ಮುಕ್ವೆ ಶಾಲಾ ವಾರ್ಷಿಕೋತ್ಸವ, ಅಕ್ಷರ ದಾಸೋಹ ಕಟ್ಟಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

mukve2 mukve1ನರಿಮೊಗರು: ಮುಕ್ವೆ ಸ.ಹಿ.ಪ್ರಾ. ಶಾಲೆಯ ಶಾಲಾ ವಾರ್ಷಿ ಕೋತ್ಸವ, ಅಕ್ಷರ ದಾಸೋಹ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ದ.26ರಂದು ಶಾಲೆಯಲ್ಲಿ ನಡೆಯಿತು.

ಉದ್ಘಾಟನೆ: ಶಾಲಾ ಅಕ್ಷರ ದಾಸೋಹ ನೂತನ ಕಟ್ಟಡ ವನ್ನು ತಾ.ಪಂ. ಸದಸ್ಯ ಪರಮೇಶ್ವರ ಭಂಡಾರಿಯವರು ಅತಿಥಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ಶ್ರೀರಾಮ ಕನ್‌ಸ್ಟ್ರಕ್ಷನ್‌ನ ಅಭಿಯಂತರ ಪ್ರಸನ್ನ ಭಟ್ ಪಂಚವಟಿರವರು ಕಾರ್ಯಕ್ರಮಗಳ ಆರಂಭದಲ್ಲಿ ಧ್ವಜಾರೋಹಣಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಎಂ.ರವರು ವಹಿಸಿದ್ದರು. ತಾ.ಪಂ. ಸದಸ್ಯ ಪರಮೇಶ್ವರ ಭಂಡಾರಿ, ಗ್ರಾ.ಪಂ. ಸದಸ್ಯರುಗಳಾದ ಶಾರದಾ, ಇಸಾಕ್ ಎಂ., ಗುರುಪ್ರಸಾದ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಶಾಲಾ ಮುಖ್ಯಗುರು ಅನಸೂಯಾ ಭಾ ಟಿ., ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಪ್ರಸನ್ನ ಭಟ್ ಪಂಚವಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಕುಂಞ, ಸಲಹೆಗಾರ ಎಲಿಕ ಜಯರಾಜ್ ಜೈನ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳನ್ನು ಅಪ್‌ಡೇಟ್ ಮಾಡಬೇಕು: ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿರವರು ಶೈಕ್ಷಣಿಕ ಉಪನ್ಯಾಸ ನೀಡಿದರು. ಭಾರತ ಉದಯೋ ನ್ಮುಖವಾಗಿರುವ ದೇಶ. ಈ ದೇಶಕ್ಕೆ ಉತ್ತಮ ಭವಿಷ್ಯವಿದೆ. ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಸಂಪತ್ತು. ಯಾವ ವಿದ್ಯಾರ್ಥಿಗಳೂ ದಡ್ಡರಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದೆ. ವಿದ್ಯಾರ್ಥಿಗಳನ್ನು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಮಾಡಬೇಕು ಎಂದ ಅವರು, ಜ್ಞಾನಕ್ಕೆ ಮಿತಿ ಇಲ್ಲ. ವಿದ್ಯಾರ್ಥಿಗಳು ಜ್ಞಾನದ ದಿಗಂತವನ್ನು ವಿಸ್ತರಿಸಬೇಕು. ಸಾಮರ್ಥ್ಯವನ್ನು ಗುರು ತಿಸಬೇಕು. ಹಳತರ ಜಾಗದಲ್ಲಿ ಹೊಸತನ್ನು ತರಬೇಕು ಎಂದರು. ಉದ್ಯಮಿ ಉಮೇಶ್ ಕರ್ಕೇರಾ ನಾಡಾಜೆಯವರು ದೀಪ ಪ್ರಜ್ವಲನಗೊಳಿಸಿ ಶುಭಹಾರೈಸಿದರು.

ತಾ.ಪಂ. ಸದಸ್ಯ ಪರಮೇಶ್ವರ ಭಂಡಾರಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಎಂ.ರವರು ಸಭಾಧ್ಯಕ್ಷತೆ ವಹಿಸಿದ್ದರು. ಪುತ್ತೂರು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಸವಣೂರು ವಲಯ ಶಿಕ್ಷಣ ಸಂಯೋಜಕ ಕುಕ್ಕ, ಮಧುಮೇಹ ತಜ್ಞ ಡಾ. ನಝೀರ್ ಅಹಮ್ಮದ್, ಉದ್ಯಮಿ ರಿಚರ್ಡ್ ಡಿಸೋಜ ಮಣಿಯ, ನರಿಮೊಗರು ಸಿ.ಆರ್.ಪಿ. ಕೇಂದ್ರ ಸಮೂಹ ಸಂಪನ್ಮೂಲ ವ್ಯಕ್ತಿ ದೇವಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಕುಂಞ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಪಂಚವಟಿ, ಉಪಾಧ್ಯಕ್ಷ ಗಿರೀಶ್ ಎಂ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ಅನಸೂಯಾ ಭಾ ಟಿ.ರವರು ವರದಿ ವಾಚಿಸಿದರು.

ಬೀಳ್ಕೊಡುಗೆ, ಸನ್ಮಾನ: ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡಿರುವ ಶಿಕ್ಷಕರಾದ ಸುರೇಶ್ ಕುಮಾರ್ ಪಿ.ಎಂ., ಜುಲಿಯಾನ ಮೊರಾಸ್, ಜ್ಯೋತಿ ರೆಬೆಲ್ಲೊರವರನ್ನು ವೇದಿಕೆಯಲ್ಲಿ ಗೌರವಿಸಿ ಬೀಳ್ಕೊಡುಗೆ ನಡೆಸ ಲಾಯಿತು. ಅದೇ ರೀತಿ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಸೋಮಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಎಂ., ಕಾರ್ಯದರ್ಶಿ ಅಶ್ರಫ್ ಮುಕ್ವೆರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕಿಯರಾದ ವಿಜಯಾ ಎಚ್.ಆರ್., ವೇದಾವತಿ ಎ., ವಿಶಾಲಾಕ್ಷಿ ಕೆ., ಸಹಶಿಕ್ಷಕ ಚರಣ್ ಕುಮಾರ್‌ರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಹಿಲನ್ ಲೋಬೋ, ಜಯಶ್ರೀ ಟಿ.ಜಿ., ವಿಮಲಾ, ಉಷಾ ಎಂ., ಪುಷ್ಪಾವತಿ, ನಸೀಮಾರವರು ಸಹಕರಿಸಿದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದರವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ, ದೇವದಾಸ್ ಕಾಪಿಕಾಡ್‌ರವರು ರಚಿಸಿ, ನಟಿಸಿ, ನಿರ್ದೇ ಶಿಸಿದ ’ಯಾನ್ ಪಂಡೆಂದ್ ಪನೊಡ್ಚಿ’ ತುಳು ನಾಟಕ ನಡೆಯಿತು. ಮಧ್ಯಾಹ್ನ, ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.