Breaking News

ಪುತ್ತೂರು ಬೆಡಗಿ ಅನುಷಾ ಹೆಗ್ಡೆ ಅಭಿನಯದ ಎನ್.ಎಚ್.37 ಕನ್ನಡ ಚಲನ ಚಿತ್ರ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

3

 ತುಳುನಾಡಿನ ಮಣ್ಣಿನ ಗುಣದ ಅನುಗ್ರಹ- ಕುದ್ಕಾಡಿ ವಿಶ್ವನಾಥ ರೈ

 ಬಹುಭಾಷಾ ನಟಿಯಾಗಿ ಉನ್ನತ ಮಟ್ಟಕ್ಕೆ ಬೆಳೆಯಲಿ-ಹೇಮನಾಥ ಶೆಟ್ಟಿ

 ದೇವರು ಕೊಟ್ಟ ವರ- ಫಾ . ಆಸಿಸ್ ಅಲ್ಮೆಡಾ

 ನೂರಾರು ವಾರಗಳು ಚಿತ್ರ ಪ್ರದರ್ಶನ ಕಾಣಲಿ-ಜಯಂತಿ ಬಲ್ನಾಡು

 ಹೆಣ್ಮಕ್ಕಳ ಸಾಧನೆ ಮೆಚ್ಚುವಂತಹುದು-ಚಿದಾನಂದ ಕಾಮತ್

 ಅವಾರ್ಡ್ ಪಡೆಯುವ ನಟಿಯಾಗಿ ಮೂಡಿಬರಲಿ-ದಯಾನಂದ ರೈ ಮನವಳಿಕೆ

 ಹೆಣ್ಮಕ್ಕಳಿಗೆ ಪ್ರೋತ್ಸಾಹ ಕೊಟ್ಟಿರುವುದು ಸಂತೋಷ- ದಿವ್ಯಪ್ರಭಾ ಚಿಲ್ತಡ್ಕ

 ಪುತ್ತೂರಿಗೊಂದು ಗರಿ-ಜಯಂತ್ ನಡುಬೈಲು

 ಸಮಾಜಕ್ಕೂ ಹೆಮ್ಮೆ ತಂದಿದೆ-ನಾಗರಾಜ್ ಹೆಗ್ಡೆ

 ಮಕ್ಕಳ ಆಸಕ್ತಿಗೆ ಪೂರಕವಾಗಿ ಪೋಷಕರ ಬೆಂಬಲ-ಬಿ.ಜೆ.ಸುವರ್ಣ

ಪುತ್ತೂರು: ಪುತ್ತೂರು ಬೆಡಗಿ ಅನುಷಾ ಹೆಗ್ಡೆ ನಾಯಕಿ ನಟಿಯಾಗಿ ಅಭಿನಯಿಸಿದ ಎನ್.ಎಚ್.೩೭ ಕನ್ನಡ ಚಲನ ಚಿತ್ರ ದ.೩೦ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಿದ್ದು, ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಅನುಷಾ ಹೆಗ್ಡೆಯವರ ಕಾಲಿಗೆ ಗೆಜ್ಜೆ ಕಟ್ಟಿ ನೃತ್ಯ ಕಲಿಸಿದ ಪ್ರಥಮ ಗುರು ವಿಶ್ವಕಲಾನಿಕೇತನದ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ತುಳುನಾಡಿನ ಮಣ್ಣಿನ ಗುಣದ ಅನುಗ್ರಹ: ಸಭಾಕಾರ್ಯಕ್ರಮದ ಉದ್ಘಾಟಿಸಿದ ಕುದ್ಕಾಡಿ ವಿಶ್ವನಾಥ ರೈಯವರು ಮಾತನಾಡಿ ಬಾಲ್ಯದಿಂದಲೇ ನಮ್ಮಿಂದ ನಾಟ್ಯ ಕಲಿತ ಅನುಷಾ ಹೆಗ್ಡೆ ತುಳುನಾಡಿನ ಮಣ್ಣಿನ ಗುಣದ ಅನುಗ್ರಹ ಶಕ್ತಿಯನ್ನು ತೋರಿಸಿದ್ದಾಳೆ. ಮುಂದೆ ಭಾರತ ಮಾತ್ರವಲ್ಲ ಜಗತ್ತಿನಲ್ಲಿ ಮಿಂಚುವ ಅನುಗ್ರಹ ಅವಳಿಗೆ ಸಿಗಲಿ ಎಂದು ಹಾರೈಸಿದರು.

ಬಹುಭಾಷಾ ನಟಿಯಾಗಿ ಉನ್ನತ ಮಟ್ಟಕ್ಕೆ ಬೆಳೆಯಲಿ: ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಕಲಾಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಪುತ್ತೂರಿನ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ ಅನುಷಾ ಹೆಗ್ಡೆ ಮುಂದೆ ಕನ್ನಡ, ತುಳು, ತಮಿಳು, ತೆಲುಗು ಸೇರಿದಂತೆ ಬಹುಭಾಷಾ ನಟಿಯಾಗಿ ಉನ್ನತ ಮಟ್ಟಕ್ಕೆ ಬೆಳೆಯಲಿ. ಅದೇ ರೀತಿ ಮಗಳಿಗೆ ಸ್ಪೂರ್ತಿ ಕೊಟ್ಟ ಅವರ ತಾಯಿಗೆ ಮೊದಲ ಗೌರವ ಸಲ್ಲಬೇಕು ಎಂದು ಹೇಳಿದರಲ್ಲದೆ ಸಹನ ಕ್ರಿಯೇಷನ್ಸ್ ಅರ್ಪಿಸುವ ರವಿ ಮತ್ತು ರಮೇಶ್ ಮಡಿವಾಳ ನಿರ್ಮಾಣದ ಬೆಂಗಳೂರಿನ ಹರ್ಷವರ್ಧನ್ ಚಿತ್ರ ರಚಿಸಿ ನಿರ್ದೇಶಿಸಿದ್ದಾರೆ ಇವರೆಲ್ಲರು ಚಿತ್ರರಂಗಕ್ಕೆ ಹೊಸಬರು. ಇಂತಹ ಸಂದರ್ಭದಲ್ಲಿ ಚಿತ್ರದ ನಾಯಕಿಯೂ ಎಲ್ಲರಿಗೂ ಹೊಸ ಪರಿಚಯ. ಈ ನಿಟ್ಟಿನಲ್ಲಿ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಲಿ ಎಂದು ಹೇಳಿದರು.

ದೇವರು ಕೊಟ್ಟ ವರ: ಮರೀಲ್ ಚರ್ಚ್‌ನ ಧರ್ಮ ಗುರು ಫಾ. ಆಸಿಸ್ ಅಲ್ಮೆಡಾರವರು ಮಾತನಾಡಿ ಕಲೆ ದೇವರ ಆಶೀರ್ವಾದ ಅದನ್ನು ಪ್ರತ್ಯಕ್ಷವಾಗಿ ಅನುಷಾ ಹೆಗ್ಡೆಯ ಮೂಲಕ ಕಾಣುತ್ತಿzವೆ. ಅನುಷಾ ಹೆಗ್ಡೆಯವರ ನಿರಂತರ ಪ್ರಯತ್ನ ಮತ್ತು ದೇವರ ಆಶೀರ್ವಾದದಿಂದ ಅವರು ಪುತ್ತೂರಿನ ಹೆಸರನ್ನು ಅತೀ ಎತ್ತರಕ್ಕೆ ಏರಿಸಿದ್ದಾರೆ ಎಂದು ಹೇಳಿದರು.

ನೂರಾರು ವಾರಗಳು ಚಿತ್ರ ಪ್ರದರ್ಶನ ಕಾಣಲಿ: ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡುರವರು ಮಾತನಾಡಿ ಪುತ್ತೂರಿನ ಬೆಡಗಿ ಕನ್ನಡ ಚಿತ್ರರಂಗದಲ್ಲಿ ನಾಯಕಿ ನಟಿಯಾಗಿರುವುದು ಪುತ್ತೂರಿಗೆ ಅಭಿಮಾನದ ವಿಚಾರ. ಇಂತಹ ಸಂದರ್ಭದಲ್ಲಿ ಅವರ ಚಿತ್ರ ನೂರಾರು ವಾರಗಳು ಚಿತ್ರಮಂದಿರ ತುಂಬಿದ ಕಲಾಭಿಮಾನಿಗಳಿಂದ ಪ್ರದರ್ಶನ ಕಾಣಲಿ ಎಂದು ಹೇಳಿದರು.

ಹೆಣ್ಮಕ್ಕಳ ಸಾಧನೆ ಮೆಚ್ಚುವಂತಹುದು: ರಂಗಕಲಾವಿದ, ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡುರವರು ಮಾತನಾಡಿ ಓರ್ವ ಯಾವುದೇ ಕಲಾರಂಗದ ಬ್ಯಾಕ್‌ರೌಂಡ್ ಇಲ್ಲದೆ ತನ್ನ ನಿರಂತರ ಸಾಧನೆಯಿಂದ ಚಿತ್ರದ ನಾಯಕಿ ನಟಿಯಾಗಿರುವುದು ಅವರ ಸಾಧನೆ ಮೆಚ್ಚುವಂತಹುದು. ಆಧುನಿಕ ಜಗತ್ತಿನಲ್ಲಿ ಇಂಜಿನಿಯರಿಂಗ್ ವೇತನಕ್ಕಿಂತ ಧಾರಾವಾಹಿಗಳಲ್ಲೂ ಉತ್ತಮ ಸಂಪಾದನೆ ಮಾಡಬಹುದು. ಆ ಮೂಲಕ ಚಿತ್ರರಂಗಕ್ಕೂ ಕಾಲಿಡಬಹುದು. ಇಂತಹ ಸಂದರ್ಭದಲ್ಲಿ ಅನುಷಾರವರ ಸತತ ಸಾಧನೆ ಈ ಮಟ್ಟಕ್ಕೆ ಬೆಳೆಸಿದೆ. ಈ ನಿಟ್ಟಿನಲ್ಲಿ ಅನುಷಾರವರ ಪೋಷಕರಿಗೆ ಕೃತಜ್ಞತೆ ಹೇಳಬೇಕಾಗಿದೆ ಎಂದರು.

ಅವಾರ್ಡ್ ಪಡೆಯುವ ನಟಿಯಾಗಿ ಮೂಡಿಬರಲಿ: ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಯವರು ಮಾತನಾಡಿ ಮಿನುಗು ನಕ್ಷತ್ರವಾಗಿರುವ ಅನುಷಾ ಹೆಗ್ಡೆಯವರು ಮುಂದೆ ಅವಾರ್ಡ್ ಪಡೆಯುವ ನಟಿಯಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಹೆಣ್ಮಕ್ಕಳಿಗೆ ಪ್ರೋತ್ಸಾಹ ಕೊಟ್ಟಿರುವುದು ಸಂತೋಷ: ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕರವರು ಮಾತನಾಡಿ ಚಲನಚಿತ್ರಗಳಿಗೆ ಹೆಣ್ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ತನ್ನ ಮಕ್ಕಳ ಅಭಿರುಚಿಗೆ ನಿಜವಾದ ಪ್ರೋತ್ಸಾಹ ಕೊಟ್ಟಿರುವುದು ಸಂತೋಷದ ವಿಚಾರ. ಈ ನಿಟ್ಟಿನಲ್ಲಿ ಅನುಷಾಳ ತಂದೆ ತಾಯಿಯವರಿಗೆ ಕೃತಜ್ಞತೆ ಸಲ್ಲಿಸಬೇಕೆಂದರು.

ಪುತ್ತೂರಿಗೊಂದು ಹೆಮ್ಮೆ ಗರಿ: ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಮಾತನಾಡಿ ಪುತ್ತೂರಿನ ಓರ್ವ ಬೆಡಗಿ ಚಿತ್ರದಲ್ಲಿ ನಾಯಕ ನಟಿಯಾಗಿರುವುದು ಪುತ್ತೂರಿಗೊಂದು ಹೆಮ್ಮೆಯ ಗರಿ ಎಂದು ಹೇಳಿದರು.

ಸಮಾಜಕ್ಕೂ ಹೆಮ್ಮೆ ತಂದಿದೆ: ಹೆಗ್ಡೆ ಸಮಾಜದ ಪರವಾಗಿ ಹಿರಿಯರಾದ ನಾಗರಾಜ್ ಹೆಗ್ಡೆಯವರು ಮಾತನಾಡಿ ನಮ್ಮ ಸಮಾಜದ ಸುಪುತ್ರಿಯಾದ ಅನುಷಾ ಹೆಗ್ಡೆಯವರ ಮುಂದಿನ ಯಶಸ್ವಿನ ಹಾದಿ ಪುತ್ತೂರು ಮಾತ್ರವಲ್ಲ ವಿಶ್ವಮಟ್ಟಕ್ಕೂ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.

ಮಕ್ಕಳ ಆಸಕ್ತಿಗೆ ಪೂರಕವಾಗಿ ಪೋಷಕರ ಬೆಂಬಲ: ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಜೆ.ಸುವರ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ತೀರ ಅಪರೂಪದ ಪ್ರತಿಭೆಯಾಗಿ ಮಿಂಚಿದ ಅನುಷಾ ಹೆಗ್ಡೆಗೆ ಸರಸ್ವತಿಯ ಅನುಗ್ರಹವಿತ್ತು. ಎಂ.ಬಿ.ಎ ಮಾಡಬೇಕೆಂದು ಅವಳ ಆಸೆ ನಡುವೆ ಚಿತ್ರರಂಗದಲ್ಲೂ ನಾಯಕಿಯಾಗಬೇಕೆಂದು ಅಭಿಲಾಷೆಯನ್ನು ಪತ್ರಿಕೆಯಲ್ಲಿ ನೋಡಬಹುದು. ಅವಳ ಆಸಕ್ತಿಗೆ ತಕ್ಕಂತೆ ಪೋಷಕರು ಬೆಂಬಲ ನೀಡಿರುವುದು ಅವಳ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ಮಕ್ಕಳ ಆಸಕ್ತಿಯನ್ನು ಚಿವುಟ ಬೇಡಿ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ನಗರಸಭಾ ಸದಸ್ಯರಾದ ಮಹಮ್ಮದ್ ಅಲಿ, ಶಕ್ತಿ ಸಿನ್ಹ, ಜೆಸಿಂತ ಮಸ್ಕರೇನ್ಹಸ್, ಪುರಸಭಾ ಮಾಜಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂಜೀವ ನಾಯಕ್ ಕಲ್ಲೇಗ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಬೆದ್ರಾಳ, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಕಿಟ್ಟಣ್ಣ ಗೌಡ ಬಪ್ಪಳಿಗೆ, ಆರ್ಯಾಪು ಸೇವಾ ಸಹಕಾರಿ ಸಂಘದ ನಿರ್ದೇಶಕ ಸತೀಶ್ ನಾಕ್ ಪರ್ಲಡ್ಕ, ನಳಿನಿ ಲೋಕಪ್ಪ ಗೌಡ, ಹೆಗ್ಡೆ ಸಮಾಜದ ಅಧ್ಯಕ್ಷ ಗಣೇಶ್ ಹೆಗ್ಡೆ, ಶಿವಾನಂದ ಹೆಗ್ಡೆ, ರಮೇಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯದರ್ಶಿ ಸುಭಾಷ್ ರೈ ಬೆಳ್ಳಿಪ್ಪಾಡಿ, ಪಡೀಲು ಚೈತನ್ಯ ಮಿತ್ರ ವೃಂದದ ಮಾಜಿ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಬನ್ನೂರು, ಸಂಜೀವ ಪೂಜಾರಿ ಕುರೆಮಜಲು, ವಿದುಷಿ ನಯನಾ ವಿ.ರೈ, ಯುವ ಬಂಟರ ಸಂಘದ ಅಧ್ಯಕ್ಷ ಸೀತಾರಾಮ ಕಂಬಳದಡ್ಡ, ಲ್ಯಾನ್ಸಿ ಮಸ್ಕರೇನ್ಹಸ್, ವೇದನಾಥ ಸುವರ್ಣ, ಶಿವನಾಥ ರೈ ಮೇಗಿನಗುತ್ತು, ಎ.ಜೆ.ನಾಯಕ್, ಜಯಪ್ರಕಾಶ್ ನೂಜಿ, ನೇಮಾಕ್ಷ ಸುವರ್ಣ, ಸುರೇಂದ್ರ ರೈ, ಮಹೇಶ್ಚಂದ್ರ ಸಾಲಿಯಾನ್, ಹೊನ್ನಪ್ಪ ಪೂಜಾರಿ, ಬಾಬು ಶೆಟ್ಟಿ ನರಿಯೂರು ಮತ್ತು ಅನೇಕ ಕಲಾಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡು ಶುಭ ಹಾರೈಸಿದರು. ಕುಶಿ ಪ್ರಾರ್ಥಿಸಿದರು. ನಟಿ ಅನುಷಾ ಹೆಗ್ಡೆಯವರ ತಂದೆ ಉಮೇಶ್ ಹೆಗ್ಡೆ ಮತ್ತು ತಾಯಿ ಸ್ವರ್ಣಲತಾ ಹೆಗ್ಡೆ ಮತ್ತು ಸಹೋದರಿ ವಿನುಷಾ ಹೆಗ್ಡೆ ಯವರು ಅತಿಥಿಗಳನ್ನು ಬರಮಾಡಿಕೊಂಡರು.  ಪ್ರೊ. ಬಿ.ಜೆ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ನಾಯಕಿ ನಟಿ ಅನುಷಾ ಹೆಗ್ಡೆ ಅಭಿನಯದ ಎನ್.ಎಚ್. 37 ಕನ್ನಡ ಚಲನಚಿತ್ರವು ಅರುಣಾ ಚಿತ್ರಮಂದಿರದಲ್ಲಿ ಪ್ರತಿದಿನ 11 ಗಂಟೆ ಮತ್ತು 4 ಗಂಟೆಗೆ 2 ದೇಖಾವೆಗಳು ಇರುತ್ತದೆ. ಇದು ಕುಟುಂಬ

ಸಮೇತರಾಗಿ ನೋಡಬಹುದಾದ ಚಲನಚಿತ್ರವಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.