ಗೋಳಿತ್ತೊಟ್ಟು: ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ, ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1

akshara-dasohaನೆಲ್ಯಾಡಿ: ಗೋಳಿತ್ತೊಟ್ಟು ದ.ಕ.ಜಿ.ಪಂ.ಉನ್ನತ ಹಿ.ಪ್ರಾ.ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ, ಮಕ್ಕಳ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ದ.30ರಂದು ನಡೆಯಿತು.

ಬೆಳಿಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಡಾ.ರಾಮಕೃಷ್ಣ ಭಟ್‌ರವರು ಧ್ವಜಾರೋಹಣ ನೆರವೇರಿಸಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ ಸುಳ್ಯ ಶಾಸಕ ಎಸ್.ಅಂಗಾರರವರು ಅಕ್ಷರ ದಾಸೋಹ ಕೊಠಡಿ ಉದ್ಘಾಟಿಸಿದರು. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ ದೀಪ ಪ್ರಜ್ವಲನೆಗೊಳಿಸಿದರು. ಬಳಿಕ ನಡೆದ ಸಭಾ ಕಾರ‍್ಯಕ್ರಮದಲ್ಲಿ ಮಾತನಾಡಿದ ಸುಳ್ಯ ಶಾಸಕ ಎಸ್.ಅಂಗಾರ, ಹಿಂದೆ ಪಾಠದ ಜೊತೆ ಮಕ್ಕಳಿಗೆ ಶಿಕ್ಷಕರು ನೀತಿ ಪಾಠ ಹೇಳಿಕೊಡುತ್ತಿದ್ದರು. ಇದರಿಂದಾಗಿ ಮಕ್ಕಳಲ್ಲಿ ಮಾನವೀಯತೆ ಬೆಳೆಯುತ್ತಿತ್ತು. ಇಂದು ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಆದ್ದರಿಂದ ಇಂದು ಮಕ್ಕಳಲ್ಲಿ ಭಾವನಾತ್ಮಕ ಸಂಬಂಧ ಬೆಳೆಸುವ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು. ದೇಶದಲ್ಲಿ 100ರೂಪಾಯಿಯಲ್ಲಿ ಶೇ.40 ಮಾತ್ರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ಶೇ.60 ವೇತನಕ್ಕೆ ಖರ್ಚು ಆಗುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಈ ಬಗ್ಗೆ ಸರಕಾರ ಚಿಂತಿಸಬೇಕಾಗಿದೆ ಎಂದು ಅಂಗಾರ ಹೇಳಿದರು.

ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ಬಹುತೇಕ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ‍್ಯಗಳ ಕೊರತೆ ಇದೆ. ಎಸ್‌ಡಿಎಂಸಿಗಳು ಸಕ್ರೀಯಗೊಂಡು ಹಳೆವಿದ್ಯಾರ್ಥಿಗಳಿಂದ, ವಿದ್ಯಾಭಿಮಾನಿಗಳಿಂದ ಆರ್ಥಿಕ ವ್ಯವಸ್ಥೆ ಕ್ರೋಢೀಕರಣ ಮಾಡಿಕೊಂಡು ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು. ಎಸ್‌ಡಿಎಂಸಿಗಳು ಸಕ್ರೀಯಗೊಂಡಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ ಮಾತನಾಡಿ, ಮಕ್ಕಳ ಗ್ರಾಮಸಭೆಯಲ್ಲಿ ಗೋಳಿತ್ತೊಟ್ಟು ಶಾಲೆಯ ಮಕ್ಕಳು ಸಲ್ಲಿಸಿದ್ದ ಬೇಡಿಕೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಗೋಳಿತ್ತೊಟ್ಟು ಶಾಲೆ ಅಭಿವೃದ್ಧಿಗೊಳ್ಳುತ್ತಿದ್ದು ಊರಿನ ಶಾಲೆ ಎಂಬ ಪ್ರೀತಿಯಿಂದ ಎಲ್ಲರೂ ಶಾಲೆಯ ಮತ್ತಷ್ಟೂ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು.

ಗೋಳಿತ್ತೊಟ್ಟು ತಾ.ಪಂ.ಸದಸ್ಯೆ ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ, ನೆಲ್ಯಾಡಿ ಕ್ಷೇತ್ರದ ತಾ.ಪಂ.ಸದಸ್ಯೆ ಉಷಾ ಅಂಚನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು. ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಕೆ.ಪಿ., ಸದಸ್ಯೆ ತುಳಸಿ ಕುದ್ಕೋಳಿ, ಬಜತ್ತೂರು ಕ್ಲಸ್ಟರ್‌ನ ಸಿಆರ್‌ಪಿ ಗಣೇಶ್ ನಡುವಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಡಾ.ರಾಮಕೃಷ್ಣ ಭಟ್‌ರವರು, ಶಾಲೆಯಲ್ಲಿ ಅಡಿಕೆ ತೋಟ ರಚನೆ, ಜಗಲಿಗೆ ಟೈಲ್ಸ್ ಅಳವಡಿಕೆ, ಹೂತೋಟ ನಿರ್ಮಾಣ, ಅಕ್ಷರದಾಸೋಹ ಕೊಠಡಿ ನಿರ್ಮಾಣ, ಧ್ವಜಸ್ತಂಭ ನಿರ್ಮಾಣ ಕಾರ‍್ಯಗಳು ಹಂತಹಂತವಾಗಿ ನಡೆದಿದೆ. ಶಾಲೆಯ ಈ ಪ್ರಗತಿಗೆ ಜನಪ್ರತಿನಿಧಿಗಳು, ಊರಿನ ಸಮಸ್ತರು ಕಾರಣ. ಸರಕಾರಿ ಶಾಲೆ ಎಂಬ ತಿರಸ್ಕಾರ ಬೇಡ, ಪ್ರೋತ್ಸಾಹ ನೀಡಿ ಎಂದು ಹೇಳಿದರು. ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈ ವೇಳೆ ಬಹುಮಾನ ನೀಡಿ ಗೌರವಿಸಲಾಯಿತು. ಶಿಕ್ಷಕಿ ವತ್ಸಲಾ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ವಾಣಿ ಕೆ., ಸದಸ್ಯರುಗಳಾದ ಲಲಿತಾ, ಶೇಖರ ಗೌಡ, ಸೀತಾರಾಮ, ಆನಂದ, ಆಯಿಷಾರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಮುಖ್ಯ ಶಿಕ್ಷಕ ಶೀನಪ್ಪ ನಾಯ್ಕ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಸೀಮಾ ವಂದಿಸಿದರು. ಶಿಕ್ಷಕಿ ತೇಜಸ್ವಿ ಕಾರ‍್ಯಕ್ರಮ ನಿರೂಪಿಸಿದರು. ಮಕ್ಕಳು ಪ್ರಾರ್ಥಿಸಿದರು.

ನೀರಿನ ಟ್ಯಾಂಕ್‌ಗೆ ಗುದ್ದಲಿಪೂಜೆ: ತಾ.ಪಂ.ಸದಸ್ಯೆ ತೇಜಸ್ವಿನಿ ಶೇಖರ ಗೌಡರ 80 ಸಾವಿರ ರೂ.ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ರೂ.೮೦ಸಾವಿರ ವೆಚ್ಚದ ನೀರಿನ ಟ್ಯಾಂಕ್ ರಚನೆಗೆ ಈ ವೇಳೆ ಸುಳ್ಯ ಶಾಸಕ ಎಸ್.ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.

ಸಾಂಸ್ಕೃತಿಕ ಕಾರ‍್ಯಕ್ರಮ: ಬೆಳಿಗ್ಗೆ ಹಾಗೂ ಸಂಜೆ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಿತು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.