ಬ್ರಹ್ಮನಗರ: ಬಾಲಕಾರ್ಮಿಕ ನಿಷೇಧಕ್ಕೆ ಕಾನೂನು ಅರಿವು

Puttur_Advt_NewsUnder_1
Puttur_Advt_NewsUnder_1

brahmanagaraಪುತ್ತೂರು: ಕಾರ್ಮಿಕ ಇಲಾಖೆ ಪುತ್ತೂರು ವತಿಯಿಂದ ನಗರಸಭೆ ವ್ಯಾಪ್ತಿಯ ಬ್ರಹ್ಮನಗರದ ಸಾರ್ವಜನಿಕ ರಿಗಾಗಿ ಬಾಲ ಮತ್ತು ಕಿಶೋರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಮತ್ತು ಬಾಲ ಕಾರ್ಮಿಕ ನಿಷೇಧಕ್ಕೆ ಸಂಬಂಧಿಸಿ ವಿವಿಧ ಕಾನೂನು ಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಬ್ರಹ್ಮನಗರ ಶ್ರೀ ದುರ್ಗಾ ಮಾರಿಯಮ್ಮ ದೇವಸ್ಥಾನದ ವಠಾರ ದಲ್ಲಿ ದ.29ರಂದು ನಡೆಯಿತು.

ಸಭಾಧ್ಯಕ್ಷತೆ ವಹಿಸಿದ ನಗರಸಭಾ ಸದಸ್ಯ ಶಕ್ತಿ ಸಿನ್ಹಾ ಕಾರ್ಯ ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಕೋರಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ತಾಲೂಕು ಸೀನಿಯರ್ ಲೇಬರ್

ಇನ್ಸ್‌ಪೆಕ್ಟರ್ ರಾಮಚಂದ್ರ ಎಚ್. ಕಾರ್ಮಿಕ ಇಲಾಖೆಯ ವಿವಿಧ ಕಾನೂನುಗಳ ಅರಿವಿನ ಮಾಹಿತಿ ನೀಡಿ ಮಾತನಾಡುತ್ತಾ, ’ಬಾಲ ಕಾರ್ಮಿಕ ಕಾಯ್ದೆ 1986ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಈಗ ಬಾಲ ಮತ್ತು ಕಿಶೋರ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986ಎಂದು ತಿದ್ದುಪಡಿ ಮಾಡಿ, 18 ವರ್ಷದವರೆಗಿನ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವಂತಿಲ್ಲ ಎಂದು ಕಲಂ 3ಎರಲ್ಲಿ ಸೇರಿಸಿರುವುದರಿಂದ 18 ವರ್ಷದ ಒಳಗಿನ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವಂತಿಲ್ಲ. ಈ ಬಗ್ಗೆ ರಾಜ್ಯ ಸರಕಾರಗಳಿಂದ ನಿಯಮಾವಳಿ ರಚಿಸಲಾಗುತ್ತಿದೆ ಎಂದರು.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಧಮಯಂತಿ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ರೇಷ್ಮೆ ಇಲಾಖೆಯ ರೇಷ್ಮೆ ಪ್ರದರ್ಶಕ ಆರ್.ಎಸ್. ನಾಯ್ಕ್ ಶುಭ ಕೋರಿದರು. ವೇದಿಕೆಯಲ್ಲಿ ಬ್ರಹ್ಮನಗರದ ನಿವಾಸಿಗಳಾದ ಅಶೋಕ್ ಮತ್ತು ಸೋಮನಾಥ ಉಪಸ್ಥಿತರಿದ್ದರು.

ಸವಿತಾ ಪ್ರಾರ್ಥಿಸಿದರು. ಕೆ. ಬಾಬು, ಶೀಲಾ, ಕಾರ್ಮಿಕ ಇಲಾಖೆಯ ಪೂವಪ್ಪ ಗೌಡ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಇಲಾಖಾ ನಿವೃತ್ತ ನೌಕರ ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.