Breaking News

ಪುತ್ತೂರು ನಗರ ಠಾಣೆ , ಸಂಚಾರ ಠಾಣೆಯ ಮೂವರಿಗೆ ಎ.ಎಸ್.ಐ ಆಗಿ ಮುಂಭಡ್ತಿ ಹಾಲಿ ಠಾಣೆಯಲ್ಲೇ ಮುಂದುವರಿಕೆ

Puttur_Advt_NewsUnder_1
Puttur_Advt_NewsUnder_1

policeಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರ ಜೀಪು ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಿಂಗಪ್ಪ ಗೌಡ, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಅವರ ಜೀಪು ಚಾಲಕರಾಗಿವ ಉಮೇಶ್ ರಾವ್ ಮತ್ತು ಸಂಚಾರ ಪೊಲೀಸ್ ಠಾಣೆಯ ಇಂಟರ್‌ಸೆಪ್ಟರ್ ವಾಹನದ ಚಾಲಕರಾಗಿರುವ ರಾಘವರವರು ಎ.ಎಸ್.ಐ ಆಗಿ ಮುಂಭಡ್ತಿ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 26 ಮಂದಿ ಭಡ್ತಿ ಮುಂಭಡ್ತಿ ಆದೇಶದಂತೆ ಮುಂದೆ ಈಗಿರುವ ಠಾಣೆಗಳಲ್ಲಿಯೇ ಚಾಲಕ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ.

ಲಿಂಗಪ್ಪ ಗೌಡ: ಕಡಬ ಐತ್ತೂರು ಗ್ರಾಮದ ದಿ.ಚಿನ್ನಪ್ಪ ಗೌಡ ಮತ್ತು ವೆಂಕಮ್ಮ ದಂಪತಿ ಪುತ್ರರಾಗಿರುವ ಲಿಂಗಪ್ಪ ಗೌಡರು ತನ್ನ ಪೊಲೀಸ್ ಸೇವೆಯ ಪ್ರಾರಂಭದಲ್ಲಿ ಮಂಗಳೂರು ಶಸಸ್ತ್ರ ಮೀಸಲು ಪಡೆಯಲ್ಲಿ 10 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ಆ ಬಳಿಕ 6 ವರ್ಷ ಬಂಟ್ವಾಳ, 5 ವರ್ಷ  ಉಪ್ಪಿನಂಗಡಿ, 5 ವರ್ಷ ಮೂಲ್ಕಿಯಲ್ಲಿ ಪೊಲೀಸ್ ಇಲಾಖೆಯ ಜೀಪು ಚಾಲಕರಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಪತ್ನಿ ಜಾನಕಿ, ಪುತ್ರಿಯರಾದ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ಯೋಗಿತ, ಕಡಬ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಮಮತ ಮತ್ತು ಹರ್ಷಿತರವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

ರಾಘವ: ಮೂಲತಃ ಕಾಸರಗೋಡು ನಿವಾಸಿಯಾಗಿರುವ ರಾಘವರವರು ಮಂಗಳೂರಿನ ಸಶಸ್ತ್ರ ಮೀಸಲು ಪಡೆಯಲ್ಲಿ 10 ವರ್ಷ ಕರ್ತವ್ಯ ನಿರ್ವಹಿಸಿ ಬಳಿಕ ಕುಂದಾಪುರ, ಪುತ್ತೂರು ನಗರ ಠಾಣೆ, ಎ.ಎಸ್ಪಿ ಕಚೇರಿ ಯಾಗಿ ಸಂಚಾರ ಠಾಣೆಯ ಇಂಟರಸೆಪ್ಟರ್ ವಾಹನದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪತ್ನಿ ಉಷಾ, ಪುತ್ರರಾದ ವಿವೇಕಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿರುವ ರಕ್ಷಿತ್ ಮತ್ತು 9ನೇ ತರಗತಿ ಓದುತ್ತಿರುವ ರಕ್ಷಣ್‌ರವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

ಉಮೇಶ್ ರಾವ್: ಸಾಲ್ಮರ ನಿವಾಸಿಯಾಗಿರುವ ಉಮೇಶ್ ರಾವ್‌ರವರು ಪ್ರಾರಂಭದಲ್ಲಿ ಮಂಗಳೂರು ಸಶಸ್ತ್ರ ಮೀಸಲು ಪಡೆಯಲ್ಲಿ 10 ವರ್ಷ ಕರ್ತವ್ಯ ನಿರ್ವಹಿಸಿದ್ದು, ಬಳಿಕ ಮೈಸೂರು, ಬಂಟ್ವಾಳ, ಸುಳ್ಯ, ಅರಣ್ಯ ಸಂಚಾರ ದಳದಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ಜೀಪ್‌ನಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿ. ದಾಮೋದರ ರಾವ್‌ರವರ ಪುತ್ರರಾದ ಉಮೇಶ್‌ರವರು ತಾಯಿ ರಾಜೀವಿ, ಪತ್ನಿ ಉಷಾ ಕುಮಾರಿ, ಪುತ್ರರಾದ ಮಸ್ಕತ್‌ನಲ್ಲಿರುವ ಸಂದೇಶ್ ಹಾಗೂ ಸುಳ್ಯದಲ್ಲಿ ಇಂಜಿನಿಯರ್ ಆಗಿರುವ ಕೀರ್ತೇಶ್‌ರವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.