Breaking News

ಮನರಂಜನಾ ತಾಣವಾಗಿರುವ ’ದಿ ಪುತ್ತೂರು ಕ್ಲಬ್’ ಜನಮನ್ನಣೆಯೊಂದಿಗೆ 3ನೇ ವರ್ಷಕ್ಕೆ ಪಾದಾರ್ಪಣೆ

Puttur_Advt_NewsUnder_1
Puttur_Advt_NewsUnder_1

 

puttur-clubಪುತ್ತೂರು: ಮರೀಲು ಹೊರವಲಯದಲ್ಲಿರುವ ಪುತ್ತೂರಿನ ಹೆಮ್ಮೆಯ ಮನರಂಜನಾ ತಾಣವಾಗಿರುವ ದಿ ಪುತ್ತೂರು ಕ್ಲಬ್ ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ನಿರ್ಜನ ಪ್ರದೇಶವಾಗಿದ್ದ ಈ ಪ್ರದೇಶದಲ್ಲಿ ಸುಮಾರು ಎರಡು ಎಕ್ರೆ ಜಮೀನಿನಲ್ಲಿ ವ್ಯಾಯಾಮ, ಕ್ರೀಡೆ, ಮನೋರಂಜನೆ ಮತ್ತು ವಿಶ್ರಾಂತಿ ಒದಗಿಸುವ ಸೌಲಭ್ಯದೊಂದಿಗೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡ ಈ ಕ್ಲಬ್ ಬಹಳ ಜನಪ್ರಿಯತೆಯನ್ನು ಗಳಿಸಿದ್ದು ಮಾತ್ರವಲ್ಲದೆ ಕೇವಲ ಮೂರು ವರ್ಷದಲ್ಲೇ ಈ ಕ್ಲಬ್ ಬಹಳಷ್ಟು ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರೆ ತಪ್ಪಾಗಲಾರದು. ಪ್ರಸ್ತುತ ಈ ಕ್ಲಬ್ ೫೦೦ ಸದಸ್ಯರನ್ನು ಹೊಂದಿದ್ದು ಅಧ್ಯಕ್ಷ ಡಾ|ದೀಪಕ್ ರೈ, ಕಾರ್ಯದರ್ಶಿ ಪ್ರಭಾಕರ್ ಎ.ಎಂ ಹಾಗೂ ತಂಡದವರ ಸಮರ್ಥ ನಾಯಕತ್ವದಿಂದ ಈ ಕ್ಲಬ್ ಹಂತ ಹಂತದಲ್ಲಿ ಪ್ರಗತಿ ಕಾಣುತ್ತಿದೆ.

ಪುತ್ತೂರು ಕ್ಲಬ್ ವಿನೂತನ ಆಯಾಮವಾಗಿದೆ: ಕ್ಲಬ್ ಎಂದರೆ ಗೆಳೆತನ. ಕ್ಲಬ್ ಎಂದರೆ ಒಕ್ಕೂಟ. ಕ್ಲಬ್ ಎಂದರೆ ಸಂಘಟನೆ. ಹಾಗೆಯೇ ಕ್ಲಬ್ ಎಂದರೆ ಶಿಸ್ತು. ದ ಪುತ್ತೂರು ಕ್ಲಬ್ ಎಂದರೆ ಗೆಳೆತನದ, ಶಿಸ್ತಿನ ಒಕ್ಕೂಟವಾಗಿದೆ. ಜಿಲ್ಲೆಯ ಎರಡನೇ ಅತೀ ದೊಡ್ಡ ನಗರವಾಗಿರುವ ಪುತ್ತೂರು ಎಂಬ ಊರಲ್ಲಿ ನಗರದ ಸಂಸ್ಕೃತಿ ಹಾಗೂ ಹಳ್ಳಿಯ ಗಾಡತನ ಜೊತೆ ಜೊತೆಯಾಗಿ ಸಾಗುತ್ತಿದೆ. ಪುತ್ತೂರಿನ ಜನರು ಶಾಂತಿಪ್ರಿಯರು. ಕಠಿಣ ದುಡಿಮೆಗಾರರು. ಹತ್ತೂರು ಬಿಟ್ಟರೂ ಪುತ್ತೂರು ಬಿಡೆ ಎಂಬಂತಿರುವ ಊರು ಪುತ್ತೂರಾಗಿದೆ. ಬಿಡುವಿನ ವೇಳೆ ಗೆಳೆಯರು, ಕುಟುಂಭಿಕರು ಒಟ್ಟಾಗಿ ಸೇರಿ ಸಮಯ ಕಳೆಯಲು ಇದೊಂದು ಮನರಂಜನಾ ತಾಣವಾಗಿದೆ. ಪುತ್ತೂರಿನ ಜನರ ಖದರ್‌ಗೆ ಈ ಕ್ಲಬ್ ಈಗ ಸ್ಪಷ್ಟ ರೂಪ ತಾಳಿದೆ. ಬಿಡುವಿಲ್ಲದ ದುಡಿಮೆಯ ಮಧ್ಯೆ ಒಂದಷ್ಟು ಸಮಯ ಕಳೆಯಲು ಈ ಕ್ಲಬ್ ವಿನೂತನ ಆಯಾಮವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

10ಕ್ಲಬ್‌ಗಳ ಒಡಂಬಡಿಕೆ: 2014 ಡಿಸೆಂಬರ್ರಂ27ದು ಪುತ್ತೂರಿನ ಜನತೆಗೆ ಹೆಮ್ಮೆಯೊಂದಿಗೆ ಲೋಕಾರ್ಪಣೆಗೊಂಡಿರುವ ಪುತ್ತೂರು ಕ್ಲಬ್ ಈಗ ಜನರ ಕಣ್ಮಣಿಯಾಗಿ ಬೆಳೆದಿದೆ. ಕೇಂದ್ರ ಕಾನೂನು ಸಚಿವರಾಗಿದ್ದ ಡಿ.ವಿ ಸದಾನಂದ ಗೌಡರವರು ಪುತ್ತೂರು ಕ್ಲಬ್ ಅನ್ನು ಉದ್ಘಾಟಿಸಿ ಇಂದಿನ ಯಾಂತ್ರಿಕ ಬದುಕಿನ ಒತ್ತಡದ ನಡುವೆಯೂ ಮನುಷ್ಯನಿಗೆ ನೆಮ್ಮದಿ ಬೇಕಾದರೆ ಇಂತಹ ಕ್ಲಬ್‌ಗಳು ಉತ್ತಮ ವೇದಿಕೆಯಾಗಲಿದೆ ಎಂದು ಶುಭಹಾರೈಸಿದ್ದರು. ಮಾಜಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕಿ ಶಕುಂತಳಾ ಶೆಟ್ಟರವರ ಸಹಿತ ಹಲವು ಗಣ್ಯರು ಆಗಮಿಸಿ ಕ್ಲಬ್ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹರಸಿದ್ದರು. ಕಳೆದ ವರ್ಷ ಬೇಲೂರು ಪ್ಲಾಂಟರ‍್ಸ್ ಕ್ಲಬ್ ಮತ್ತು ಹಾಸನ ಕ್ಲಬ್‌ಗಳೊಂದಿಗೆ ಒಡಂಬಡಿಕೆ ಇದ್ದಂತಹ ಈ ಕ್ಲಬ್ ಪ್ರಸ್ತುತ ಬೆಂಗಳೂರು, ಮೈಸೂರು, ಹಾಸನ ಹಾಗೂ ಉಡುಪಿ ಜೆಲ್ಲೆಯನ್ನೊಳಗೊಂಡ 10 ಕ್ಲಬ್‌ಗಳಾದ ಹಾಸನ ಕ್ಲಬ್ ಹಾಸನ, ಬೇಲೂರು ಪ್ಲಾಂಟರ‍್ಸ್ ಕ್ಲಬ್, ಮಹಾಲಕ್ಷ್ಮೀ ಲೇಔಟ್ ರೆಸಿಡೆನ್ಸ್ ಫಾರಂ, ಕರ್ನಾಟಕ ರಾಜ್ಯ ಬಿಲಿಯಾರ್ಡ್ಸ್ ಅಸೋಸಿಯೇಶನ್, ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಶನ್, ವಿಜಯನಗರ ಕ್ಲಬ್ ಬೆಂಗಳೂರು, ದಿ ಮಲ್ಲೇಶ್ವರಮ್ ಅಸೋಸಿಯೇಶನ್ ಬೆಂಗಳೂರು, ಕೆ.ಸಿ ಪ್ಯಾಲೇಸ್ ಕ್ಲಬ್ ಬೆಂಗಳೂರು, ವಿಜಯನಗರ ಸ್ಪೋರ್ಟ್ಸ್ ಕ್ಲಬ್ ಮೈಸೂರು ಕ್ಲಬ್, ವ್ಯಾಲ್ಯೂ ವೀವ್ ಮಣಿಪಾಲ್‌ಗಳ ಒಡಂಬಡಿಕೆಯಿರುವುದು ಈ ಕ್ಲಬ್‌ಗಿರುವ ವೈಶಿಷ್ಟ್ಯಗಳಲ್ಲೊಂದಾಗಿದೆ.

ಲಭ್ಯವಿರುವ ಸವಲತ್ತುಗಳು: ಆರಂಭದಲ್ಲಿ ಸುಸಜ್ಜಿತ ಸಸ್ಯಾಹಾರಿ ಹಾಗೂ ಮಾಂಸಹಾರಿ ರೆಸ್ಟೋರೆಂಟ್, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್, ಸುಸಜ್ಜಿತ ಮಲ್ಟಿ ಜಿಮ್, ಓಪನ್ ಟೆನ್ನಿಸ್ ಕೋರ್ಟ್, ಬಿಲಿಯರ್ಡ್ಸ್, ಕೇರಂ, ಸುಸಜ್ಜಿತ ಹವಾನಿಯಂತ್ರಿತ ಕೊಠಡಿಗಳು, ೫೦ ಸದಸ್ಯರಿರುವ ಪಾರ್ಟಿ ಹಾಲ್, ಚೆಸ್, ಶಟಲ್ ಕೋರ್ಟ್, ಟೇಬಲ್ ಟೆನ್ನಿಸ್, ಬ್ರಿಡ್ಜ್ ಗೇಮ್ ಮುಂತಾದ ಸವಲತ್ತುಗಳನ್ನು ಕ್ಲಬ್ ಹೊಂದಿದ್ದು ಪ್ರಸ್ತುತ ಎರಡು ಹವಾನಿಯಂತ್ರಿತ ವಾಸ್ತವ್ಯದ ಕೊಠಡಿಗಳು, ಮೇಲ್ಛಾವಣಿ ಸಭಾಂಗಣ ಮತ್ತು ವ್ಯವಸ್ಥಿತ ಕಾರ್ಡ್ ರೂಂ, ಟೆನ್ನಿಸ್ ಕ್ಲೇ ಕೋರ್ಟ್, ಮಕ್ಕಳ ಆಟದ ಅಂಗಣ, ಉದ್ಯಾನವನವನ್ನು ಈಗಾಗಲೇ ಸಿದ್ಧತೆಗೊಳಿಸಿ ಅದರ ಉಪಯೋಗ ಮಾಡಲಾಗುತ್ತಿದೆ. ಸದಸ್ಯರಿಗೆ ನೀಡಿದ ಭರವಸೆಯಂತೆ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಸದಸ್ಯರಿಂದ ಮೆಚ್ಚುಗೆಗೂ ಪಾತ್ರವಾಗಿದೆ. ಕ್ಲಬ್‌ಗೆ ಸೇರಲಿಚ್ಚಿಸುವವರಿಗೆ ಸದಸ್ಯತನವನ್ನು ಪಡೆಯಲು ಮುಕ್ತ ಅವಕಾಶವಿದೆ. ಮುಂದಿನ ದಿನಗಳಲ್ಲಿ ಸ್ವಿಮ್ಮಿಂಗ್ ಪೂಲ್ ಹಾಗೂ ಖಾಸಗಿ ಕೋಟೇಜಸ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕ್ಲಬ್ ಅಧ್ಯಕ್ಷ ಡಾ|ದೀಪಕ್ ರೈರವರು ‘ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

ಯಶಸ್ವಿ ಕಾರ್ಯಕ್ರಮಗಳು: ಪ್ರತಿ ವರ್ಷ ಪುತ್ತೂರು ಕ್ಲಬ್ ಕೆಲವೊಂದು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ವರ್ಷವೂ ಸದಸ್ಯರಿಗೆ ಅನೇಕ ಇವೆಂಟ್‌ಗಳನ್ನು ಹಮ್ಮಿಕೊಂಡು ಯಶ್ವಗೊಳಿಸಿದೆ ಮಾತ್ರವಲ್ಲದೆ ಮೆಚ್ಚುಗೆಗೆ ಪಾತ್ರವಾಗಿದೆ. ಶಟಲ್ ಟೂರ್ನಮೆಂಟ್, 44 ಆಫ್ ರೋಡಿಂಗ್(ಜೀಪ್ ರ‍್ಯಾಲಿ), ಮಿನಿ ಮ್ಯಾರಥಾನ್, ಕುಕ್ಕಿಂಗ್ ಸ್ಪರ್ಧೆಗಳೊಂದಿಗೆ ಹಲವಾರು ಸ್ಪರ್ಧೆಗಳನ್ನು ಪುತ್ತೂರು ಕ್ಲಬ್ ಹಮ್ಮಿಕೊಂಡು ಶ್ಲಾಘನೆಗೆ ಪಾತ್ರವಾಗಿದೆ.

ಸಮರ್ಥ ತಂಡ: ಡಾ|ದೀಪಕ್ ರೈರವರು ಈ ಕ್ಲಬ್‌ನ ಅಧ್ಯಕ್ಷರಾಗಿ, ಪ್ರಭಾಕರ್ ಎ.ಎಂ ಕಾರ್ಯದರ್ಶಿಗಳಾಗಿ, ಕೋಶಾಧಿಕಾರಿಯಾಗಿ ದಿವಾಕರ್ ಕೆ.ಪಿ, ಉಪಾಧ್ಯಕ್ಷರಾಗಿ ಸಚ್ಚಿದಾನಂದ, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಕೆ.ಪಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೂಪೇಶ್ ಶೇಟ್, ನಿತಿನ್ ಪಕ್ಕಳ, ಗಣೇಶ್ ಕಾಮತ್, ಪ್ರಶಾಂತ್ ಶೆಣೈ, ಓಸ್ಕರ್ ಆನಂದ್, ವಿಕ್ಟರ್ ಮಾರ್ಟಿಸ್, ಪ್ರಸನ್ನಕುಮಾರ್ ಶೆಟ್ಟಿ, ಗಂಗಾಧರ್ ರೈ, ಭುಜಂಗ ಆಚಾರ್ಯ, ವಿಶ್ವಾಸ್ ಶೆಣೈರವರು ಕಾರ್ಯನಿರ್ವಹಿಸುತ್ತಿದ್ದು ಕ್ಲಬ್‌ನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಕ್ಲಬ್‌ನ ಅಭಿವೃದ್ಧಿಯಲ್ಲಿ ನನ್ನೊಂದಿಗೆ ತಂಡದ ಪ್ರತಿಯೊಬ್ಬ ಸದಸ್ಯರೂ ಕೈಜೋಡಿಸುವ ಮೂಲಕ ನೀಡಿದ ಸಹಕಾರಕ್ಕೆ ಹಾಗೂ ಸಾರ್ವಜನಿಕರು ಕೂಡ ಈ ಕ್ಲಬ್ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಪ್ರೋತ್ಸಾಹ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರವನ್ನು ಆಶಿಸುತ್ತಿದ್ದೇವೆ. 2017 ನೂತನ ವರ್ಷ ಎಲ್ಲರಿಗೂ ಹರ್ಷದಾಯಕವನ್ನು ಉಂಟುಮಾಡಲಿ, ಒಳಿತ್ತನ್ನು ತರಲಿ ಎಂಬುದು ನಮ್ಮ ಹಾರೈಕೆಯಾಗಿದೆ.

-ಡಾ|ದೀಪಕ್ ರೈ,

ಅಧ್ಯಕ್ಷರು, ದಿ ಪುತ್ತೂರು ಕ್ಲಬ್

ರೂ.1 ಲಕ್ಷ ವೆಚ್ಚದ ’ಈಗಲ್ ಐ’ ಕಂಟ್ರೋಲ್ ಪ್ಯಾನೆಲ್ ಕೊಡುಗೆ

ಪುತ್ತೂರು ಕ್ಲಬ್ ಸಾಮಾಜಿಕ ಜವಾಬ್ದಾರಿಯುಳ್ಳ ಚಟುವಟಿಕೆಗಳತ್ತಲೂ ಕಣ್ಣು ಹಾಯಿಸಿದೆ. ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸಮರ್ಥ ಕೋಚಿಂಗ್ ನೀಡುತ್ತಿರುವ ಸಂಸ್ಥೆಯಾದ ಪುತ್ತೂರು ಯೂನಿಯನ್ ಕ್ಲಬ್‌ಗೆ ಧನಸಹಾಯ ಮಾಡಿದೆ. ಸಮಾಜದಲ್ಲಿನ ಕ್ರಿಮಿನಲ್ ಚಟುವಟಿಕೆಗಳನ್ನು ಹತ್ತಿಕ್ಕಲು ಪೋಲಿಸರೊಂದಿಗೆ ಪುತ್ತೂರು ಕ್ಲಬ್ ಕೈಜೋಡಿಸಿದ್ದು ತಮ್ಮ ಜವಾಬ್ದಾರಿಯನ್ನು ಏನೆಂದು ಪ್ರಚುರಪಡಿಸಿದೆ. ಸೂಕ್ಷ್ಮತೆಯುಳ್ಳ ಪ್ರದೇಶಗಳಾದ ಕೂರ್ನಡ್ಕ, ದರ್ಬೆ ಜಂಕ್ಷನ್, ಕಿಲ್ಲೆ ಮೈದಾನ, ನೆಲ್ಲಿಕಟ್ಟೆ, ಕಬಕ ಮುಂತಾದೆಡೆ ಒಟ್ಟು 9 ಕಡೆಗಳಲ್ಲಿ ‘ಈಗಲ್ ಐ’ ಎಂಬ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಬಹಳ ನಿಖರತೆಯುಳ್ಳ ಈ ಸಿಸಿ ಕ್ಯಾಮೆರಾವು ರಾತ್ರಿಯಾಗಲಿ ಅಥವಾ ಹಗಲಾಗಲಿ ಸುಮಾರು 100ಮೀ ದೂರದ ತನಕ ಸ್ಪಷ್ಟ ಚಿತ್ರಣವನ್ನು ಒದಗಿಸುವುದು ಈ ಕ್ಯಾಮೆರಾದ ವೈಶಿಷ್ಟ್ಯವಾಗಿದೆ. ಇನ್ನೊಂದು ವೈಶಿಷ್ಟ್ಯವೆಂದರೆ ಅಳವಡಿಸಿದ ಯಾವುದೇ ಕ್ಯಾಮೆರಾವಾಗಲಿ ಪೋಲಿಸ್ ಸ್ಟೇಷನ್‌ನಿಂದಲೇ ಕ್ಯಾಮೆರಾವನ್ನು ಯಾವ ಕಡೆಗೂ ತಿರುಗಿಸಬಹುದಾದ ಸುಮಾರು ಒಂದು ಲಕ್ಷ ಮೌಲ್ಯದ ’ರಿಮೋಟ್ ಕಂಟ್ರೋಲ್ ಪ್ಯಾನೆಲ್  ಅನ್ನು ಪುತ್ತೂರು ಕ್ಲಬ್ ಈಗಾಗಲೇ ಪೋಲಿಸ್ ಸ್ಟೇಷನ್‌ಗೆ ಹಸ್ತಾಂತರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.