ಡಿ. 30ರಂದು ಪುತ್ತೂರಿನ ಅನುಷಾ ಹೆಗ್ಡೆ ಅಭಿನಯದ ಎನ್.ಎಚ್.37 ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

anushaಪುತ್ತೂರಿನ ಬೆಡಗಿ ನಾಯಕಿ ನಟಿ ಅನುಷಾ ಹೆಗ್ಡೆ 

ಜ ಜ್ಯೋತಿಪ್ರಕಾಶ್ ಪುಣಚ

ಎಲ್ಲಾ ಸಿನಿಮಾಗಳು ಶುರುವಾಗುವುದೇ ಹೊಸ ಕನಸು ಮತ್ತು ಭರವಸೆಗಳಿಂದ. ಅಂತಹ ಹೊಸ ಆಯಾಮದಿಂದ ಬಿಡುಗಡೆಯಾಗುತ್ತಿರುವ ಚಿತ್ರದ ಹೆಸರು ಎನ್.ಎಚ್.೩೭. ಈ ಹಾರರ್ ಮೂವೀ ಡಿಸೆಂಬರ್ ೩೦ ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರದ ಬಿಡುಗಡೆಯೊಂದಿಗೆ ಒಂದು ವಿಶೇಷತೆಯಿದೆ.  ಚಿತ್ರದ ನಾಯಕಿ ಪುತ್ತೂರಿನವರು. ನಗರದ ಉರ್ಲಾಂಡಿ ನಿವಾಸಿ ಅನುಷಾ ಹೆಗ್ಡೆ.

 ಪುತ್ತೂರು ನಗರದ ಉರ್ಲಾಂಡಿ ನಿವಾಸಿ ಉಮೇಶ್ ಹೆಗ್ಡೆ, ಸ್ವರ್ಣಲತಾ ಹೆಗ್ಡೆಯವರ ಪುತ್ರಿ. ಪುತ್ತೂರಿನ ವಿವೇಕಾನಂದ ವಿದ್ಯಾ ಸಂಸ್ಥೆಗಳಲ್ಲಿ ಪದವಿ ತನಕ ವ್ಯಾಸಂಗ ಮಾಡಿರುವ ಇವರು ಬಿಕಾಂ ಪದವೀಧರೆ. ಪ್ರಸ್ತುತ ಮಂಗಳೂರಿನ ’ದಿಯಾ ಸಿಸ್ಟಮ್’ನಲ್ಲಿ ಉದ್ಯೋಗದಲ್ಲಿದ್ದು, ಜೊತೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯದಲ್ಲಿ ಎಂ.ಎ ಮತ್ತು ದೂರ ಶಿಕ್ಷಣದಲ್ಲಿ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರು ನೀಡುವ ೨೦೧೧-೧೨ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ವಿಜೇತೆಯಾಗಿದ್ದಾರೆ. ಈಕೆಗೆ ಇದು ಚೊಚ್ಚಲ ಚಿತ್ರ. ನಾಯಕಿ ಪಾತ್ರಕ್ಕೆ ಒಪ್ಪುವಂತಹ ಸುಂದರವಾದ ಮೈಕಟ್ಟು,  ಸಾವಿರಾರು ವೇದಿಕೆಗಳಲ್ಲಿ ಸೈ ಎನಿಸಿಕೊಂಡ ನೃತ್ಯ ಕಲಾವಿದೆ. ಹಾಡುಗಾರಿಕೆ ಮತ್ತು ರಂಗನಟನೆಯಲ್ಲಿಯೂ ಪ್ರೇಕ್ಷಕರನ್ನು ಹಿಡಿದಿಟ್ಟ ಅದ್ಭುತವಾದ ಪ್ರತಿಭೆ. ನೃತ್ಯಗಾರ್ತಿ ಮಾತ್ರವಲ್ಲದೆ ನೃತ್ಯ ನಿರ್ದೇಶಕಿಯೂ ಹೌದು. ಈ ಎಲ್ಲಾ ಬಹುಮುಖ ಪ್ರತಿಭೆಯ ಪುತ್ತೂರಿನ ಹುಡುಗಿಗೆ ಪ್ರಥಮ ಚಿತ್ರದಲ್ಲಿಯೇ ನಾಯಕಿ ನಟಿಯಾಗುವ ಅರ್ಹತೆ ಒಲಿದು ಬಂದಿದೆ. ಪ್ರಥಮ ಚಿತ್ರದಲ್ಲಿಯೇ ಅದ್ಭುತ ನಟನೆಯ ಮೂಲಕ ಸೈ ಎನಿಸಿಕೊಂಡ ಅನುವಿಗೆ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದೆ. ಮಂಗಳೂರಿನ ಇಬ್ರಾಹಿಂ ಮೂಡುಶೆಡ್ಡೆ ನಿರ್ದೇಶನದ ಬಣ್ಣ ಬಣ್ಣದ ಬದುಕು ಚಿತ್ರದ ಸಹ ನಿರ್ದೇಶಕಿಯಾಗಿ ಮತ್ತು ನೃತ್ಯ ನಿರ್ದೇಶಕಿಯಾಗಿರುವ ಈಕೆ ಈ ಚಿತ್ರದಲ್ಲಿ ಅತಿಥಿ ಕಲಾವಿದೆಯಾಗಿ ಮಿಂಚಿದ್ದಾರೆ. ಎರಡು ಚಿತ್ರಗಳಲ್ಲಿ ನಟಿಸಿದಾಗಲೇ ಕಿರುತೆರೆಯಲ್ಲಿಯೂ ಅವಕಾಶ ಒದಗಿ ಬರಲಾರಂಭಿಸಿದೆ. ಜನವರಿ ೧೬ ರಿಂದ ಕಲರ‍್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ’ರಾಧ ರಮಣ’ಕನ್ನಡ ಕೌಟುಂಬಿಕ ಧಾರಾವಾಹಿಯಲ್ಲಿ ಪ್ರತಿಯೊಬ್ಬ ವೀಕ್ಷಕರು ನೆನಪಿಡಲೇ ಬೇಕಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಅನುಮಾನವೇ ಬೇಡ ಇದು ಸಂಪೂರ್ಣ ಹೊಸಬರ ಚಿತ್ರ. ತುಳುನಾಡಿನ ಪ್ರಕೃತಿ ರಮಣೀಯ ಪರಿಸರಗಳಲ್ಲಿ ಚಿತ್ರೀಕರಣಗೊಂಡ ವಿಭಿನ್ನ ಶೈಲಿಯ ಕನ್ನಡ ಸಿನಿಮಾದಲ್ಲಿ ವಾಸ್ತವ ಅಂಶಗಳು ಚಿತ್ರದ ಹೈಲೈಟ್. ಎನ್ ಎಚ್ ೩೭. ಚಿತ್ರದ ಹೆಸರೇ ಹೇಳುವಂತೆ ದಾರಿ ತಪ್ಪುತ್ತಿರುವ ಹದಿಹರೆಯದ ಹುಡುಗ ಹುಡುಗಿಯ ಜೀವನದಲ್ಲಿ ಘಟಿಸುವ ಘಟನೆಗಳ ಹಾರರ್ ಪ್ರೇಮ ಕಥಾ ವಸ್ತು ಇರುವ ಚಿತ್ರವಿದು. ಸಮಾಜದಲ್ಲಿ ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಕಥೆಗಳೇ ಚಿತ್ರಕ್ಕೆ ಸ್ಫೂರ್ತಿ. ಕನ್ನಡ ಚಿತ್ರಗಳ ಮಟ್ಟಿಗೆ ಇದು ವಿಭಿನ್ನ ಪ್ರಯತ್ನ. ಹಾಗಂತ ಚಿತ್ರದಲ್ಲಿ ಎಲ್ಲವೂ ವಿಚಿತ್ರವಲ್ಲ. ಇದೊಂದು ಪೂರ್ಣ ಪ್ರಮಾಣದಲ್ಲಿ ನ್ಯಾಶನಲ್ ಹೈವೇಯಲ್ಲಿಯೇ ಚಿತ್ರೀಕರಣಗೊಂಡ ಸುಂದರವಾದ ಕಥೆ. ವಿಶೇಷವೆಂದರೆ ಇಲ್ಲಿ ಯಾವುದೇ ಹಾಡುಗಳಿಲ್ಲ.

ಚಿತ್ರದ ಅವಧಿ ಕೇವಲ ಒಂದುಮುಕ್ಕಾಲು ಗಂಟೆ ಮಾತ್ರ… :  ಬೆಂಗಳೂರು ಹರ್ಷವರ್ಧನ್ ನಿರ್ದೇಶಿಸುತ್ತಿರುವ ಎನ್ ಎಚ್ ೩೭. ಚಿತ್ರಕ್ಕೆ  ನಾಯಕಿ ನಟಿಯ ಹುಡುಕಾಟ ನಡೆಯುತ್ತಿದ್ದಾಗ ಪುತ್ತೂರು ಮೂಲದ ಅನುಷಾ ಹೆಗ್ಡೆಯನ್ನು  ಕುಟುಂಬದ ಆತ್ಮೀಯರಾಗಿದ್ದ ಸರಪಾಡಿಯ ಲೋಹಿತ್ ಶೆಟ್ಟಿಯವರು ಚಿತ್ರ ನಿರ್ಮಾಪಕರಿಗೆ ಪರಿಚಯಿಸಿದವರು.  ನಿರ್ಮಾಪಕರು ಮತ್ತು ಆಯ್ಕೆ ತಂಡವನ್ನು  ಭೇಟಿಯಾದ ಒಂದೇ ಒಂದು ದಿವಸದ ಅವಧಿಯಲ್ಲಿಯೇ ಕ್ಲಾಸಿಕಲ್ ಡ್ಯಾನ್ಸರ್ ಎಂಬ ನೆಲೆಯಲ್ಲಿ ನಾನು ನಾಯಕಿ ನಟಿಯಾಗಿ ಆಯ್ಕೆಯಾಗಿರುವುದು ನನಗೆ ಯಾವತ್ತೂ ಮರೆಯಲಾರದ ಖುಷಿಯನ್ನು ನೀಡಿತು.  ವೇದಿಕೆಯಲ್ಲಿ ನಟಿಸಿದ್ದು ಬಿಟ್ಟರೆ ಅಂಥದೇನೂ ಅನುಭವ ಇಲ್ಲ.  ಕ್ಯಾಮರಾದ ಮುಂದೆ ಪ್ರಥಮವಾಗಿ ನಿಂತಿದ್ದೇನೆ. ನಾಟ್ಯ ಗುರುಗಳಾದ ಕುದ್ಕಾಡಿ ವಿಶ್ವನಾಥ ರೈ, ನಯನ ವಿ.ರೈ, ಅಸ್ತಿಕಾ ರೈ ಮತ್ತು ಸ್ವಸ್ತಿಕಾ ರೈ ಅವರ ಮಾರ್ಗದರ್ಶನ  ತಂದೆ ತಾಯಿ, ಸಹೋದರಿ ವಿನುಷಾ ಹೆಗ್ಡೆ, ಸಹೋದರ ಅಶ್ವಿನ್ ಹೆಗ್ಡೆಯವರ ಪ್ರೋತ್ಸಾಹದಿಂದ ಉತ್ತಮವಾದ ಅಭಿನಯ ನೀಡಲು ಪ್ರಯತ್ನಿಸಿದ್ದೇನೆ. ಇದು ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ನೋಡಬೇಕಾದ ಚಿತ್ರವಾಗಿದೆ. ಯಶಸ್ವಿಯಾಗಿ ಚಿತ್ರೀಕರಣವನ್ನು ಮುಗಿಸಿದು, ೩೦ರಂದು ತೆರೆ ಕಾಣುತ್ತಿದೆ. ನನಗೊಂದು ಸುಂದರವಾದ ಕನಸ್ಸಿತ್ತು. ತಾನೊಬ್ಬ  ನಟಿ ಎನಿಸಿಕೊಳ್ಳಬೇಕೆಂದು. ಇದೀಗ ನೆರವೇರಿದೆ. ಈ ಮೂಲಕ  ಚಿತ್ರಲೋಕದಲ್ಲಿ ಗಟ್ಟಿನೆಲೆ ಕಾಣಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ಅನುಗ್ರಹ ಮತ್ತು ಸಮಸ್ತ ಕಲಾಭಿಮಾನಿಗಳ ಶುಭ ಹಾರೈಕೆ ಯಾವತ್ತೂ ಬೇಕು ಎನ್ನುತ್ತಾರೆ ಅನು.

ಉತ್ತಮ ಛಾಯಾಗ್ರಹಣಗಳನ್ನೊಳಗೊಂಡ ಹೊಸಮುಖದ ನಟನಟಿಯರನ್ನೊಳಗೊಂಡ ಚಿತ್ರದಲ್ಲಿ ನಾಯಕ ನಟ ರತನ್ ಕೊಟ್ಟಾರಿ, ಹಿರಿಯ ನಟಿ ಪದ್ಮಜಾ ರಾವ್, ಚೇತನ್ ರೈ ಮಾಣಿ  ರಿಯಾ ಮೇಘನಾ ಮಾತ್ರ ಕರಾವಳಿಯವರಾಗಿದ್ದು ಉಳಿದಂತೆ ಎಲ್ಲರೂ ಬೆಂಗಳೂರಿನವರು.   ಸಹನ ಕ್ರಿಯೇಷನ್ಸ್ ಅರ್ಪಿಸುವ ಎನ್.ಎಚ್.೩೭ ಚಿತ್ರದ ರಚನೆ ಮತ್ತು ನಿರ್ದೇಶನ ಹರ್ಷವರ್ಧನ್, ರವಿ ಮತ್ತು ರಮೇಶ್ ಮಡಿವಾಳ  ನಿರ್ಮಾಪಕರು. ಸಂಗೀತ ವಿನುಮನಸು.ಜಿ. ಛಾಯಾಗ್ರಹಣ  ಜೀವಾ ಅಂತೋಣಿಯವರದ್ದಾಗಿದ್ದು ಸಾಹಸಸಿಂಹ ಅಭಿನವ ಭಾರ್ಗವ ಡಾ| ವಿಷ್ಣು ವರ್ಧನ್ ಅವರ ಏಳನೇ ವರ್ಷದ ಜಯಂತೋತ್ಸವದ ಅಂಗವಾಗಿ ಬಿಡುಗಡೆಯಾಗುತ್ತಿದೆ.

ಚಿತ್ರ ಲೋಕದಲ್ಲಿ ಪುತ್ತೂರು ಮೂಲದ ವಿನೋದ್ ಆಳ್ವ, ಶಿವಧ್ವಜ್, ಸುರೇಶ್ ರೈ, ಅನುಷ್ಕಾ ಶೆಟ್ಟಿ, ದುನಿಯಾ ರಶ್ಮಿ ಮೊದಲಾದ ಕಲಾರತ್ನಗಳ ಹೆಸರು ಪ್ರದೇಶಕ್ಕೆ ಹೆಮ್ಮೆಯನ್ನು ತಂದಿದ್ದು, ಇದೀಗ ಅನುಷಾ ಹೆಗ್ಡೆಯ ಚೊಚ್ಚಲ ಚಿತ್ರ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸರ್ವ ಪ್ರೇಕ್ಷಕರ ನಿರಂತರ ಪ್ರೋತ್ಸಾಹ, ಸಹಕಾರದಲ್ಲಿ ಅನುಷಾ ಹೆಗ್ಡೆ ಹೆಸರು ಕಲಾ ಕ್ಷೇತ್ರದಲ್ಲಿ ಮಿನುಗಲಿ ಎಂಬುವುದೇ ಕಲಾರಾಧಕರ ಶುಭ ಹಾರೈಕೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.