Breaking News

ನ್ಯಾಯಾಧೀಶ ಇಬ್ರಾಹಿಂ ಎಂ ಮುಜಾವರ್‌ಗೆ ಪದೋನ್ನತಿ-ವಕೀಲರ ಸಂಘದಿಂದ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ibrahimಪುತ್ತೂರು: ಪುತ್ತೂರು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಇಬ್ರಾಹಿಂ ಎಂ. ಮುಜಾವರ್‌ರವರು ಪದೋನ್ನತಿ ಹೊಂದಿ ಹಾವೇರಿ ಹಾನಗಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಪುತ್ತೂರು ವಕೀಲರ ಸಂಘದಿಂದ  ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ವಕೀಲರ ಸಂಘದ ನೂತನ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎನ್.ರಾಮಚಂದ್ರರವರು ಇಬ್ರಾಹಿಂ ಮುಜಾವರ್‌ರವರಿಗೆ ಶಾಲು, ಹಾರ, ಸ್ಮರಣಿಕೆ, ಜೇನು ಮತ್ತು ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ ನೀಡಿ ಗೌರವಿಸಿ ಮಾತನಾಡಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ನ್ಯಾಯಾಧೀಶರು ಮುಂದೆ ಇನ್ನೂ ಉನ್ನತ ಮಟ್ಟಕ್ಕೆ ಏರುವಂತಾಗಲಿ ಎಂದು ಹಾರೈಸಿದರು.  ಹಿರಿಯ ನ್ಯಾಯಾಧೀಶರಾದ ಸಿ.ಕೆ.ಬಸವರಾಜ್, ನಾಗರಾಜ್, ಸಿವಿಲ್ ಎಂ. ವಿಜಯ್, ನ್ಯಾಯವಾದಿಗಳಾದ ರಾಮ್‌ಮೋಹನ್ ರಾವ್, ಮಹೇಶ್ ಕಜೆ, ಶ್ರೀಗಿರೀಶ್ ಮಳಿ, ನಝೀರ್ ಬೆದ್ರೋಡಿ, ಮನೋಹರ್ ಕೆ.ವಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ.ಜಗನ್ನಿವಾಸ್ ರಾವ್, ಸಾಯಿರ ಜುಬೈರ್, ಗೌರಿ ಶಂಕರ್ ಶ್ಯಾನ್ ಭೋಗ್ ಅನಿಸಿಕೆ ವ್ಯಕ್ತಪಡಿಸಿದರು. ವಕೀಲರ ಸಂಘದ ಖಜಾಂಜಿ ಕುಮಾರ್‌ನಾಥ್, ಉಪಾಧ್ಯಕ್ಷ ಮಹಾಬಲ ಗೌಡ, ದೀಪಕ್ ಬೊಳುವಾರು, ಯಶವಂತ್ ಕಾಂತಿಲ, ಸಿದ್ದಿಕ್, ಜಯಾನಂದ  ಕೆ, ದೇವಾನಂದ್ ಅತಿಥಿಗಳನ್ನು ಗೌರವಿಸಿದರು. ವಕೀಲೆ ವನಿತರವರು ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೃಷ್ಣಪ್ರಸಾದ್ ವಂದಿಸಿದರು. ಮಹಾಬಲ ರೈ ಕೊಮ್ಮಂಡ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕೆ. ಸವಣೂರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.