ಒಕ್ಕಲಿಗ ಗೌಡ ಸಂಘದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಸಾಹಿತ್ಯ ಲೋಕದಲ್ಲಿ ಕುವೆಂಪುರವರಿಂದ ಉತ್ತಮ ಸಂದೇಶ-ಜಿನ್ನಪ್ಪ ಗೌಡ ಮಳವೇಲು

Puttur_Advt_NewsUnder_1
Puttur_Advt_NewsUnder_1

 

okkaligaಪುತ್ತೂರು: ಸರಕಾರ ಹಮ್ಮಿ ಕೊಂಡಿರುವ ವಿಶ್ವಮಾನವ ದಿನಾಚರಣೆಗೆ ಪೂರಕವಾಗಿ ದ.28ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿರುವ ಒಕ್ಕಲಿಗ ಗೌಡ ಸಂಘದ ಕಚೇರಿಯಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆ ನಡೆಯಿತು.

ನಿವೃತ್ತ ಬ್ಯಾಂಕ್ ಮೆನೇಜರ್, ಒಕ್ಕಲಿಗ ಗೌಡ ಸಂಘದ ನಿಯೋಜಿತ ಉಪಾಧ್ಯಕ್ಷ ಜಿನ್ನಪ್ಪ ಗೌಡ ಮಳವೇಲುರವರು ಕುವೆಂಪುರವರ ಭಾವಚಿತ್ರದ ಎದುರು ದೀಪ ಬೆಳಗಿಸಿ ಸಾಹಿತ್ಯ ಲೋಕದಲ್ಲಿ ಕುವೆಂಪುರವರು ನಾಡಿಗೆ ನೀಡಿದ ಉತ್ತಮ ಸಂದೇಶವನ್ನು ತಿಳಿಸಿದರು. ಉಪನ್ಯಾಸ ನೀಡಿದ ಉಪನ್ಯಾಸಕ ದಾಮೋದರ್ ಗೌಡ ನಂದಿಲರವರು ಮಾತನಾಡಿ ಕುವೆಂಪುರವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ಹಾಡು ಇಂದು ರಾಜ್ಯದಾದ್ಯಂತ ಎಲ್ಲಾ ಸರಕಾರಿ ಕಾರ‍್ಯಕ್ರಮ, ಶಾಲೆಗಳಲ್ಲಿ ನಾಡಗೀತೆಯಾಗಿ ಹಾಡಲಾಗುತ್ತಿದೆ.90 ವರ್ಷ ಬಾಳಿ ಬದುಕಿದ ಅವರು ಸುಮಾರು ೭೫ಕ್ಕೂ ಅಧಿಕ ದೊಡ್ಡ ದೊಡ್ಡ ಗ್ರಂಥ, ಕಾವ್ಯ, ಸಾಹಿತ್ಯ ರಚಿಸಿದ್ದು, ಅವರಿಗೆ ಲಭಿಸಿದ ಪ್ರಶಸ್ತಿಗಳೊಂದಿಗೆ ಕನ್ನಡದ ಮೊತ್ತ ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗೌಡ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ ನಮ್ಮ ಸಮಾಜದ ಓರ್ವ ಅಪ್ರತಿಮ ವ್ಯಕ್ತಿಯಾಗಿ ಅವರಿಂದಾಗಿ ಸಮಾಜಕ್ಕೂ ಉತ್ತಮ ಗೌರವ ಸಿಕ್ಕಿದೆ ಎಂದರು. ಶ್ರೀ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಗ್ರಾಮ ಭೇಟಿ ಸಂದರ್ಭದಲ್ಲಿ ಪ್ರತಿ ಕಡೆಯಲ್ಲೂ ಕುವೆಂಪುರವರ ವಿಚಾರವನ್ನು ಉಲ್ಲೇಖ ಮಾಡುತ್ತಿದ್ದರು ಎಂದರು. ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಮುಂಗ್ಲಿಮನೆಯವರು ಕುವೆಂಪುರವರ ಕವನ ಸಂಕಲನ ಹಾಡಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸಂಘದ ನಿಯೋಜಿತ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ನಿಯೋಜಿತ ಪ್ರಧಾನ ಕಾರ್ಯದರ್ಶಿ ಮನೋಹರ್ ಕೆ.ವಿ, ಯುವ ಗೌಡ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ನಂದಿಲ, ಮಹಿಳಾ ಘಟಕದ ಅಧ್ಯಕ್ಷೆ ಗೌರಿ ಬನ್ನೂರು, ಪ್ರತಿಭಾ, ಮೀನಾಕ್ಷಿ ಗೌಡ, ಸಂಘದ ಪದಾಧಿಕಾರಿಗಳಾದ ವಿಶ್ವನಾಥ ಗೌಡ, ಶ್ರೀಧರ್ ಗೌಡ ಕಣಜಾಲು, ಪ್ರವೀಣ್ ಕುಂಟ್ಯಾನ, ಸುರೇಶ್ ಕಲ್ಲಾರೆ, ವಾಸುದೇವ ಗೌಡ, ಶ್ರೀಧರ್ ಗೌಡ ಕುಬಳ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ, ಪರಮೇಶ್ವರ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.