ಮರಳು ಮಾಫಿಯಾದಿಂದ ಜೀವ ಬೆದರಿಕೆ: ದೂರು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆಂಬ ಆಕ್ರೋಶದಲ್ಲಿ ರಿಕ್ಷಾ ಚಾಲಕ  ಮನೋಜ್ ರೈ  ಎಂಬವರ ಮೇಲೆ ಅಕ್ರಮ ಮರಳು ಸಾಗಾಟ ಜಾಲದ ಸದಸ್ಯರು ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಮಂಗಳವಾರ ಸಾಯಂಕಾಲ ಬಿಳಿಯೂರು ಪರಿಸರದ ಹನೀಫ್ ಎಂಬಾತನದ್ದೆನ್ನಲಾದ ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ವೇಳೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಧಾವಿಸಿ ಬಂದ ಪೊಲೀಸರು ಟಿಪ್ಪರ್ ಸಹಿತ ಮರಳು ವಶಪಡಿಸಿಕೊಂಡಿದ್ದರು.

ಈ ಘಟನೆಯ ಬೆನ್ನಿಗೆಯೇ ಮರಳು ಧಂದೆಯ ಮಂದಿ ಎನ್ನಲಾದ ಸ್ಥಳೀಯರಾದ ಪೆರ್ನೆ ಗ್ರಾಮದ ನಿಜಾಮ್, ನಾಸೀರ್, ಸಲೀಂ ಎಂಬವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆಂದು ಅಪಾದಿಸಿ ತನ್ನ ಮೇಲೆ  ಹಲ್ಲೆಗೆ ಮುಂದಾಗಿದ್ದಲ್ಲದೆ, ಅಟೋವನ್ನು ಧ್ವಂಸಗೊಳಿಸುವುದಾಗಿ ಬೆದರಿಸಿ, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಮನೋಜ್ ರೈ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಕ್ರಮ ಮರಳು ಸಾಗಾಟ ಆರೋಪಿಗಳಿಗೆ ಸೇರಿದ ಮತ್ತೊಂದು ಟಿಪ್ಪರ್ ನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಇತ್ತೀಚೆಗೆ ವಶಕ್ಕೆ ತೆಗೆದುಕೊಂಡಿದ್ದು, ಆ ವೇಳೆಯೂ ಮಾಹಿತಿ ನೀಡಿದ ಆರೋಪದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರ ಮೇಲೆ ಹಲ್ಲೆ ಯತ್ನ ನಡೆದಿತ್ತು. ಸ್ಥಳೀಯವಾಗಿ ಜನರನ್ನು ಜೀವ ಭಯವೊಡ್ಡಿ ತಮ್ಮ ಕಾನೂನು ಬಾಹಿರ ಕೃತ್ಯದ ಬಗ್ಗೆ  ಜನತೆ ಧ್ವನಿ ಎತ್ತದಂತೆ ಮಾಡಲಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಉಪ್ಪಿನಂಗಡಿ ಪೊಲೀಸರು ದೂರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.