ.

ಸಂಘದ ನಿಯೋಜಿತ ಅಧ್ಯಕ್ಷ  ನಾಗಪ್ಪ ಗೌಡರು ದ.೩೧ರಂದು ಪದಪ್ರದಾನ ಸಮಾರಂಭದಲ್ಲಿ ಹಾಲಿ ಅಧ್ಯಕ್ಷ ಕೆಮ್ಮಾರ ಗಂಗಾಧರ ಗೌಡರಿಂದ ಅಧ್ಯಕ್ಷತೆಯ ಜವಾಬ್ದಾರಿ ಸ್ವೀಕರಿಸಿದ್ದಾರೆ. ಉಪಾಧ್ಯಕ್ಷರುಗಳಾಗಿ ಸಂಜೀವ ಮಠಂದೂರು, ಕೆ.ವಿಶ್ವನಾಥ ಗೌಡ, ಯು.ಪಿ ರಾಮಕೃಷ್ಣ ಗೌಡ, ಜಿನ್ನಪ್ಪ ಗೌಡ ಮಳುವೇಲು, ಶಿವರಾಮ ಎಚ್.ಡಿ, ಖಜಾಂಜಿಯಾಗಿ ಶ್ರೀಧರ ಗೌಡ ಕಣಜಾಲು, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ರವಿ ಮುಂಗ್ಲಿಮನೆ, ಕಾರ್ಯದರ್ಶಿಯಾಗಿ ಸುರೇಶ್ ಗೌಡ ಕಲ್ಲಾರೆ, ಮಧು ನರಿಯೂರು, ಪ್ರವೀಣ್ ಕುಂಟ್ಯಾನ, ಗೌರಿ ಬನ್ನೂರು, ಪುತ್ತೂರು ವಲಯ ಉಸ್ತುವಾರಿ ಲಿಂಗಪ್ಪ ಗೌಡ ತೆಂಕಿಲ, ಸವಣೂರು ವಲಯ ಉಸ್ತುವಾರಿ ಗೋಪಾಲಕೃಷ್ಣ ಪಟೀಲ್, ಕುಂಬ್ರ ವಲಯ ಉಸ್ತುವಾರಿ ಸಂಜೀವ ಗೌಡ ಪಾಲ್ತಾಡಿ, ಉಪ್ಪಿನಂಗಡಿ ವಲಯ ಉಸ್ತುವಾರಿಯಾಗಿ ಮನೋಹರ ಡಿ.ವಿ, ನೆಲ್ಯಾಡಿ ವಲಂii ಉಸ್ತುವಾರಿಯಾಗಿ ಸುಂದರ ಗೌಡ ಅತ್ರಜಾಲು, ಆಲಂಕಾರು ವಲಯ ಉಸ್ತುವಾರಿಯಾಗಿ ತಿಮ್ಮಪ್ಪ ಗೌಡ ಕುಂಡಡ್ಕ, ಕಡಬ ವಲಯ ಉಸ್ತುವಾರಿಯಾಗಿ ಜನಾದನ ಗೌಡ ಪಣೆಮಜಲು, ಮಹಿಳಾ ಸಂಘದ ಸಲಹೆಗಾರರಾಗಿ ಆಶಾ ತಿಮ್ಮಪ್ಪ ಗೌಡ, ವಿದ್ಯಾರ್ಥಿ ಸಂಘದ ಸಲಹೆಗಾರರಾಗಿ ಡಾ ಶ್ರೀಧರ ಗೌಡ ಪಾನತ್ತಿಲ, ಮಾಧ್ಯಮ ಪ್ರತಿನಿಧಿಯಾಗಿ ಲೋಕೇಶ್ ಬನ್ನೂರು, ಸಮುದಾಯ ಭವನ ಉಸ್ತುವಾರಿ ಜನಾದನ ಗೌಡ ಬನ್ನೂರು, ಸದಸ್ಯರಾಗಿ ಎ.ವಿ ನಾರಾಯಣ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ದೇವದಾಸ ಗೌಡ ಮರೀಲ್, ದಯಾನಂದ ಕೆ.ಎಸ್, ಕಡ್ಯ ಲೋಕಯ್ಯ ಗೌಡ, ದಾಮೋದರ ನಂದಿಲ, ಹರಿಪ್ರಕಾಶ್ ಬೈಲಾಡಿ, ಶಿವರಾಮ ಗೌಡ ಮೆದು, ಯಶವಂತ ಕಳುವಾಜೆ, ಮೋಹನ ಗೌಡ ಪಾದೆ, ಶಿವರಾಮ ಗೌಡ ಮಾತಾವು, ರಾಧಾಕೃಷ್ಣ ಕೇರ್ನಡ್ಕ, ನಾಗೇಶ ನಳಿಯಾರು, ಪ್ರೇಮಾನಂದ ಬಿ, ಎ.ವಿ ನಾರಾಯಣ, ಮುರಳೀಧರ ಕೆಮ್ಮಾರ, ಕಿಶೋರ್ ಕುಮಾರ್ ಬೇರಿಕೆ, ಪರಮೇಶ್ವರ ಗೌಡ, ವಸಂತ ಎಸ್ ವೀರಮಂಗಲ, ಸೀತಾರಾಮ ಕರ್ಮಾಯಿ, ಪದ್ಮಯ್ಯ ಗೌಡ ಪರಣೆ, ಲೋಕಯ್ಯ ಗೌಡ, ಸುಂದರ ಗೌಡ ನಡುಬೈಲು , ಗಣೇಶ ನೈತಾಡಿ, ಗೋವರ್ಧನ ಗೌಡ ಕಲ್ಲೇಗ, ಚಂದ್ರಶೇಖರ ಕೋಡಿಬೈಲು, ಪದ್ಮಯ್ಯ ಗೌಡ ತುಂಬ್ಯ, ಸತೀಶ್ ಪಾಂಬಾರು, ವೆಂಕಟ್ರಮಣ ಗೌಡ ಕೆ.ಎಸ್, ಉಮೇಶ ಗೌಡ ಪಿಲಿಗುಂಡ, ಮಾಧವ ಕಾಂತಿಲ, ಮಾಧವ ಪೆರಿಯತ್ತೋಡಿ, ವೆಂಕಟ್ರಮಣ ಗೌಡ ಕರೆಂಕಿ, ಪದ್ಮಪ್ಪ ಗೌಡ ರಾಮಕುಂಜ, ವಾಡ್ಯಪ್ಪ ಗೌಡ ಬಿಳಿನೆಲೆ, ನೋಣಯ್ಯ ಗೌಡ ಡೆಬ್ಬಿಲಿಯವರು ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ : ಸಲಹಾ ಸಮಿತಿ ಗೌರವಾಧ್ಯಕ್ಷರಾಗಿ ಡಿ.ವಿ ಸದಾನಂದ ಗೌಡ, ಅಧ್ಯಕ್ಷರಾಗಿ ಮೋಹನ ಗೌಡ ಇಡ್ಯಡ್ಕ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಸಿ.ಪಿ ಜಯರಾಮ ಗೌಡ, ಶಿವಣ್ಣ ಗೌಡ ಬಿದಿರಾಡಿ, ಕೆ.ಆರ್ ಲಕ್ಷ್ಮಣ ಗೌಡ ಕುಂಟಿಕಾನ, ವೀರಪ್ಪ ಗೌಡ ಪಾರ್ಲ, ದೇರಣ್ಣ ಗೌಡ ಕನ್ನಡ್ಕ, ತುಕಾರಾಮ ಗೌಡ ರಂಗಯ್ಯ ಕಟ್ಟೆ, ರಾಮಕೃಷ್ಣ ಗೌಡ ಸಾಮೆತ್ತಡ್ಕ, ಬಿ.ಕಿಟ್ಟಣ್ಣ ಗೌಡ ಬಪ್ಪಳಿಗೆ, ಸಾಂತಪ್ಪ ಗೌಡ ಪಿಜಕ್ಕಲ, ಎಂ.ಎಸ್ ಶಿವರಾಮ ಮುಂಗ್ಲಿಮನೆ, ಚಂದ್ರಶೇಖರ ಬ್ರಂತೋಡು, ಲಿಂಗಪ್ಪ ಗೌಡ ಕಡಂಬಿಯಾಲ, ಸೋಮಪ್ಪ ಗೌಡ ಬಡಾವು, ಜಿನ್ನಪ್ಪ ಗೌಡ ಕಳುವಾಜೆ, ಗೋವಿಂದ ಗೌಡ ಮುಂಗ್ಲಿಮನೆ, ನಾಗಪ್ಪ ಗೌಡ ಮರುವಂತಿಲ, ಗುಮ್ಮಣ್ಣ ಗೌಡ ಬಂಡಾಡಿ, ಸೂರಪ್ಪ  ಗೌಡ ಕೆಮ್ಮಿಂಜೆ, ರುಕ್ಮ ಗೌಡ ತೆಂಕಿಲ, ರಾಮಕೃಷ್ಣ ಗೌಡ ಕರ್ಮಲ, ಈಶ್ವರ ಗೌಡ ಪಜ್ಜಡ್ಕ, ನೇತ್ರಾವತಿ ಪಿ ಗೌಡ, ಅನುಸೂಯ ಸಂಜೀವ ಗೌಡ, ಶಿವರಾಮ ಗೌಡ ಇಡ್ಯಪೆ, ಕೆ.ಪಿ ಗೌಡ ನಿವೃತ್ತ ಇಂಜಿನಿಯರ್ ಪರ್ಲಡ್ಕರವರು ಆಯ್ಕೆಯಾಗಿದ್ದಾರೆ. ಗೌಡ ಯುವ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಯುವ ಸಂಘದ ಪ್ರ.ಕಾರ್ಯದರ್ಶಿ  ರಾಧಾಕೃಷ್ಣ ನಂದಿಲ, ಮಹಿಳಾ ಸಂಘದ ಅಧ್ಯಕ್ಷ ಯಶೋಧ.ಕೆ ಗೌಡ,  ಪ್ರ.ಕಾರ್ಯದರ್ಶಿ ಜಯಂತಿ ಆರ್ ಗೌಡ ಖಾಯಂ ಆಹ್ವಾನಿತರಾಗಿ ಆಯ್ಕೆಗೊಂಡಿದ್ದಾರೆ.

ಮಹಿಳಾ ಸಂಘದ ಗೌರವಾಧ್ಯಕ್ಷರಾಗಿ ಗೌರಿ ಹೆಚ್: ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷರಾಗಿ ತಾ.ಪಂ ಮಾಜಿ ಸದಸ್ಯೆ ಯಶೋಧಾ ಕೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಾ.ಪಂ ಹಾಲಿ ಸದಸ್ಯೆ ಜಯಂತಿ ಆರ್ ಗೌಡ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿದ್ದ ಗೌರಿ ಹೆಚ್‌ರವರು ಗೌರವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ನಾಗಪ್ಪ ಗೌಡ ಬೊಮ್ಮೆಟ್ಟಿಯವರ ಪರಿಚಯ:  ಕನಕಮಜಲು ಗ್ರಾಮದ ಪ್ರತಿಷ್ಠಿತ ಬೊಮ್ಮೆಟ್ಟಿ ಮನೆತನದ ಐತ್ತಪ್ಪ ಗೌಡರ ಮಗನಾದ ಬೊಮ್ಮೆಟ್ಟಿ ದುಗ್ಗಪ್ಪ ಗೌಡ ಮತ್ತು ದೇವರಗುಂಡ ಬಾಲಕ್ಕ ದಂಪತಿ ಹಿರಿಯ ಪುತ್ರ ನಾಗಪ್ಪ ಗೌಡ ಬೊಮ್ಮೆಟ್ಟಿಯವರು ಕನಕಮಜಲಿನಲ್ಲಿ ಪ್ರಾಥಮಿಕ ಶಿಕ್ಷಣ, ಸುಳ್ಯದಲ್ಲಿ ಪ್ರೌಢಶಿಕ್ಷಣ, ಪುತ್ತೂರು ಸಂತಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಮತ್ತು ವಿರಾಜಪೇಟೆಯಲ್ಲಿ ಬಿ.ಎಡ್ ಶಿಕ್ಷಕ ಶಿಕ್ಷಣವನ್ನು ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ಸ್ಕೌಟ್ ಮತ್ತು ಎನ್.ಸಿ.ಸಿ ಅಂಡರ್‌ಆಫೀಸರ್ ಆಗಿ ಕರ್ತವ್ಯ ೩೦ ವರ್ಷಗಳ ಕಾಲ ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಅವರು ತನ್ನ ಕರ್ತವ್ಯದ ಅವಧಿಯಲ್ಲಿ ಕ್ರೀಡಾಕೂಟಗಳ ಸಂಘಟಕರಾಗಿ, ಪ್ರೌಢಶಾಲಾ ಶಿಕ್ಷಕರಿಗೆ ಚೈತನ್ಯ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ, ಸಮುದಾಯದತ್ತ ಶಾಲೆ ಕಾರ್ಯಕ್ರಮದ ಮೇಲ್ವಿಚಾರಕರಾಗಿ, ಉತ್ತಮ ನಾಟಕಕಾರನಾಗಿ, ಹಲವಾರು ಪೌರಾಣಿಕ ಹಾಗೂ ಸಾಮೂಹಿಕ ನಾಟಕಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ಶಿಸ್ತಿನ ಸಿಪಾಯಿಯಾಗಿದ್ದ ಇವರು ನಿವೃತ್ತಿಯ ನಂತರದಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನಕಮಜಲು ಗ್ರಾಮದ ಮಾಣಿಮಜಲು ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಮತ್ತು ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಕನಕಮಜಲು ವಿಷ್ಣುಮೂರ್ತಿ ಹಾಗೂ ಬೈನಾಟಿ ದೈವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಮತ್ತು ಆಡಳಿತ ಸಮಿತಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ತನ್ನ ಸೇವೆಯನ್ನು ಸಲ್ಲಿಸುತ್ತಾ ಶ್ರೀ ಗಜಾನನ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ. ಜಾತಿ ಸಂಘಟನೆಯಲ್ಲೂ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದು ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದು, ನಾಲ್ಕು ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದು, ಕುಂಬ್ರ ವಲಯದ ನಿಕಟಪೂರ್ವ ಉಸ್ತುವಾರಿಯಾಗಿ, ಇವರ ಸಹೋದರ ದಿ.ಜಗನ್ನಾಥ ಬೊಮ್ಮೆಟ್ಟಿಯವರು ಸ್ಥಾಪಕ ಅಧ್ಯಕ್ಷರಾಗಿದ್ದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಸ್ಥೆಯ ಕುಂಬ್ರ ಶಾಖೆಯ ಆಡಳಿತ ಸಮಿತಿ ನಿರ್ದೇಶಕರಾಗಿದ್ದಾರೆ. ಇವರ ಪತ್ನಿ ಸರೋಜಿನಿ ಕೆ.ಆರ್ ನಿವೃತ್ತ ಶಿಕ್ಷಕರಾಗಿದ್ದು, ಪುತ್ರಿ ತೇಜಸ್ವಿನಿ ಕಿರಣ್ ನೀರ್ಪಾಡಿ, ಪುತ್ರ ಚೇತನ್ ಪದವಿದರ ಶಿಕ್ಷಕ, ಸೊಸೆ ತೇಜಸ್ವಿನಿ ಪಧವೀಧರ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನ್ಯಾಯವಾದಿ ಮನೋಹರ್ ಕೆ.ವಿಯವರ ಪರಿಚಯ:

ಪುತ್ತೂರಿನ ಬಪ್ಪಳಿಗೆ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಕೊಳ್ತಿಗೆ ಗ್ರಾಮದ ಕಟ್ಟಪುಣಿ ದಿ. ವೆಂಕಪ್ಪ ಗೌಡ ಮತ್ತು ತಾರಾ ದಂಪತಿಯ ಮಕ್ಕಳಲ್ಲಿ ೬ನೇಯವರಾದ ಮನೋಹರ್ ಕೆ.ವಿಯವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿನ ಶಾಲೆಯಲ್ಲಿ ೧ ರಿಂದ ೪, ನೆಲ್ಲಿಕಟ್ಟೆ ಹಿ.ಪ್ರಾ.ಶಾಲೆಯಲ್ಲಿ ೫ ರಿಂದ ೭, ಕೊಂಬೆಟ್ಟು ಪ.ಪೂ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಮತ್ತು ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮಂಗಳೂರು ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ೪ ವರ್ಷಗಳ ಕಾಲ ಬೆಂಗಳೂರಿನಲ್ಲಿ ನ್ಯಾಯವಾದಿಗಳಾದ ಬಿ.ಆರ್ ಶ್ರೀನಿವಾಸ್ ಮತ್ತು ಬಾಲಕೃಷ್ಣರವರ ಜೊತೆ ಸೇವೆ ಸಲ್ಲಿಸಿದ್ದಾರೆ. ಬಳಿಕ ಪುತ್ತೂರಿನಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿ ಬಳಿಕ ಕಿಲ್ಲೆ ಮೈದಾನದ ಬಳಿಯ ಪುತ್ತೂರು ಸೆಂಟರ್‌ನಲ್ಲಿ ವಕೀಲ ವೃತ್ತಿ ಆರಂಭಿಸಿ ಇದೀಗ ೨೭ ವರ್ಷಗಳ ಸುದೀರ್ಘ ವಕೀಲರ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಇದರ ಜೊತೆ ಸಂಘ ಸಂಸ್ಥೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ ಅವರು ಪುತ್ತೂರು ಲಿಯೋ ಕ್ಲಬ್‌ನಲ್ಲಿ ಸದಸ್ಯರಾಗಿದ್ದು, ಪುತ್ತೂರು ಜೆಸಿಐಯಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಪಡೆದು ಕೊಂಡಿದ್ದರು. ಗೌಡ ಸಂಘದಲ್ಲೂ ಸಕ್ರೀಯರಾಗಿದ್ದ ಇವರು ಸಂಘದ ಪುತ್ತೂರು ನಗರಸಭಾ ವ್ಯಾಪ್ತಿಯ ಅಧ್ಯಕ್ಷರಾಗಿದ್ದು, ಸಂಘದ ಮೂಲಕ ನಡೆಯುವ ವಿವಿಧ ಕಾರ್ಯಕ್ರಮದಲ್ಲಿ ವೇದಿಕೆ ಸಮಿತಿ, ಸ್ವಾಗತ ಸಮಿತಿ ಜವಾಬ್ದಾರಿ ವಹಿಸಿ ಕೊಂಡು ಪ್ರಸ್ತುತ ಶ್ರೀ ಆದಿಚುಂಚನಗಿರಿ ಮಹಾಸ್ವಾಮಿಗಳ ಗ್ರಾಮ ಭೇಟಿ ಕಾರ್ಯಕ್ರಮಕ್ಕೆ ಪ್ರಚಾರ ಸಮಿತಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರಸ್ತುತ ಇಲ್ಲಿನ ಬಪ್ಪಳಿಗೆಯಲ್ಲಿ ವಾಸ್ತವ್ಯ ಹೊಂದಿರುವ ಇವರು ಪತ್ನಿ ಮಮತಾ ಕೆ.ಎ, ಪುತ್ರಿ ಎಸ್.ಎಸ್.ಎಲ್.ಸಿ ಓದುತ್ತಿರುವಲಹರಿ ಕೆ.ಎಂ, ಪುತ್ರ ೫ನೇ ತರಗತಿಯ ಶಿಶಿರ್‌ರವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

ಯಶೋದಾ ಕೆ. ಗೌಡರ ಪರಿಚಯ:  ಗೌಡ ಸಂಘದ ಮಹಿಳಾ ಘಟಕದ  ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಯಶೋಧ ಕೆ. ಗೌಡರವರು ತಾ.ಪಂ ಮಾಜಿ ಸದಸ್ಯೆಯಾಗಿದ್ದು, ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡರ ಪತ್ನಿ. ವಿಟ್ಲ ಕುಳ ಗ್ರಾಮದ ಬಾಕಿಮಾರು ಬಾಬು ಗೌಡ ಮತ್ತು ಇಡ್ಕಿದು ಪಂಚಾಯತ್‌ನ ಮಾಜಿ ಸದಸ್ಯೆ ಲಲಿತಾ ದಂಪತಿ ಪುತ್ರಿಯಾಗಿರುವ ಯಶೋಧಾರವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಕಬಕದಲ್ಲಿ ಪೂರೈಸಿದ್ದು, ಪಿಯುಸಿಯನ್ನು ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ಪಡೆದರು. ಬಾಲ್ಯದಿಂದಲೇ ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನರಿಮೊಗರು ಮಾಡತ್ತಾರು ಕೃಷ್ಣಪ್ಪ ಗೌಡರನ್ನು ವಿವಾಹವಾದ ಬಳಿಕ ನರಿಮೊಗರು ಗ್ರಾ.ಪಂನಲ್ಲಿ ೨ ಬಾರಿ, ತಾ.ಪಂಗೆ ಒಂದು ಬಾರಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಸ್ವ ಸಹಾಯ ಸಂಘ, ಸ್ತ್ರೀ ಶಕ್ತಿ ಮತ್ತು ಒಕ್ಕೂಟದ ಕಾರ್ಯದರ್ಶಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಬಿಜೆಪಿ ಕ್ಷೇತ್ರ ಮಂಡಲದ ಸಮಿತಿ ಉಪಾಧ್ಯಕ್ಷರಾಗಿದ್ದಾರೆ. ಮಾವ ಉಕ್ರಪ್ಪ ಗೌಡ, ಅತ್ತೆ ಕಮಲ, ಪತಿ ಕೃಷ್ಣಪ್ಪ ಗೌಡ, ಪುತ್ರ ೧೦ನೇ ತರಗತಿಯ ಚೈತ್ರೇಶ್, ಪುತ್ರಿ ೬ನೇ ತರಗತಿಯ ಕುಷಿತಾರವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

ಜಯಂತಿ ಆರ್ ಗೌಡರವರ ಪರಿಚಯ:  ಗೌಡ ಸಂಘ ಮಹಿಳಾ ಘಟಕದ ನೂತನ ಪ್ರಧಾನ ಕಾಂiiದರ್ಶಿಯಾಗಿ ಆಯ್ಕೆಗೊಂಡಿರುವ ಜಯಂತಿ ಆರ್ ಗೌಡರವರು ಪ್ರಸ್ತುತ ತಾ.ಪಂ ಸದಸ್ಯರಾಗಿದ್ದಾರೆ. ವಿಟ್ಲ ಕಾಯರ್‌ಮಾರ್ ದಿ.ಅಚ್ಚುತ ಗೌಡ ಮತ್ತು ಕೂಸಮ್ಮರವರ ಪುತ್ರಿಯಾಗಿರುವ ಜಯಂತಿ ಆರ್ ಗೌಡರವರು ತನ್ನ ಪ್ರಾಥಮಿಕ ಶಿಕ್ಷಣವನ್ನು ವಿಟ್ಲಮಾಡ್ನೂರು ಗ್ರಾಮದ ಮಾಡತ್ತಾರು ಶಾಲೆ ಹಾಗೂ ಪ್ರೌಢ ಶಿಕ್ಷಣವನ್ನು ವಿಟ್ಲ ಬಾಲಿಕ ಪ್ರೌಢಶಾಲೆಯಲ್ಲಿ ಪಡೆದಿದ್ದು, ಬಾಲ್ಯದಿಂದಲೇ ಮಹಿಳಾ ಮಂಡಲದಲ್ಲಿ ಸಕ್ರೀಯವಾಗಿ ಸಂಚಲನದಲ್ಲಿದ್ದ ಅವರು ಹಳೆನೇರಂಕಿ ಅಲೆಪ್ಪಾಡಿ ದಿವಂಗತರಾದ ಕುಕ್ಕಪ್ಪ ಗೌಡ ಮತ್ತು ಲಿಂಗಮ್ಮ ದಂಪತಿ ಪುತ್ರ ರುಕ್ಮಯ್ಯ ಗೌಡರನ್ನು ವಿವಾಹ ಆದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ರಾಮಕುಂಜ ಗ್ರಾ.ಪಂನಲ್ಲಿ ೧೨ ಬಾರಿ ಅಧ್ಯಕ್ಷ, ಉಪಾಧ್ಯಕ್ಷರಾಗಿ, ತಾ.ಪಂಗೆ ೨ ಬಾರಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯಲ್ಲಿ ೨ ಬಾರಿ ಅಧ್ಯಕ್ಷರಾಗಿದ್ದು, ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿ ಶರವೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೋಲ್ಪೆ ಗ್ರಾಮದ ಅಲೆಪ್ಪಾಡಿ ಕಳಾಯಿಯಲ್ಲಿ ವಾಸ್ತವ್ಯವಿದ್ದು, ಪತಿ ಕೆ.ಎಸ್.ಆರ್.ಟಿ.ಸಿ ನಿವೃತ್ತ ನಿರ್ವಾಹಕ ರುಕ್ಮಯ ಗೌಡ, ಪುತ್ರ ವಿದೇಶದಲ್ಲಿರುವ ಕಾರ್ತಿಕ್ ಮತ್ತು ಪುತ್ತೂರು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿರುವ ಕೃತಿಕ್‌ರವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.