ಎ.ಸಿ ನೇತೃತ್ವದಲ್ಲಿ ಪಿಂಚಣಿ ಅದಾಲತ್-ಫಲಾನುಭವಿಗಳಿಗೆ ಪಿಂಚಣಿ ಪತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1

acಪುತ್ತೂರು: ಪಿಂಚಣಿ ಅದಾಲತ್ ಕಾರ್ಯಕ್ರಮ ದ.28ರಂದು ಮಿನಿ ವಿಧಾನ ಸೌಧದಲ್ಲಿನ ತಹಶೀಲ್ದಾರ್ ಕೋರ್ಟ್ ಹಾಲ್‌ನಲ್ಲಿ ನಡೆಯಿತು.  ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಮೀಷನರ್ ರಘುನಂದನ ಮೂರ್ತಿಯವರು ಮಾತನಾಡಿ ಪಿಂಚಣಿ ಪತ್ರ ಇರುವ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲವಾದರೆ ದೂರು ನೀಡಿ. ಅದಾಲತ್ ಮೂಲಕ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು. ಒಟ್ಟು 102 ಮಂದಿಗೆ ಅವರು ಪಿಂಚಣಿ ಪತ್ರ ವಿತರಣೆ ಮಾಡಿದರು. ಉಪತಹಶೀಲ್ದಾರ್ ಶ್ರೀಧರ್ ಕೆ, ಕಂದಾಯ ಅಧಿಕಾರಿ ದಯಾನಂದ ಹೆಗ್ಡೆ, ಪ್ರಥಮ ದರ್ಜೆ ಸಹಾಯಕ ಮಲ್ಲಿಕ್, ವಿ.ಎ ವೆಂಕಟೇಶ್ ಮತ್ತು ಇತರ ಗ್ರಾಮಾಂತರ ಮಟ್ಟದ ವಿ.ಎಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

102 ಪಿಂಚಣಿ ಪತ್ರ ವಿತರಣೆ

ವಿಧವಾ ವೇತನ ಪತ್ರ 35, ಅಂಗವಿಕಲರ ಪತ್ರ10, ಸಂಧ್ಯಾಸುರಕ್ಷಾ 53, ಮನಸ್ವಿನಿ 3 ಸೇರಿದಂತೆ ಒಟ್ಟು 102 ಮಂದಿಗೆ ಪಿಂಚಣಿ ಪತ್ರ ವಿತರಣೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.